ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಸ್ಕಿ : ಪುರಸಭೆ ಉಪಾಧ್ಯಕ್ಷೆ ವಿದ್ಯಾರ್ಥಿಗಳನ್ನು ಕಳಶ ಬೆಳಗುವ ಮೂಲಕ ವಿಶೇಷವಾಗಿ ಸ್ವಾಗತ

ಇಮೇಜ್
ಮಸ್ಕಿ : ಪಟ್ಟಣದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಶಾಲೆಯಲ್ಲಿ 2025-2026 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸರಳ ಸುಂದರವಾಗಿ ಆಚರಣೆ ಮಾಡಲಾಯಿತು. ಸುಂದರ ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಬುಕ್ಕಣ್ಣ ಇವರು ಮಕ್ಕಳಿಗೆ ಆರತಿ ಬೆಳಗುವುದರ ಮೂಲಕ ಶಾಲೆಗೆ ಬರಮಾಡಿಕೊಂಡರು.   ಶಾಲೆಯ ಬೂದಾನಿಗಳಾದ ಅರ್ಜುನ್ ಸಿಂಗ್ ಮಾಲಿ ಪಾಟೀಲ್ ಇವರು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯನ್ನು ಮಾಡಿದರು. ಮಸ್ಕಿಯ ಸಿ. ಆರ್ .ಪಿ ಆದ ಶ್ರೀರಾಮಸ್ವಾಮಿ ತಳಕಲ್ ಇವರು ಮಕ್ಕಳಿಗೆ ಶುಭಾಶಯ ಕೋರುವ ಮೂಲಕ ಪ್ರತಿದಿನ ಶಾಲೆಗೆ ಬಂದು ಒಳ್ಳೆಯ ವಿದ್ಯಾವಂತರಾಗಿ, ಬುದ್ದಿವಂತರಾಗಿ,ಸಮಾಜಕ್ಕೆ ಒಳ್ಳೆ ಪ್ರಜೆಗಳಾಗಬೇಕೆಂದು ಹರಸಿದರು. ನಂತರ ಮುಖ್ಯ ಗುರುಗಳಾದ ಶ್ರೀಮತಿ ಶ್ರೀಕಾಂತಮ್ಮ ಅವರು ಎಲ್ಲ ಮಕ್ಕಳು ಪ್ರತಿದಿನ ಶಾಲೆಗೆ ಬರಬೇಕು ಮತ್ತು ಪ್ರತಿಯೊಬ್ಬ ಮಕ್ಕಳನ್ನು ಕರೆದುಕೊಂಡು ಬರಬೇಕು ದಾಖಲಾತಿಯು ಆರಂಭವಾಗಿದ್ದು ಆದಷ್ಟು ಬೇಗ ಎಲ್ಲರೂ ಶಾಲೆಗೆ ದಾಖಲಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಮಧುಮತಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು  ಇದೇ ಸಂದರ್ಭದಲ್ಲಿ ಮಲ್ಲಮ್ಮ ಮತ್ತು ಯಶೋಧ ಶಿಕ್ಷಕಿಯರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

ಹಿರಿಯ ಪತ್ರಕರ್ತರು ಚಂದ್ರಶೇಖರ್ ಕಟಗಿಹಳ್ಳಿಮಠ ನಿಧನ

ಇಮೇಜ್
  ಕೊಟ್ಟೂರಿನ ಜನತಾವಾಣಿ ವರದಿಗಾರರಾದ 25 ವರ್ಷ ಸೇವೆ ಶ್ರೀ ಚಂದ್ರಶೇಖರ್ ಕಟಗಿಹಳ್ಳಿಮಠ 55 ವರ್ಷ ವಯಸ್ಸು ಇವರು 30.05.2025 ರಂದು ಬೆಳಗಿನಜಾವಾ  ನಿಧನಹೊಂದಿರುತ್ತಾರೆ.     ಮೃತರು , ಪತ್ನಿ, ಇಬ್ಬರು ಪುತ್ರಿಯರು, ಅಳಿಯ, ಸೋದರ, ಸೋದರಿ, ಅಪಾರ ಬಂಧು - ಮಿತ್ರರನ್ನು ಹಾಗೂ ಕರ್ನಾಟಕ ಪ್ರಸ್ ಕ್ಲಬ್ ಪತ್ರಿಕಾ ಮಾಧ್ಯಮದವರು,ಶಿಷ್ಯ ವರ್ಗವನ್ನು ಅಗಲಿದ್ದಾರೆ.    ಮೃತರ ಅಂತ್ಯಕ್ರಿಯೆಯು ಶನಿವಾರ 31.05.2025 12.30ಕ್ಕೆ ರಂದು ಕೊಟ್ಟೂರಿನ ರುದ್ರಭೂಮಿಯಲ್ಲಿ ನಡೆಯಲಿದೆ.

ಕೊಟ್ಟೂರು ರೈಲ್ವೇ ಸರಕು ಸಾಗಣಿಕೆ ರ್‍ಯಾಂಕ್ ಪಾಯಿಂಟ್ ಪರಿಶೀಲನೆ : ಸಂಸದ ತುಕಾರಾಮ್

ಇಮೇಜ್
  *ಅವಿಭಜಿತ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಒತ್ತುಕೊಡುತ್ತೇನೆ. ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು * ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಸಂಸದರಾದ ತುಕಾರಾಮ್‌ರವರು ಉದ್ಘಾಟನೆ ನೆರವೇರಿಸಿದರು.  ಕಟ್ಟಡ ಮತ್ತು ಕೃಷಿ ಕಾರ್ಮಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಇದರ ಸದುಪಯೋಗ ಪಡೆಯಬಹುದು. ನಂತರ ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಹೋಗಿ ರಸಗೊಬ್ಬರ ಮತ್ತು ಸರಕುಗಳನ್ನು ಲೋಡ್ ಮಾಡುವ ರ್‍ಯಾಕ್ ಪಾಯಿಂಟ್ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು.  ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದರು ಮಾತನಾಡುತ್ತಾ, ಇಂದಿರಾ ಕ್ಯಾಂಟಿನ್ ಮುಖ್ಯವಾಗಿ ಕೂಲಿ ಕಾರ್ಮಿಕರ, ಬಡವರ ಹಸಿವನ್ನು ನೀಗಿಸಲೆಂದು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹೇಳಿದ ಮಾತಿನಂತೆ ನಡೆದು ತೋರಿಸಿದ್ದೇವೆ. ಬಡ ಕೃಷಿ ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ನಾನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೮೦ ಲಕ್ಷ ರೂ.ಗಳನ್ನು ಸಂಸದರ ಅನುದಾನ ಮೀಸಲಾಗಿರಿಸಿದ್ದೇನೆ. ಇದರಲ್ಲಿ ಅಂಗವಿಕಲರಿಗಾಗಿ ಬೈಕ್‌ಗಳನ್ನು ವಿತರಿಸಲಾಗುವುದು ಎಂದರು. ಸರ್ಕಾರಿ ಸಮುದಾಯ ಆ...

ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ : ಎಲ್ಲೆಂದರಲ್ಲಿ ಕಸ

ಇಮೇಜ್
* ಅನಿರ್ದಿಷ್ಟಾವಧಿ ಮುಷ್ಕರ ಹೋರಾಟಕ್ಕೆ ಪೌರ ನೌಕರರಿಂದ ಬಾಹ್ಯ ಬೆಂಬಲ*  "ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಧ್ವನಿ ಎತ್ತುತ್ತೇನೆ. ಅಲ್ಲದೇ ಈ ಮುಷ್ಕರಕ್ಕೆ ನನ್ನ ಬೆಂಬಲವೂ ಇದೆ ಎಂದು ಹೇಳಿದರು " ಕೊಟ್ಟೂರು : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರ ಮತ್ತೇ  ಗುರುವಾರ ಮುಂದುವರಿದಿದೆ.  ಪೌರಕಾರ್ಮಿಕರ ಮುಷ್ಕರಕ್ಕೆ ಕೊಟ್ಟೂರು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಮಾಡುವ ಸಾಲಗಟ್ಟಿಗಿಂತ ಸ್ಥಿತಿಯಲ್ಲಿರುವ ವಾಹನಗಳು ಸ್ಥಗಿತ, ಪಟ್ಟಣದಲ್ಲೆಲ್ಲಾ ಕಸದ ರಾಶಿಗಳು ಎದ್ದುಕಾಣುತ್ತಿವೆ. ಕೂಡಲೇ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಪಟ್ಟಣವೆಲ್ಲಾ ಕಲುಷಿತಗೊಂಡು, ಗಬ್ಬು ನಾರುವ ಪರಿಸ್ಥಿತಿಗೆ ತಲುಪುತ್ತದೆ. ಜನರು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗುವ ಮುನ್ನ ಇತ್ತ ಕಡೆ ಗಮನ ಹರಿಸಬೇಕಾಗಿದೆ. ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೂರನೇ ದಿನದ ಹೋರಾಟವನ್ನು ಮುಂದುವರಿಸಿದರು. ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವ ಭರವಸೆಯಿದೆ. ರಾಜ್ಯಾಧ್ಯಕ್ಷರು ಮುಷ್ಕರವನ್ನು ಹಿಂಪಡೆಯಲು ತಿಳಿಸುವವರೆಗೆ ಮುಷ್ಕರ ನಡೆಯುತ್ತದೆ ಎಂದು ಎಂ. ಕೊಟ್ರೇಶ್ ಪತ್ರಿಕೆ...

ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವವರೆಗೆ ಧರಣಿ ಹಿಂಪಡೆಯಲ್ಲ : ಶಿವಣ್ಣ ಒತ್ತಾಯ

ಇಮೇಜ್
  ಮಸ್ಕಿ : ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಇಲ್ಲಿಯ ಪುರಸಭೆ ಕಚೇರಿ ಎದುರು ಬುಧುವಾರ ಎರಡನೇ ದಿನದ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ಪೌರ ಕಾರ್ಮಿಕರನ್ನು ರಾಜ್ಯ ಸರಕಾರಿ ನೌಕರರು ಎಂದು ಪರಿಗಣಿಸಬೇಕು, ಎಲ್ಲ ನೌಕರರಿಗೆ ಎಸ್ಎಫ್‌ಸಿ ವೇತನ ನೀಡುವುದು, ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದರು.  ಈ ಸಂದರ್ಭದಲ್ಲಿ ಧರಣಿ ನಿರತ ಮಸ್ಕಿ ಪುರಸಭೆಯ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರ್ಚಕರು ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಿ : ಡಾ.ಮಲ್ಲಪ್ಪ.ಕೆ.ಯರಗೋಳ

ಇಮೇಜ್
  ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆದುಕೊಳ್ಳಲು ಆನ್-ಲೈನ್ ಅರ್ಜಿ ಸಲ್ಲಿಸಿ ಎಂದು ತಹಶಿಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.  ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರ ರವರ ಆದೇಶದನ್ವಯ  ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ವೀಕ ಭತ್ಯೆ ಪಾವತಿಸಲು ತಾಲೂಕಿನ ಎಲ್ಲಾ ಆರ್ಚಕರು ತಮ್ಮ ಅರ್ಜಿಯನ್ನು ಆನ್-ಲೈನ್ ನಲ್ಲಿ ಸಲ್ಲಿಸಬೇಕು.ಮಸ್ಕಿ ತಾಲೂಕಿನ ತಸ್ತಿಕ್ ಭತ್ಯೆ ಪಡೆಯುತ್ತಿರುವ ಎಲ್ಲಾ ಅರ್ಚಕರು ತಮ್ಮ ಕೆ.ವೈ.ಸಿ. ದಾಖಲೆಗಳಾದ ಆಧಾರ ಕಾರ್ಡ, ತಸ್ತಿಕ್ ಭತ್ಯೆ ಪಡೆಯುತ್ತಿರುವ ಅರ್ಚಕ ಕುಟುಂಬ ಸದಸ್ಯರುಗಳ ಒಪ್ಪಿಗೆ ಪತ್ರ, ಮತ್ತು ಬ್ಯಾಂಕ ಪಾಸ ಬುಕ್, ಇನಾಂ ಪ್ರತಿ,ದೇವಸ್ಥಾನದ ಮುಂಭಾಗ ನಿಂತಿರುವ ಅರ್ಚಕರ ಛಾಯಚಿತ್ರದೊಂದಿಗೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಹಶೀಲ್ದಾರರಿಂದ ಆರ್ಚಕರ ಧೃಡೀಕರಣ ಪ್ರಮಾಣ ಪತ್ರ ಪಡೆದು ಕೊಂಡು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.ನಂತರದ ದಿನಗಳಲ್ಲಿ ಅರ್ಚಕರ ಕುಂದುಕೊರತೆಗಳ ಸಭೆ ಕರೆದು ಅರ್ಚಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರದಿ ಫಲಶೃತಿ ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

ಇಮೇಜ್
  * ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ನಿಂದ ,ಇಂದಿರಾ ಕ್ಯಾಂಟಿನ್ ಉದ್ಘಾಟನೆಯಲ್ಲಿ,ರಾಜಕೀಯ ಎರಚಾಟವು * "ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ ನೇಮಿರಾಜ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು " ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ನೇಮಿರಾಜನಾಯ್ಕ ಹಾಗೂ ಸಂಸದ ತುಕಾರಾಮ್ ಉದ್ಘಾಟನೆಯನ್ನು ಗುರುವಾರ ಮಾಡಿದರು.  ಆಸ್ಪತ್ರೆಯ ಹೆಬ್ಬಾಗಿಲಿನ ಪಕ್ಕದಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿರುವುದು ಕ್ಷೇತ್ರದ ಶಾಸಕರಿಗೆ ಇರುಸುಮುರುಸು ಉಂಟಾಯಿತು. ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ಹಾಕಿರುವುದರಿಂದ ಅದನ್ನು ತೆರವುಗೊಳಿಸುವವರೆಗೆ ಶಾಸಕ ನೇಮಿರಾಜನಾಯ್ಕ ಒಳಗಡೆ ಬರಲಿಲ್ಲ ಕೂಡಲೇ ಅಧಿಕಾರಿಗಳು ತೆರವುಗೊಳಿಸಿದ ನಂತರ ಶಾಸಕರು ಆಗಮಿಸಿದರು. ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ? ಸ್ಥಳೀಯ ರಾಜಕೀಯ ಎರಚಾಟವು ಸಾರ್ವಜನಿಕರ ಗಮನಕ್ಕೆ ಬಂದಿತು. ಹಸಿವುಮುಕ್ತ ರಾಜ್ಯವನ್ನು ಮಾಡುತ್ತೇವೆಂಬ ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ನೇತೃತ್ವ...

ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವವರೆಗೆ ಧರಣಿ ಹಿಂಪಡೆಯಲ್ಲ : ಶಿವಣ್ಣ ಒತ್ತಾಯ

ಇಮೇಜ್
  ಮಸ್ಕಿ : ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಇಲ್ಲಿಯ ಪುರಸಭೆ ಕಚೇರಿ ಎದುರು ಬುಧುವಾರ ಎರಡನೇ ದಿನದ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ಪೌರ ಕಾರ್ಮಿಕರನ್ನು ರಾಜ್ಯ ಸರಕಾರಿ ನೌಕರರು ಎಂದು ಪರಿಗಣಿಸಬೇಕು, ಎಲ್ಲ ನೌಕರರಿಗೆ ಎಸ್ಎಫ್‌ಸಿ ವೇತನ ನೀಡುವುದು, ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದರು.  ಈ ಸಂದರ್ಭದಲ್ಲಿ ಧರಣಿ ನಿರತ ಮಸ್ಕಿ ಪುರಸಭೆಯ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

*ಎರಡನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ *

ಇಮೇಜ್
ಕೊಟ್ಟೂರು :ಕೊಟ್ಟೂರು ಪಪಂ ಕಚೇರಿ ಮುಂಭಾಗದಲ್ಲಿ ಸಂಘದ ಪೌರಕಾರ್ಮಿಕರು ಸೇರಿದಂತೆ ಪದಾಧಿಕಾರಿಗಳು, ಪೌರ ಕಾರ್ಮಿಕ ಎರಡನೇ ದಿನ ಮುಂದುವರೆದಿದ್ದು ಮುಷ್ಕರದಿಂದ ಕಚೇರಿ ಕೆಲಸಗಳು ಸೇರಿ ಎಲ್ಲ ಸೇವೆಗಳು ಸ್ಥಗಿತಗೊಂಡಿದೆ. ರಾಜ್ಯ ಪೌರ ನೌಕರರ ಸಂಘದ ರಾಜ್ಯಧ್ಯಕ್ಷ ಕೆ ಪ್ರಭಾಕರ್ ಅವರು ಬುಧವಾರ ಮಾತನಾಡಿ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ೧೯ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ರಾಜ್ಯ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು ಈ ಮುಷ್ಕರದ ಬಗ್ಗೆ 29.05.2025 ರಂದು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಚರ್ಚೆಸಲು ಕೋರಿದರೆ ನಮ್ಮ ನೌಕರರ ಸಂಘದ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದರು  ಈ ಸಂದರ್ಭದಲ್ಲಿ ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಕೊಟ್ರೇಶ್, ಉಪಾಧ್ಯಕ್ಷ ಎಚ್.ಶಂಕ್ರಪ್ಪ, ಕಾರ್ಯದರ್ಶಿ ಮಂಜುನಾಥ ಎ, ಸಂಘಟನಾಕಾರ್ಯದರ್ಶಿ ಎನ್.ವಿಜಯಕುಮಾರ, ಖಜಾಂಚಿ ಎಸ್.ಪರುಸಪ್ಪ, ಬಿ.ರವಿ, ಬಿ.ರಮೇಶ ನಿರ್ದೇಶಕರಾದ ಸುಭದ್ರಮ್ಮ, ಸುಮಿತ್ರಮ್ಮ, ಈ ದಿನದ ಮುಷ್ಕರಕ್ಕೆ ೬೦ ಜನ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.  ಕೊಟ್ -1 ಈ ಮುಷ್ಕರದ ಹಿನ್ನೆಲೆಯಿಂದ ಪಟ್ಟಣದಲ್ಲಿ ಸ್ವಚ್ಛತೆ ಮತ್ತು ಇತರೇ ಸ್ಥಳೀಯ ಕೆಲಸಗಳಿಗೆ ತೊಂದರೆಯಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಸಂ...

ಆರೋಗ್ಯ ಜಾಗೃತಿ ಮೂಡಿಸಲು ಇಳಿ ವಯಸ್ಸಿನಲ್ಲೂ ಸೈಕಲ್ ಜಾಥಾ : ಶಂಕರಪ್ಪ ಯಮನಪ್ಪ ಕೊಡತೆ

ಇಮೇಜ್
  ಮಸ್ಕಿ : ಬಡವರ ವಾಹನ ಎಂದು ಕರೆಸಿಕೊಳ್ಳುವ ಸೈಕಲ್‌ ಮೋಜು ಕೆಲ ವರ್ಷಗಳ ಹಿಂದೆ ಮಕ್ಕಳು, ಯುವಕರು, ಹಿರಿಯರು ಎನ್ನುವ ಭೇದ ಭಾವವಿಲ್ಲದೆ ಅವರ ಬದುಕಿನ ಭಾಗವಾಗಿದ್ದ ಸೈಕಲ್‌ಗಳು ಈಗ ಮೂಲೆ ಸೇರಿವೆ. ಆ ದಿನಗಳಲ್ಲಿ ಸೈಕಲ್‌ಗೆ ಬಣ್ಣದ ಕಾಗದ , ಸ್ಟಿಕ್ಕರ್‌ ಕಟಿಂಗ್‌, ಹೊಸ ರೀತಿ ಬೆಲ್‌ಗಳನ್ನು ಅಳವಡಿಸಿ ಸ್ನೇಹಿತರೊಂದಿಗೆ ಓಡಾಡುತ್ತಿದ್ದ ಸಂಭ್ರಮ ಈಗಿನ ಮಕ್ಕಳಲ್ಲಿ ಕಾಣ ಸಿಗುತ್ತಿಲ್ಲ. ಬಿದ್ದು ಎದ್ದು ಸೈಕಲ್‌ ಓಡಿಸುವ ಸಂಭ್ರಮ ಈಗಿಲ್ಲವಾಗಿದೆ. ಆದರೆ ಇಲ್ಲೊಬ್ರು ಐತಿಹಾಸಿಕ ಸ್ಥಳಗಳ ಭೇಟಿಗಾಗಿ ಇಳಿ ವಯಸ್ಸಿನಲ್ಲೂ ಸೈಕಲ್ ಸವಾರಿ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. 25 ಕಿ.ಮೀ ದೂರದ ಲಿಂಗಸಗೂರು ನಿಂದ ಬಿರು ಬಿಸಿಲಿನಲ್ಲಿ ಮಸ್ಕಿ ಪಟ್ಟಣದ ಐತಿಹಾಸಿಕ ಅಶೋಕ ಶಿಲಾಶಾಸನ ಸ್ಥಳದ ವೀಕ್ಷಣೆಗಾಗಿ ಸೈಕಲ್ ಸವಾರಿ ಯಲ್ಲಿ ಬಂದ 48 ವರ್ಷದ ಶಂಕರಪ್ಪ ಯಮನಪ್ಪ ಕೊಡತೆ ಇವರು  ಮೂಲತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದವರು ಪ್ರಸ್ತುತ ಲಿಂಗಸಗೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ಇದ್ದಾಗ ಸುತ್ತ ಮುತ್ತಲಿನ ವಿಶೇಷ ಸ್ಥಳಗಳಿಗೆ ಸೈಕಲ್ ಮೂಲಕ ಭೇಟಿ ನೀಡುವುದು ಇವರ ಹವ್ಯಾಸ ವಾಗಿದೆ. ತಮ್ಮ ಗೆಳೆಯ ಮಜಾಲಟ್ಟಿ ಸರ್ಕಾರಿ  ಪಿ.ಯು. ಕಾಲೇಜಿನ ಉಪನ್ಯಾಸಕರ ಪ್ರೇರಣೆ ಯಿಂದ ಸಾಮಾಜಿಕ, ಮತ್ಯು ಆರ್ಥಿಕ ಆರೋಗ್ಯ ಕಾಪಾಡುವುದು,ಪರಿಸರ ಮಾಲಿನ್ಯ...

