ಅರ್ಚಕರು ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಿ : ಡಾ.ಮಲ್ಲಪ್ಪ.ಕೆ.ಯರಗೋಳ

 

ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆದುಕೊಳ್ಳಲು ಆನ್-ಲೈನ್ ಅರ್ಜಿ ಸಲ್ಲಿಸಿ ಎಂದು ತಹಶಿಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 

ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರ ರವರ ಆದೇಶದನ್ವಯ 

ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ವೀಕ ಭತ್ಯೆ ಪಾವತಿಸಲು ತಾಲೂಕಿನ ಎಲ್ಲಾ ಆರ್ಚಕರು ತಮ್ಮ ಅರ್ಜಿಯನ್ನು ಆನ್-ಲೈನ್ ನಲ್ಲಿ ಸಲ್ಲಿಸಬೇಕು.ಮಸ್ಕಿ ತಾಲೂಕಿನ ತಸ್ತಿಕ್ ಭತ್ಯೆ ಪಡೆಯುತ್ತಿರುವ ಎಲ್ಲಾ ಅರ್ಚಕರು ತಮ್ಮ ಕೆ.ವೈ.ಸಿ. ದಾಖಲೆಗಳಾದ ಆಧಾರ ಕಾರ್ಡ, ತಸ್ತಿಕ್ ಭತ್ಯೆ ಪಡೆಯುತ್ತಿರುವ ಅರ್ಚಕ ಕುಟುಂಬ ಸದಸ್ಯರುಗಳ ಒಪ್ಪಿಗೆ ಪತ್ರ,

ಮತ್ತು ಬ್ಯಾಂಕ ಪಾಸ ಬುಕ್, ಇನಾಂ ಪ್ರತಿ,ದೇವಸ್ಥಾನದ ಮುಂಭಾಗ ನಿಂತಿರುವ ಅರ್ಚಕರ ಛಾಯಚಿತ್ರದೊಂದಿಗೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಹಶೀಲ್ದಾರರಿಂದ ಆರ್ಚಕರ ಧೃಡೀಕರಣ ಪ್ರಮಾಣ ಪತ್ರ ಪಡೆದು ಕೊಂಡು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.ನಂತರದ ದಿನಗಳಲ್ಲಿ ಅರ್ಚಕರ ಕುಂದುಕೊರತೆಗಳ ಸಭೆ ಕರೆದು ಅರ್ಚಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*