ಪ್ರಕೃತಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ : ಸಚಿವ ಶಿವರಾಜ್ ತಂಗಡಗಿ

 

ಮಸ್ಕಿ : ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಆವರಣದಲ್ಲಿ ಪ್ರಕೃತಿ ಫೌಂಡೇಶನ್ ವತಿಯಿಂದ ಪಕ್ಷಿಗಳಿಗೆ ಮಣ್ಣಿನ ಮಡಿಕೆಯಲ್ಲಿ ನೀರಿನ ಅರವಟ್ಟಿಗೆ ಕಾರ್ಯಕ್ರಮ ಜರುಗಿತು. 

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ಎಸ್‌. ತಂಗಡಗಿ ರವರು ಮಾತನಾಡಿ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ತಮ್ಮ ಸ್ವಂತ ಹಣದಿಂದ ಪ್ರಕೃತಿ ಫೌಂಡೇಶನ್ ವತಿಯಿಂದ ಈ ಪರಿಸರ ಸಂರಕ್ಷಣೆ, ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ ಇವರ ಕಾರ್ಯ ಸದಾಕಾಲವೂ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ 

ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಲು ಪ್ರತಿಯೊಬ್ಬರೂ ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಈ ವೇಳೆ,ಪ್ರಕೃತಿ ಫೌಂಡೇಶನ್ ಅಧ್ಯಕ್ಷ ಶಿವಮೂರ್ತಿ ಗದ್ಗೀಮಠ ಸೇರಿದಂತೆ ಊರಿನ ಪ್ರಮುಖ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*