ಮಸ್ಕಿ : ರೈತ ಬಾಂಧವರಿಗೆ ಬೀಜ ವಿತರಣೆ

ಇಮೇಜ್
ಮಸ್ಕಿ : ಮಂಗಳವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಲಿಂಗಸ್ಗೂರು ಉಪ ಕೃಷಿ ನಿರ್ದೇಶಕರು ನಯೀಮ್ ಹುಸೇನ್,ಪ್ರಭಾರಿ ಸಹಾಯಕ  ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ ಇವರ ನೇತೃತ್ವದಲ್ಲಿ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಮಾಡಲಾಯಿತು. NSC TS-3R ತೊಗರಿ ಹಾಗೂ GK-2002 ಸೂರ್ಯಕಾಂತಿ ಬೀಜ ಸಂಪೂರ್ಣ ದಾಸ್ತಾನು ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ಕ್ಷತ್ರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅಮರೇಗೌಡ ಕೃಷಿ ಅಧಿಕಾರಿ, ವೈ.ಬಿ.ಕ್ಷತ್ರೀ,ರೈತ ಸಂಪರ್ಕ ಕೇಂದ್ರ ಮಸ್ಕಿ ಸಿಬ್ಬಂದಿಗಳಾದ ಪ್ರಸಾದ್, ರಾಜೇಶ್, ಸಿದ್ದರಾಮೇಶ, ರಮೇಶ ಹಾಗೂ ರೈತ ಸಂಘದ ಮುಖಂಡರು ವಿಜಯ ಬಡಿಗೇರ್ ,ತಾಯಪ್ಪ, ಆಲಮಪ್ಪ ವಿವಿಧ ಗ್ರಾಮದ ರೈತ ಬಾಂಧವರು ಸೇರಿದಂತೆ ಇತರರು ಇದ್ದರು.

ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಮುಷ್ಕರಕ್ಕೆ ನಿರ್ಲಕ್ಷ್ಯ..?

ಇಮೇಜ್
 *ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ* "ಪಟ್ಟಣ ಪಂಚಾಯಿತಿ ಆಡಳಿತಕ್ಕೆ, ಮುಷ್ಕರದ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಅಡಚಣೆ" ಕೊಟ್ಟೂರು : ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ೧೯ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ನೀರು ಸರಬರಾಜು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿ ಮೇ ೨೭ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಕೊಟ್ರೇಶ್ ಮಂಗಳವಾರ  ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸಂಘದಿಂದ ಈಗಾಗಲೇ ಅನೇಕ ಬಾರಿ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ಮೊದಲೇ ಸರ್ಕಾರಕ್ಕೆ ತಿಳಿಸಿದಂತೆ ಈ ಮುಷ್ಕರವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು. ಖಾಲಿ ಇರುವ ನೌಕರರ ಹುದ್ದೆಗಳ ನೇಮಕಾತಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ವಾಹನಗಳಿಗೆ ಚಾಲಕರ ಹುದ್ದೆಗಳನ್ನು ಮಂಜೂರು ಮಾಡುವುದು, ಖಾಯಂ ಆಕೌಂಟೆಂಟ್ ಹುದ್ದೆ ಮತ್ತು ಇತರೆ ೧೯ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯಿಸಲಾಗಿದೆ. ಮೇ ೨೭ರಂದು ಕೊಟ್ಟೂರು ಪಪಂ ಕಚೇರಿ ಮುಂಭಾಗದಲ್ಲಿ ಸಂಘದ ಪೌರಕಾರ್ಮಿಕರು ಸೇರಿದಂತೆ ಪದಾಧಿಕಾರಿಗಳು, ಪೌರ ಕಾರ್ಮಿಕ ಸದಸ್ಯರು ಮುಷ...

🪔ನಿಧನ ವಾರ್ತೆ : ಅಮ್ಮನಕೇರಿ ಮಠದ ಬಸವರಾಜಯ್ಯ - ಅಮ್ಮನಕೇರಿ🪔

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಅಮ್ಮನಕೇರಿ ಗ್ರಾಮದ ಜಂಗಮ ಸಮುದಾಯದ ಯುವ ಮುಖಂಡ, ಪತ್ರಕರ್ತರೂ ಹಾಗೂ ಗುಡಿಕೈಗಾರಿಕೋದ್ಯಮಿಯಾಗಿದ್ದ. ಅಮ್ಮನಕೇರಿ ಮಠದ ಬಸವರಾಜಯ್ಯ (40), ಇಂದು (ಮೇ 25) ಮುಂಜಾನೆ 9 ಗಂಟೆಗೆ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ವರ್ಷದಿಂದ ಗ್ಯಾಂಗ್ರೀನ್ ನಿಂದ ಬಳಲುತಿದ್ದು , ಹಲವೆಡೆಯ ಖಾಸಗೀ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಸಣ್ಣ ಹೋಟೆಲ್, ಎಲ್ಕೆಟ್ರಿಕಲ್ , ಶಾಮಿಯಾನ ಸಪ್ಲೇಯರ್ಸ್ ಸೇರಿದಂತೆ ವಿವಿದ ಗುಡಿಕೈಗಾರಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಪ್ರವೃತ್ತಿಗಾಗಿ ಪತ್ರಿಕಾರಂಗವನ್ನು ಆಯ್ಕೆ ಮಾಡಿಕೊಂಡು , ಧರಣಿ ಘರ್ಜನೆ ಯೂಟ್ಯೂಬ್ ಚಾನೆಲ್ ಸೇರಿದಂತೆ. ವಿವಿದ ಸ್ಥಳೀಯ ವಾರ ಪಾಕ್ಷಿಕ ಪತ್ರಿಕೆಗಳಲ್ಲಿ ಅನೇಕ ವರ್ಷಗಳಿಂದ , ಕೂಡ್ಲಿಗಿ ತಾಲೂಕಿನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಪತ್ರಕರ್ತರ ಸಂಘದ , ಕೂಡ್ಲಿಗಿ ಘಟಕದ ಪದಾಧಿಕಾರಿಯಾಗಿ ಸೇವೆಯಲ್ಲಿದ್ದರು. ಮೃತರು ತಾಯಿ ತಂದೆ , ಮಡದಿ ಹಾಗೂ ಇಬ್ಬರು ಪತ್ರರನ್ನು. ತುಂಬು ಕುಟುಂಬವನ್ನು , ಬಂಧು ಬಳಗ ಶಿಷ್ಯವರ್ಗವನ್ನು ಹೊಂದಿದವರಾಗಿದ್ದರು.  *ಅಂತ್ಯಕ್ರಿಯೆ*- ಮೇ 26ರಂದು ಬೆಳಿಗ್ಗೆ 9 : 30ಗಂಟೆಗೆ , ಅಮ್ಮನಕೇರಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಎ ಎಮ್ ಬಸವರಾಜಯ್ಯ ರವರ ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್...

