ಹಟ್ಟಿ ಚಿನ್ನದ ಗಣಿಯಲ್ಲಿ ನದಾಫ್/ಪಿಂಜಾರ್ ಸಂಘದ ವತಿಯಿಂದ .ವರದಿಗಾರರಿಗೆ ಪತ್ರಿಕೆ ಹೇಳಿಕೆ.


ಹಟ್ಟಿ ಚಿನ್ನದ ಗಣಿ :ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್ ಸಂಘ(ರಿ) ಲಿಂಗಸಗೂರು ತಾಲೂಕ ಘಟಕದ ವತಿಯಿಂದ ಹಾಗೂ ಹಟ್ಟಿ ಚಿನ್ನದ ಗಣಿ ನದಾಫ್/ಪಿಂಜಾರ್ ಸಂಘದ ವತಿಯಿಂದ.ಇಂದು ಹಟ್ಟಿ ಚಿನ್ನದ ಗಣಿಯಲ್ಲಿ ನದಾಫ್/ಪಿಂಜಾರ್ ಲಿಂಗಸ್ಗೂರು ತಾಲೂಕ ಅಧ್ಯಕ್ಷರಾದ ಟಿ ಅಮಿನುದ್ದೀನ್ ಜಾಂತಾಪುರ.ಹಾಗೂ ಸಂಘದ ಸದಸ್ಯರು.ಪತ್ರಿಕಾ ವರದಿಗಾರರಿಗೆ ಪತ್ರಿಕಾ ಹೇಳಿಕೆ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ನದಾಫ್/ಪಿಂಜಾರ್ ಸಮುದಾಯದ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು.ನಮ್ಮ ಜನಾಂಗದವರ ಕುಲ ಕಸುಬು ಹತ್ತಿಯಿಂದ ಹಾಸಿಗೆ.ದಿಂಬು.ಹಗ್ಗ.ಕಣ್ಣಿ.ಇತ್ಯಾದಿ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದು ಇವು ಜೀವನುಪಾಯದ ದಾರಿಯಾಗಿರುತ್ತದೆ.ಎಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.ಹಾಗೂ ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು.ಆರ್ಥಿಕವಾಗಿ.ಶೈಕ್ಷಣಿಕವಾಗಿ.ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿರುತ್ತದೆ.ಅದೇ ರೀತಿ ನಮ್ಮ ಸಮಾಜದವರು ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ.1993ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1 ರಲ್ಲಿ ಮೀಸಲಾತಿಯನ್ನು ನೀಡಿರುತ್ತಾರೆ.ನಮ್ಮ ಜನಾಂಗದವರು ಪ್ರ ವರ್ಗ-1 ರಲ್ಲಿ ಇತರೆ 117 ಜಾತಿಯವರೊಂದಿಗೆ ಸ್ಪರ್ಧೆ ಮಾಡಿ ಶೇಕಡ 4ರ ಒಟ್ಟು ಮೀಸಲಾತಿಯಲ್ಲಿ ಸರಕಾರಿ ಹುದ್ದೆಗೆ ಆಯ್ಕೆ ಆಗುವುದು ಕಷ್ಟ ಸಾಧ್ಯವಾಗಿರುತ್ತದೆ.ಆದುದರಿಂದ ನದಾಫ್/ ಪಿಂಜಾರ್ ಜನಾಂಗದವರು ಇದುವರೆಗೂ ಲೋಕ ಸೇವಾ ಆಯೋಗದ ನೇರ ನೇಮಕಾತಿಯಲ್ಲಿ.ಕೆಎಎಸ್ ಹುದ್ದೆಗೆ ಆಯ್ಕೆ ಆಗಿರುವುದಿಲ್ಲ.ಹಾಗೂ ಕೇಂದ್ರದ ಐಎಎಸ್ / ಐಪಿಎಸ್ ಹುದ್ದೆಗಳಿಗೂ ಸಹ ಆಯ್ಕೆ ಆಗಿರುವುದಿಲ್ಲ.

