ನಂದವಾಡಗಿ ನೀರಾವರಿ ಯೋಜನೆಯ ಬಗ್ಗೆ ಹಿರೇನಗನೂರಿನಲ್ಲಿ ರೈತರ ಸಭೆ.

 

ಹಟ್ಟಿ: ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಸರ್ವಜನಿಕ ಕಟ್ಟೆಯಲ್ಲಿ.ನಂದಾವಾಡಗಿ ನೀರಾವರಿ ಯೋಜನೆಯ ಕುರಿತು ಹಿರೇನಗನೂರಿನ ಹಿರಿಯರು ಮುಖಂಡರು. ರೈತರು.ಮತ್ತು ಯುವಕರು ಸಣ್ಣ ಸಭೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶರಣಗೌಡ ಬಸಾಪುರ್ ನಂದಾವಾಡಗಿ ನೀರಾವರಿ ಯೋಜನೆ ಗುರುತು ಸ್ಪಷ್ಟವಾಗಿ ರೈತರಿಗೆ ಮನಮುಟ್ಟುವಂತೆ ಮಾತನಾಡಿದರು. ನಂದಾವಾಡಗಿ ನೀರಾವರಿ ಯೋಜನೆ 2017ರಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಶಂಕುಸ್ಥಾಪನೆ ಮಾಡಿದರು.

ಈ ಯೋಜನೆಯು 2022 ಕ್ಕೆ ಮುಕ್ತಾಯವಾಗಬೇಕಾಗಿದ್ದು. ದುರದೃಷ್ಟವಶ ಇನ್ನೂ ಶೇಕಡ 50ರಷ್ಟು ಕೆಲಸ ಆಗಿಲ್ಲ. ನಂದಾವಾಡಗಿ ನೀರಾವರಿ ಯೋಜನೆ ಸುಮಾರು 60 ಹಳ್ಳಿಗಳು.27 ಸಾವಿರ ರೈತರು. 36,000 ಎಕ್ಟರ್ ಭೂಮಿಗೆ ನೀರುಣಿಸುವ ಯೋಜನೆ ಇದಾಗಿದ್ದು.ಇದಕ್ಕೆ ಪೂರಕವಾಗಿ ದಿನಾಂಕ 9.3.2025 ರಂದು ಸಂತೆ ಕಲ್ಲೂರಿನ ಶ್ರೀಘನ ಮಟೇಶ್ವರ ದೇವಸ್ಥಾನದಲ್ಲಿ. ಬೆಳಗ್ಗೆ 9:30ಕ್ಕೆ ನಂದಾವಾಡಗಿ ನೀರಾವರಿ ಯೋಜನೆಗೆ ಸಂಬಂಧಪಟ್ಟ ಹಳ್ಳಿಯ ರೈತರು ಗ್ರಾಮದ ಮುಖಂಡರು ಯುವಕರು ಬುದ್ದಿ ಜೀವಿಗಳು ಸಂತೆಕಲ್ಲೂರಿನ

ಘನಮಟೇಶ್ವರ ದೇವಸ್ಥಾನದಲ್ಲಿ ನಡೆಯುವಂತ ಪೂರ್ವಭಾವಿ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಶರಣುಗೌಡ ಬಸಾಪುರ ಹಾಗೂ ಗವಿಸಿದ್ದಪ್ಪ ಸಂತೆಕಲ್ಲೂರು ಗ್ರಾಮದವರನ್ನು ಉದ್ದೇಶಿಸಿ ಮಾತನಾಡಿದರು.

 ಈ ಸಂದರ್ಭದಲ್ಲಿ ಹಿರೇನಗನೂರು ಗ್ರಾಮದ ಶಿವನಗೌಡ ಪಾಟೀಲ್.ತಿಮ್ಮನ ಗೌಡ ಚುಕ್ಕನಟ್ಟಿ. ವಿರೂಪಾಕ್ಷಪ್ಪ ಮಾಲಿ ಪಾಟೀಲ್.ಚಿನ್ನಪ್ಪ ಕೋಟ್ರಿಕಿ. ಬಸಣ್ಣ ಸೂಗೂರು. ಅಮರೇಶ್ ಬೆಂಚಮಟ್ಟಿ. ಗಂಗಪ್ಪ ದಡ್ಡಿಹಾಳ.ದೇವಪ್ಪ ಮಿಂಚಿ.ಹಾಗೂ ಗ್ರಾಮದ ಅನೇಕ ರೈತರು ಹಾಗೂ ಯುವಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*