ಲಕ್ಷ್ಮಿಸೀಡ್ಸ್ ಕಂಪನಿ ಮೆಕ್ಕೆಜೋಳ, ಬಿತ್ತನೆ ಬೀಜ ರೈತರಿಗೆ ಲಕ್ಷ್ಮಿ ವರವಾಗುತ್ತೆ

ಇಮೇಜ್
  ಕೊಟ್ಟೂರು: 2025 ರ ಮುಂಗಾರು ಮಳೆ ಅತೀ ಬೇಗ ಆರಂಭವಾದ ಕಾರಣ ರೈತರ ಮುಖದಲ್ಲಿ ಮಂದಹಾಸ ಬೀರಿದೆ ಕೃಷಿ ಚಟುವಟಿಕೆ ತೀರ್ವವಾಗಿ ಪ್ರಾರಂಭವಾಗಿದ್ದು ಕಳೆದ ವರ್ಷ ಲಕ್ಷ್ಮಿಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿ ಬಹಳ ಜನ ರೈತರು ಏಕರೆಗೆ 35-38 ಕ್ವಿಂಟಲ್ ಒಳ್ಳೆಯ ಇಳುವರಿ ಪಡೆದ ಕಾರಣ ಕೊಟ್ಟೂರಿನ ಸುತ್ತ ಮುತ್ತಲಿನ ರೈತರು ಲಕ್ಷ್ಮಿ 405 ಮೆಕ್ಕೆಜೋಳ ಖರೀದಿಗೆ ಕೊಟ್ಟೂರು ಮಾರುಕಟ್ಟೆಯಲ್ಲಿ ಒಳ್ಳೆಯ ಬಿತ್ತಿನೆ ಬಿಜ ಎಂದು ಕೊಟ್ರೇಶ್ ಟಿ, ಮಂಜುನಾಥ್, ರೈತಾಪಿ ಜನರು ಅಭಿಪ್ರಾವನ್ನು ಪತ್ರಿಕೆಗೆ ತಿಳಿಸಿದ್ದಾರೆ.

*ಇಂದಿರಾ ಕ್ಯಾಂಟೀನ್‌ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ *

ಇಮೇಜ್
" ಈಗಿನ ರಾಜ್ಯ ಸರ್ಕಾರ ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಬಡವರಿಗೆ, ಕಾರ್ಮಿಕರಿಗೆ ಅನುಕೂಲವಾಗುತ್ತದೆ ಇಲ್ಲವೇ ಎಂದು ಕಾದು ನೋಡಬೇಕಿದೆ " "ಕಡು ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷಿತ ಗೆ ಸಾಕ್ಷಿ ಅಗಿದೆ " ಕೊಟ್ಟೂರು:  ಐದು ಗ್ಯಾರಂಟಿಗಳನ್ನು ನೀಡುತ್ತೇವೆಂಬ ಭರವಸೆಯ ಮೇರೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೊಟ್ಟೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪಿಸಲು ಎಲ್ಲ ರೀತಿಯ ತಯಾರಿ ನಡೆಸಿ, ಕಟ್ಟಡವೂ ಉದ್ಘಾಟನೆಗೆ ಸಿದ್ಧವಾಗಿದ್ದು, ಇದುವರೆಗೂ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಬಡವರ, ಕೂಲಿ ಕಾರ್ಮಿಕರ ಅಕ್ಷಯ ಪಾತ್ರೆಯೆಂದೆ ಹೆಸರು ಮಾಡಿರುವ ಇಂದಿರಾ ಕ್ಯಾಂಟೀನ್ ಕೊಟ್ಟೂರಿನಲ್ಲಿ ಅತೀ ತುರ್ತಾಗಿ ಪ್ರಾರಂಭವಾಗಬೇಕೆಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ. ಬಡವರ ಹಸಿವನ್ನು  ನೀಗಸಬೇಕಾಗಿತ್ತು .ಆದರೆ, ಬಿಡುಗಡೆಯ ಭಾಗ್ಯ ಯಾವಾಗ? ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಶೀಘ್ರವಾಗಿ ಈ ಇಂದಿರಾ ಕ್ಯಾಂಟೀನ್ ಆರಂಭಗೊಂಡರೇ ನಿತ್ಯ ಕೂಲಿ ಕಾರ್ಮಿಕರಿಗೆ , ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ, ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೂ ಇದರಿಂದ ಹಸಿವನ್ನು ನೀಗಿಸಲು ಪ್ರಯತ್ನಿಸುವರೇ  ಜನಪ್ರತಿನಿಧಿಗಳು, ಅಧಿಕಾ...

ಶ್ರೀ ಮತಿ ಮಹಾಂತೇಶ್ವರಿ ಭೂಸನೂರಮಠ ನಿಧನ

ಇಮೇಜ್
ಕೊಟ್ಟೂರು : ಶ್ರೀ ಮತಿ ಮಹಾಂತೇಶ್ವರಿ ಭೂಸನೂರಮಠ ಮಠ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಜಗದ್ಗುರು ಶಿಕ್ಷಣ ಟ್ರಸ್ಟ್ ರಿ. ಕೊಟ್ಟೂರು ದೈವ ದಿನದಾಗುತ್ತಾರೆ . ಇವರ ಅಂತ್ಯಕ್ರಿಯೆಯು 21.05.2025 ರಂದು ನೆರವೇರಲಿದೆ. ದುಖಿತಸ್ಥರು. ಅನುಪಮ,ಪ್ರದೀಪ್ ಭೂಸನೂರಮಠ, ಹೇಮಲತಾ ಹಾಗೂ ಮೊಮ್ಮಕ್ಕಳು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ   

ಮಸ್ಕಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಇಮೇಜ್
  ಮಸ್ಕಿ : ಪಟ್ಟಣದ ಗಾಂಧಿನಗರದ ಹೊಸ ಬಸ್ ನಿಲ್ದಾಣದಲ್ಲಿನ ಗಾಂಧಿ ಪ್ರತಿಮೆ ಪಕ್ಕದಲ್ಲಿ ಇರುವ ಹಳೆಯ ನಿರೀಕ್ಷಣಾ ಮಂದಿರದ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಬಸನಗೌಡ ತುರುವಿಹಾಳ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು,  ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಪಟ್ಟಣಕ್ಕೆ ಅವಶ್ಯಕವಾದ ಯೋಜನೆಯಾಗಿದೆ.ಬಡಜನತೆಗೆ ಅದರಲ್ಲೂ ವಿದ್ಯಾರ್ಥಿಗಳು, ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಸಹಾಯಕವಾಗಲಿದೆ. ಹೀಗಾಗಿ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲು ಈಗಾಗಲೇ ಸೂಚಿಸಲಾಗಿದೆ ಎಂದರು.ನಂತರ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರು ಮಾತನಾಡಿ, ಹಸಿವು ಮುಕ್ತ ಕರ್ನಾಟಕ ಯೋಜನೆ ಅಡಿ ತಾಲೂಕಿಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಆರಂಭಿಸುವ ಯೋಜನೆಯಡಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆ  ಸಕಾಲದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಇಂದು ಇಂದಿರಾ ಕ್ಯಾಂಟೀನ್ ಅನ್ನು ಶಾಸಕರು ಉದ್ಘಾಟಿಸಿದ್ದು ಖುಷಿ ತಂದಿದೆ. ಪಟ್ಟಣಕ್ಕೆ ಆಗಮಿಸುವ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್ ಗುಣಮಟ್ಟದ ಆಹಾರ ಸಿಗಲಿದೆ ಎಂದರು.  ಈ ಸಂದರ್ಭದಲ್ಲಿ ಮಹಿ...