2023 ರಲ್ಲಿ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗ-1ರ ನದಾಫ್/ಪಿಂಜಾರ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶ ವಾಗಿರುತ್ತದೆ.ಅದೇ ರೀತಿ ಕಳೆದ ಎರಡು ವರ್ಷಗಳಿಂದ ಸಂಬಂಧಪಟ್ಟ ಸಚಿವರಿಗೆ ಅನೇಕ ಸಾಲ ಮನವಿಗಳನ್ನು ಸಲ್ಲಿಸಲಾಗಿತ್ತು.2024ರಲ್ಲಿ ಹಾಗೂ 18-02-2025 ರಂದು ವಿಧಾನಸೌಧದ ಸಮ್ಮೇಳನ ಸಂಬಾಂಗಣದಲ್ಲಿ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಮಾನ್ಯ ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ.ರಾಜ್ಯ ಹಿಂದುಳಿದ ವರ್ಗಗಳ ಸಂಘಟನೆಗಳ ಹಾಗೂ ಮುಖಂಡರಗಳೊಂದಿಗೆ ನಡೆದ ಸಭೆಯಲ್ಲಿಯು ಸಹ ಭಾಗಿಯಾಗಿ ವಿಷಯವನ್ನು ಪ್ರಸ್ತಾಪಿಸಲಾಗಿತ್ತು.ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು.

 ಕರ್ನಾಟಕ ರಾಜ್ಯ ನದಾಫ್/ ಪಿಂಚರ್ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರುಗಳಿಗೆ ಖುದ್ದಾಗಿ ಭೇಟಿ ಮಾಡಿ ಸಹ ನಮ್ಮ ಕೋರಿಕೆಗಳಿಗೆ ಹಾಗೂ ಮನವಿಗಳನ್ನು ಪರಿಗಣಿಸದೆ. ಇದುವರೆಗೂ ಯಾವುದೇ ಅನುದಾನವನ್ನು ಕೊಟ್ಟಿರುವುದಿಲ್ಲ.ಇದು ಅತ್ಯಂತ ಸೂಚನೆಯ ಸಂಗತಿ.ರಾಜ್ಯದ ಎಲ್ಲಾ ಜನತೆಗೆ ಸಮಪಾಲು ಸಮ ಬಾಳು ಎಂದು ವಾಕ್ಯ ಘೋಷಣೆ ಮಾಡಿದ ಈ ಸರಕಾರ ಅಲ್ಪಸಂಖ್ಯಾತರಲ್ಲಿ ಅತ್ಯಂತ ಹಿಂದುಳಿದ ನಮ್ಮ ನದಾಫ್/ ಫಿಂಜರ್ ಸಮುದಾಯದವರಿಗೆ ನ್ಯಾಯದೊರಕಿಸುವಲ್ಲಿ ವೈಫಲ್ಯತೆ ಕಾಣುತ್ತಿದೆ ಎಂದು ಸುದ್ದಿಗಾರರ ಜೊತೆ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ್ ಸಂಘದ ಲಿಂಗಸಗೂರು ತಾಲೂಕ್ ಅಧ್ಯಕ್ಷರಾದ ಟಿ ಅಮೀನುದ್ದೀನ್ ಜಾಂತಾಪುರ. ಮೌಲಾಲಿ.ಎಚ್ ಹುಸೇನ್ ಬಾಷಾ.ಕಾರ್ಮಿಕ ಮುಖಂಡರು ಮೌನುದ್ದೀನ್ ಬೂದಿನಾಳ.ಬಿ ಅಮಿನುದ್ದಿನ್.ಸೈಫುಲ್ಲಾ ಸಾಬ್ ಮ್ಯಾಕಲದೊಡ್ಡಿ.ಬಡೇಸಾಬ್ ಆಟೋ.ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*