ಗಂಗಾಮತಸ್ಥ ಸಮುದಾಯ ಭವನ ಶಂಕುಸ್ಥಾಪನೆ

ಇಮೇಜ್
  ಮಸ್ಕಿ : ಪಟ್ಟಣದ ತಾಲ್ಲೂಕು ಪಂಚಾಯತಿ ಹಿಂಭಾಗವಿರುವ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಭವನದ ಆವರಣದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಿ ನಂತರ ಪುಸ್ತಕ ಬಿಡುಗಡೆಯನ್ನು ಶಾಸಕ ಆರ್.ಬಸನಗೌಡ ತುರುವಿಹಾಳ ರವರು ನೆರವೇರಿಸಿದರು. ಈ ವೇಳೆ,ಪುರಸಭೆ ಅಧ್ಯಕ್ಷ ಮಲ್ಲಯ ಅಂಬಾಡಿ,ಗಂಗಾಮಸ್ಥ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ, ನಾರಾಯಣ್ಣಪ್ಪ ಕಾಸ್ಲಿ,ಮಲ್ಲಯ್ಯ ಮುರಾರಿ,ಮಲ್ಲಪ್ಪ ಬಾರಿಕೇರ,ಯಕೋಬ ನಾಯಕ,  ಅಮರೇಶ ಕಲ್ಲೂರು,ದುರುಗಪ್ಪ ದೀನಸಮುದ್ರ, ಕೃಷ್ಣ ಚಿಗಿರಿ,ಹನುಮಂತ, ಮಲ್ಲಯ್ಯ ಜಾಲಗಾರ,ಅಮರೇಶ ಹುನುಕುಂಟಿ,ರಾಮಣ್ಣ ದೇವತಗಲ್,ಬಸನಗೌಡ ಮಾರಲದಿನ್ನಿ,ಮಲ್ಲಯ್ಯನಾಯಕ, ಶಿವರೆಡ್ಡಿ,ಮುದುಕಪ್ಪ ಸುಂಕನೂರು,ಮಂಜುನಾಥ ಲಿಂಗಸಗೂರು,ಯಲ್ಲಪ್ಪ ಪಾಮನಕಲ್ಲೂರು ಸೇರಿದಂತೆ ಗಂಗಾಮಸ್ಥ ಸಮಾಜದ ಪ್ರಮುಖ ಮುಖಂಡರು ಯುವಕರು ಇದ್ದರು.

ಪ್ರಕೃತಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ : ಸಚಿವ ಶಿವರಾಜ್ ತಂಗಡಗಿ

ಇಮೇಜ್
  ಮಸ್ಕಿ : ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಆವರಣದಲ್ಲಿ ಪ್ರಕೃತಿ ಫೌಂಡೇಶನ್ ವತಿಯಿಂದ ಪಕ್ಷಿಗಳಿಗೆ ಮಣ್ಣಿನ ಮಡಿಕೆಯಲ್ಲಿ ನೀರಿನ ಅರವಟ್ಟಿಗೆ ಕಾರ್ಯಕ್ರಮ ಜರುಗಿತು.  ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ಎಸ್‌. ತಂಗಡಗಿ ರವರು ಮಾತನಾಡಿ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ತಮ್ಮ ಸ್ವಂತ ಹಣದಿಂದ ಪ್ರಕೃತಿ ಫೌಂಡೇಶನ್ ವತಿಯಿಂದ ಈ ಪರಿಸರ ಸಂರಕ್ಷಣೆ, ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ ಇವರ ಕಾರ್ಯ ಸದಾಕಾಲವೂ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ  ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಲು ಪ್ರತಿಯೊಬ್ಬರೂ ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು. ಈ ವೇಳೆ,ಪ್ರಕೃತಿ ಫೌಂಡೇಶನ್ ಅಧ್ಯಕ್ಷ ಶಿವಮೂರ್ತಿ ಗದ್ಗೀಮಠ ಸೇರಿದಂತೆ ಊರಿನ ಪ್ರಮುಖ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಇದ್ದರು.

ಮಕ್ಕಳು ಅಕ್ಷರ ಜ್ಞಾನದೊಂದಿಗೆ ಲೋಕಜ್ಞಾನವನ್ನು ಕಲಿಯಬೇಕು- ಅಂಜಿನಪ್ಪ

ಇಮೇಜ್
  ಕೊಟ್ಟೂರು : ಭಾವ್ಯ ಭವಿಷ್ಯದ ಕನಸನ್ನು ಕಾಣುತ್ತಿರುವ ವಿದ್ಯಾರ್ಥಿಗಳೇ ನಾನೂ ಸಹಾ ನಿಮ್ಮಂತೆ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಿ ಕೆಎಎಸ್ ಉತ್ತೀರ್ಣನಾಗಿ ಯಶಸ್ವಿಯಾಗಿದ್ದೇನೆ ಎಂದು ಕೊಟ್ಟೂರು ಪತ್ರಾಂಕಿತ ಉಪಖಜಾನಾಧಿಕಾರಿಗಳಾದ ಅಂಜಿನಪ್ಪ ಹೇಳಿದರು.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಶಾಖೆಯವರು ಪಟ್ಟಣದ ಶಿವಾನಿ ಪ್ಯಾರಡೈಸ್ನಲ್ಲಿ ಆಯೋಜನೆ ಮಾಡಿದ್ದ ಕೊಟ್ಟೂರು ತಾಲೂಕು ಮಟ್ಟದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪತ್ರಾಂಕಿತ ಉಪಖಜಾನಾಧಿಕಾರಿಗಳಾಸ ಅಂಜಿನಪ್ಪ ಇವರು ಉದ್ಘಾಟನೆ ಮಾಡಿ ಮಾತನಾಡಿದರು.     ನೀವೆಲ್ಲರೂ ಜ್ಞಾನ ಸಂಪಾದಿಸುವುದರ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಸಹಾ ಕಲಿಯಬೇಕು. ಸಂಬAಧಗಳು ದೂರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಂಬAಧಗಳಿಗೆ ಬೆಲೆಕೊಡುತ್ತಾ ಬೆಸುಗೆಯಾಗಬೇಕು. ಸಾಮಾಜದಲ್ಲಿ ಇನ್ನೊಬ್ಬರಿಗೆ ಸ್ಪೂರ್ತಿಯಾದರೆ ನಿಮ್ಮ ಬದುಕು ಸಾರ್ಥಕ ಎಂದು ಪ್ರೋತ್ಸಾಹದ ನುಡಿಗಳನ್ನು ನುಡಿದರು. ಪ್ರಾಸ್ತಾವಿಕ ನುಡಿಗಳನ್ನು ನುಡಿದ ತಾಲೂಕು ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆಯವರು “ನಮ್ಮ ನೌಕರರ ಮಕ್ಕಳು ನಮ್ಮ ಹೆಮ್ಮೆ” ಎಂದು ಭಾವಿಸಿ ಶೇ.೯೦ಕ್ಕಿಂತ ಹೆಚ್ಚಿನ ಅಂಕಗಳೊAದಿಗೆ ಉತ್ತೀರ್ಣರಾದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಹಾಗಾಗಿ ಆ ಎಲ್ಲಾ ಮಕ್ಕಗಳನ್ನು ಗೌರವಿಸಲ...

7 ದಿನಗಳ ಒಳಗಾಗಿ ದಾಖಲೆ ಒದಗಿಸದಿದ್ದರೆ ಕ್ರಮ;: ಶಾಲಾ ಶಿಕ್ಷಣ ಇಲಾಖೆಯಿಂದ ಅಂತಿಮ ನೋಟೀಸ್

ಇಮೇಜ್
  ಶಿಕ್ಷಣ ಕಾಯ್ದೆ – 1983 ಸೆಕ್ಷನ್ 7[ಎ] 39ರ ಅನ್ವಯ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆ ಹಿಂಪಡೆಯುವುದಾಗಿ ಎಚ್ಚರಿಕೆ  ಬೆಂಗಳೂರು, ಮೇ, 15;ಕಾನೂನು ಬಾಹಿರವಾಗಿ ನಡೆಯುತ್ತಿರುವ ಹೆಗಡೆ ನಗರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ( ಜಮೀಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ – ಮುಂಬೈ) ಗೆ ಶಾಲಾ ಶಿಕ್ಷಣ ಇಲಾಖೆ ಕಾರಣ ಕೇಳಿ ಅಂತಿಮ ನೋಟೀಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. ಇಲ್ಲವಾದಲ್ಲಿ ಶಾಲೆಯ ಮಾನ್ಯತೆ ಹಿಂಪಡೆದು, ಶಾಲೆಗೆ ನೀಡಿರುವ ನೋಂದಣಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.  ಕಾನೂನಿಗೆ ವಿರುದ್ಧವಾಗಿ ಶಿಕ್ಷಣ ಸಂಸ್ಥೆ ನಡೆಯುತ್ತಿರುವ ಕುರಿತು ಹಲವು ದೂರುಗಳು ಕೇಳಿ ಬಂದಿದ್ದು, ಇವೆಲ್ಲವನ್ನೂ ಪರಿಶೀಲಿಸಲಾಗಿದೆ. ಹೀಗಾಗಿ ಮೂಲ ದಾಖಲೆಗಳನ್ನು ಒದಗಿಸುವಂತೆ ಹಲವು ಬಾರಿ ನೋಟೀಸ್ ನೀಡಿದ್ದು, ಈ ವರೆಗೆ ದಾಖಲೆ ಸಲ್ಲಿಸಿಲ್ಲ. ವಿದ್ಯಾರ್ಥಿಗಳು, ಪೋಷಕರಿಗೆ ಸುಳ್ಳು ಮಾಹಿತಿ ನೀಡಿ, ಶಿಕ್ಷಣ ಇಲಾಖೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಶಿಕ್ಷಣ ಸಂಸ್ಥೆ ಹೆಜ್ಜೆ ಹೆಜ್ಜೆಗೂ ಗೊಂದಲಕಾರಿ ನಿರ್ಧಾರಗಳನ್ನು ತೆಗೆದುಕೊಂಡು, ಒಂದೊಂದು ಕಡೆ ಒಂದೊಂದು ರೀತಿಯ ದಾಖಲೆಗಳನ್ನು ಸಲ್ಲಿಸಿದೆ. ಒಟ್ಟಾರೆ ಆಡಳಿತ ಮಂಡಳಿ ಕಾರ್ಯವೈಖರಿ ಸಂಶಯಾಸ್ಪದವಾಗಿದೆ ಎಂದು ಹೇಳಿದೆ.   1 ರಿಂದ 10...

ನಿವೃತ್ತ ಕಾರ್ಯನಿರ್ವಾಹಕ ಭ್ರಷ್ಟ ಅಧಿಕಾರಿ ಶಾಂತಮ್ಮ ಇವರಿಗೆ ದಂಡ

ಇಮೇಜ್
  ವರದಿ ಫಲಶೃತಿ  *ಭ್ರಷ್ಟ ಅಧಿಕಾರಿಗೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವುದಕ್ಕೆ , ಸಾರ್ವಜನಿಕರಿಂದ ಇಲಾಖಾ ಆಯುಕ್ತರಿಗೆ ಮೆಚ್ಚುಗೆ ವ್ಯಕ್ತ* ಕೊಟ್ಟೂರು ಪಟ್ಟಣದ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಾಂತಮ್ಮ ಇವರಿಗೆ ಇಲಾಖೆಯು ಒಂದು ಲಕ್ಷದ ಎಂಭತ್ನಾಲ್ಕು ಸಾವಿರದ ಎಂಟು ನೂರ ನಾಲ್ಕು ರೂಪಾಯಿಗಳ ದಂಡ ವಿಧಿಸಿದೆ. ಇವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ದಂಡವನ್ನು ವಿಧಿಸಿದೆ. ಆದೇಶ ಸಂಖ್ಯೆ ೧೫೪೪೪೬೪ ಶ್ರೀಗುರುಬಸವೇಶ್ವರ ಸ್ವಾಮಿ ದೇವಾಲಯದ ಖಾತೆಗೆ ಜಮೆ ಮಾಡುವ (ವೇತನ ಬಟವಾಡೆ ವಹಿಯ ಆಧಾರದಲ್ಲಿ ಲೆಕ್ಕಾಚಾರ ಮಾಡುವುದು) ಹಾಗೂ ೩೨ ದಿನಗಳ ವಿಳಂಬವಾಗಿ ದೇವಾಲಯದ ಖಾತೆಗೆ ಜಮೆ ಮಾಡಿರುವ ಮೊಬಲಗು ರೂ. ೭,೩೯,೨೧೮/- ಗಳ ಮೇಲೆ ಶೇಕಡಾ ೨೫% ಬಡ್ಡಿಯಂತೆ ರೂ. ೧,೮೪,೮೦೪/- ಗಳನ್ನು ಅವರ ನಿವೃತ್ತಿ ಉಪದಾನದಲ್ಲಿ ತಡೆಹಿಡಿಯುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.  ಈ ಹಿಂದೆ ದೇವಸ್ಥಾನದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆದ ಅವ್ಯವಹಾರದ ಬಗ್ಗೆ ಸುದೀರ್ಘ ವರದಿಗಳು ಪ್ರಕಟವಾಗಿದ್ದು, ಅವ್ಯವಹಾರ ಮಾಡಿರುವ ಅಧಿಕಾರಿಗೆ ದಂಡನೆ ವಿಧಿಸಿರುವುದು ಸಾರ್ವಜನಿಕರಿಗೆ ಇಲಾಖೆಯ ಮೇಲೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಶಾಂತಮ್ಮ ಇವರು ಈಗಾಗಲೇ ನಿವೃತ್ತರಾಗಿದ್ದು ಕರ್ತವ್ಯ ನಿರ್ವಹಿಸುತ್ತಿದ್ದ ಸ...

ಬಳ್ಳಾರಿ,ಲಿಂಗಸ್ಗೂರು,ವಾಡಿ ರೈಲು ಮಾರ್ಗ ಪ್ರಾರಂಭಿಸಲು ಪ್ರತಾಪ್ ಗೌಡ ಪಾಟೀಲ ಸಚಿವ ವಿ.ಸೋಮಣ್ಣರಿಗೆ ಮನವಿ

ಇಮೇಜ್
  ಮಸ್ಕಿ : ಸಿಂಧನೂರು ನಗರಕ್ಕೆ ಗುರುವಾರ ಆಗಮಿಸಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಬಳ್ಳಾರಿ ಸಿರುಗುಪ್ಪ ಸಿಂಧನೂರು, ಮಸ್ಕಿ, ಲಿಂಗಸುಗೂರು, ವಾಡಿ ಕಲ್ಬುರ್ಗಿ ರೈಲು ಮಾರ್ಗ ಪ್ರಾರಂಭಿಸಿ ಎಂದು ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ರವರು ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ, ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಚಂದ್ರಕಾಂತ್ ಗೂಗೇಬಾಳ, ಶರಣಬಸವ ವಕೀಲ ಉಮಲೂಟಿ, ಮೌನೇಶ್ ನಾಯಕ, ಶ್ರೀಧರ ಕಡಬೂರು, ಸೇರಿದಂತೆ ಮಸ್ಕಿ ಕ್ಷೇತ್ರದ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

ಪಕ್ಷಿಗಳಿಗೆ ನೀರು - ಕಾಳು ವ್ಯವಸ್ಥೆ ಕಲ್ಪಿಸಿದ ಪ್ರಕೃತಿ ಫೌಂಡೇಶನ್

ಇಮೇಜ್
  ಮಸ್ಕಿ: ಪ್ರಕೃತಿ ಫೌಂಡೇಶನ್ ಹಾಗೂ ಜಗದ್ಗುರು ರೇಣುಕಾಚಾರ್ಯ ಜಂಗಮ ಸೇವಾ ಸಮಿತಿ (ರಿ) ಯುವ ಘಟಕ ಮಸ್ಕಿ ವತಿಯಿಂದ ವಿಶ್ವ ಕುಟುಂಬ ದಿನಾಚರಣೆ ಪ್ರಯುಕ್ತ ಪಕ್ಷಿಗಳಿಗೆ ಮಣ್ಣಿನ ಮಡಿಕೆ ಯಲ್ಲಿ ನೀರಿನ ಅರವಟ್ಟಿಗೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಇರುವ ಮರಗಳಿಗೆ ಮಣ್ಣಿನ ಮಡಕೆ ಕಟ್ಟಿ, ಮಡಕೆಯಲ್ಲಿ ನೀರು, ಕಾಳು, ಅಕ್ಕಿಯನ್ನು ಹಾಕುವ ಮೂಲಕ ಮೂಕ ಪಕ್ಷಿಗಳಿಗೆ ದಾಹ, ಹಸಿವು ನೀಗಿಸುವ ಉತ್ತಮ ಕಾರ್ಯ ಎಂದು ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯ ಸ್ವಾಮಿ ಸಿಂಧನೂರು ಮಠ ರವರು ಹೇಳಿದರು. ಪ್ರಕೃತಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ, ಶಿವಮೂರ್ತಿ ಗದ್ಗಿಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 5 ನೇ ವರ್ಷದ ನಮ್ಮ ನಡೆ ಮೂಕ ಪ್ರಾಣಿ -ಪಕ್ಷಿಗಳ ರಕ್ಷಣೆ ಕಡೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ  ಬಿರು ಬೇಸಿಗೆಯಲ್ಲಿ ಪ್ರಕೃತಿಯಲ್ಲಿ ಕುಡಿಯಲು ನೀರಿನ ತೀವ್ರ ಕೊರತೆಯಿಂದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಿ ಮಾನವೀಯತೆ ಮೆರೆಯೋಣ. ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ನಮ್ಮನಿಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದರು. ಪ್ರಸ್ತುತ ಮನುಷ್ಯ ಆಧುನಿಕ ನಾಗರಿಕತೆ ಅಪ್ಪಿಕೊಳ್ಳುತ್ತಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗ...

*ಮಕ್ಕಳಿಗೆ ಅಗ್ನಿಶಾಮಕದಳದ ಸಂಪೂರ್ಣ ಮಾಹಿತಿ *

ಇಮೇಜ್
ಕೊಟ್ಟೂರು ಪಟ್ಟಣದ ನ್ಯೂ ವಿದ್ಯಾಭಾರತಿಯ ಯುರೋ ಕಿಡ್ಸ್ ಪ್ರಿ ಸ್ಕೂಲ್ ನ ಮಕ್ಕಳಿಗೆ ಬುಧವಾರ ರಂದು ಕೊಟ್ಟೂರಿನ ಅಗ್ನಿಶಾಮಕದಳದ ಸಂಪೂರ್ಣ ಮಾಹಿತಿ ಬಗ್ಗೆ ಮತ್ತು ಅಗ್ನಿಶಾಮಕದ ವಾಹನದ ಚಾಲನೆ ಬಗ್ಗೆ ಪುಟಾಣಿ ಮಕ್ಕಳಿಗೆ ತಿಳಿಸಲಾಯಿತು  ಮಕ್ಕಳು ಬಹಳ ಉತ್ಸುಕತೆ, ಸಮ್ಯಮದಿಂದ ಈ ಕಾರ್ಯಕ್ರಮಗಳ ಮೂಲಕ ಸ್ಫೂರ್ತಿದಾಯಕ ವಾಗಿದೆ ಎಂದು ಯುರೋ ಕಿಡ್ಸ್ ಪ್ರಿ ಸ್ಕೂಲ್ ನವರು ತಿಳಿಸಿದರು  ಯುರೋ ಕಿಡ್ಸ್ ಶಾಲೆಯ ವತಿಯಿಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೊಟ್ಟೂರಿನ ಅಗ್ನಿಶಾಮಕ ಠಾಣೆಯ ಮುಖ್ಯ ಅಧಿಕಾರಿ ಬಸವರಾಜ್ ಮತ್ತು ಸಹ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸಿಡಿಲು ಬಡಿದು ಓರ್ವ ಸಾವು, ಮೂವರಿಗೆ ಗಾಯ

ಇಮೇಜ್
  ಮಸ್ಕಿ : ತಾಲೂಕಿನ ಹರ್ವಾಪೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಹಿತ ಮಳೆಯ ವೇಳೆ ಸಿಡಿಲು ಬಡಿದು ನಿಂಗಪ್ಪ ತಂದೆ ರಾಮಣ್ಣ (38) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ  ಜೊತೆಯಲ್ಲಿ ಇದ್ದ ಎತ್ತು ಸಹ ಸಿಡಿಲಿಗೆ ಬಲಿಯಾಗಿದ್ದು, ಅವರ ಅಣ್ಣನ ಮಗ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಲಿಂಗಸಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ತಲೆಖಾನ್ ಗ್ರಾಮದ ಲಕ್ಷ್ಮಿ (32) ಹಾಗೂ ಹನುಮಂತಿ (30) ಎಂಬ ಇಬ್ಬರು ಮಹಿಳೆಯರು ಕೂಡ ಸಿಡಿಲಿಗೆ ಗಂಭೀರವಾಗಿ ಗಾಯಗೊಂಡಿದ್ದು, ಮಸ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಆರ್. ಬಸನಗೌಡ ತುರುವಿಹಾಳ ಹಾಗೂ ತಾಲೂಕಾ ದಂಡಾಧಿಕಾರಿ ಮಲ್ಲಪ್ಪ ಕೆ. ಯರಗೋಳ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ರೆಡ್ಡಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ಇದೆ : ಶಾಸಕ ಕೆ.ನೇಮಿರಾಜ ನಾಯ್ಕ

ಇಮೇಜ್
ಕೊಟ್ಟೂರು : ಮಹಾಸಾದ್ವಿ ಹೇಮರೆಡ್ಡಿಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಪಟ್ಟಣದ ಮರಿ ಕೊಟ್ಟೂರೆಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಎಪಿಎಂಸಿ ರಸ್ತೆಯ ಮೂಲಕ ಬಸ್‌ನಿಲ್ದಾಣ ಮುಂಬಾಗ, ತೇರು ಬೀದಿ, ರೇಣುಕ ರಸ್ತೆ,  ಉಜ್ಜಿನಿ ಸರ್ಕಲ್ ಮೂಲಕ ಗಚ್ಚಿನ ಮಠ ತಲುಪಿತು, ಮೆರವಣಗೆಯಲ್ಲಿ ನಂದಿಕೋಲು, ಸಮಾಳ, ವಾದ್ಯಗಳ ನೀನಾದದೊಂದಿಗೆ ಬೆರಗು ಮೂಡಿತು.  ಗಚ್ಚಿನಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿ ಅಂಗವಾಗಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ , ಪರಮಪೂಜ್ಯರಾದ ಶ್ರೀ ವೇಮನಾನಂದ, ಹಾಗೂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಬುಧವಾರ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಕೆ.ನೇಮಿರಾಜ ನಾಯ್ಕ್ ಇವರು ಮಾತನಾಡಿ ರೆಡ್ಡಿ ಸಮಾಜ ತನ್ನದೇ ಆದಂತ ಸಮಾಜ ಸೇವೆ ಹಾಗೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಈ ಸಮಾಜದ ಅಭಿವೃದ್ಧಿಗೋಸ್ಕರ ನಾನು ಸಹ ತಮ್ಮಲ್ಲಿ ಒಬ್ಬರಾಗಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು ಮತ್ತು ರೆಡ್ಡಿ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಗೂಳಿ ಮಲ್ಲಿಕಾರ್ಜ...