ಆರೋಗ್ಯ ಜಾಗೃತಿ ಮೂಡಿಸಲು ಇಳಿ ವಯಸ್ಸಿನಲ್ಲೂ ಸೈಕಲ್ ಜಾಥಾ : ಶಂಕರಪ್ಪ ಯಮನಪ್ಪ ಕೊಡತೆ

 

ಮಸ್ಕಿ : ಬಡವರ ವಾಹನ ಎಂದು ಕರೆಸಿಕೊಳ್ಳುವ ಸೈಕಲ್‌ ಮೋಜು ಕೆಲ ವರ್ಷಗಳ ಹಿಂದೆ ಮಕ್ಕಳು, ಯುವಕರು, ಹಿರಿಯರು ಎನ್ನುವ ಭೇದ ಭಾವವಿಲ್ಲದೆ ಅವರ ಬದುಕಿನ ಭಾಗವಾಗಿದ್ದ ಸೈಕಲ್‌ಗಳು ಈಗ ಮೂಲೆ ಸೇರಿವೆ. ಆ ದಿನಗಳಲ್ಲಿ ಸೈಕಲ್‌ಗೆ ಬಣ್ಣದ ಕಾಗದ , ಸ್ಟಿಕ್ಕರ್‌ ಕಟಿಂಗ್‌, ಹೊಸ ರೀತಿ ಬೆಲ್‌ಗಳನ್ನು ಅಳವಡಿಸಿ ಸ್ನೇಹಿತರೊಂದಿಗೆ ಓಡಾಡುತ್ತಿದ್ದ ಸಂಭ್ರಮ ಈಗಿನ ಮಕ್ಕಳಲ್ಲಿ ಕಾಣ ಸಿಗುತ್ತಿಲ್ಲ. ಬಿದ್ದು ಎದ್ದು ಸೈಕಲ್‌ ಓಡಿಸುವ ಸಂಭ್ರಮ ಈಗಿಲ್ಲವಾಗಿದೆ.

ಆದರೆ ಇಲ್ಲೊಬ್ರು ಐತಿಹಾಸಿಕ ಸ್ಥಳಗಳ ಭೇಟಿಗಾಗಿ ಇಳಿ ವಯಸ್ಸಿನಲ್ಲೂ ಸೈಕಲ್ ಸವಾರಿ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.

25 ಕಿ.ಮೀ ದೂರದ ಲಿಂಗಸಗೂರು ನಿಂದ ಬಿರು ಬಿಸಿಲಿನಲ್ಲಿ ಮಸ್ಕಿ ಪಟ್ಟಣದ ಐತಿಹಾಸಿಕ ಅಶೋಕ ಶಿಲಾಶಾಸನ ಸ್ಥಳದ ವೀಕ್ಷಣೆಗಾಗಿ ಸೈಕಲ್ ಸವಾರಿ ಯಲ್ಲಿ ಬಂದ 48 ವರ್ಷದ ಶಂಕರಪ್ಪ ಯಮನಪ್ಪ ಕೊಡತೆ ಇವರು 

ಮೂಲತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದವರು ಪ್ರಸ್ತುತ ಲಿಂಗಸಗೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ಇದ್ದಾಗ ಸುತ್ತ ಮುತ್ತಲಿನ ವಿಶೇಷ ಸ್ಥಳಗಳಿಗೆ ಸೈಕಲ್ ಮೂಲಕ ಭೇಟಿ ನೀಡುವುದು ಇವರ ಹವ್ಯಾಸ ವಾಗಿದೆ.

ತಮ್ಮ ಗೆಳೆಯ ಮಜಾಲಟ್ಟಿ ಸರ್ಕಾರಿ  ಪಿ.ಯು. ಕಾಲೇಜಿನ ಉಪನ್ಯಾಸಕರ ಪ್ರೇರಣೆ ಯಿಂದ ಸಾಮಾಜಿಕ, ಮತ್ಯು ಆರ್ಥಿಕ ಆರೋಗ್ಯ ಕಾಪಾಡುವುದು,ಪರಿಸರ ಮಾಲಿನ್ಯ ತಡೆಗಟ್ಟಿ ದುಬಾರಿ ಪೆಟ್ರೋಲ್, ಡಿಸೇಲ್, ಸಲುವಾಗಿ ಆಗುವ ಆರ್ಥಿಕ ನಷ್ಟ ಉಳಿತಾಯ ಹಾಗೂ ಯುವಕರು ಮೊಬೈಲ್, ಗುಟಕಾ, ಮದ್ಯಪಾನ, ಧೂಮಪಾನ ದಂತಹ ಚಟಗಳಿಗೆ ಬಲಿಯಾಗದೆ. ಸೈಕಲ್ ಸವಾರಿ ಹವ್ಯಾಸ ಬೆಳಸಿಕೊಂಡು ಜೀವನ ಸಾರ್ಥಕ ಮಾಡಿ ಕೊಳ್ಳುವ ಉದ್ದೇಶಕ್ಕಾಗಿ ಜಾಗೃತಿ ಮೂಡಿಸಲು ಪ್ರತಿದಿನವೂ ದಿನಾಲೂ 30-40 km ಸೈಕಲ್ ಸವಾರಿ ಮಾಡುತ್ತಾರೆ.

ಹಿಂದೆ ಬೆಳಗಾವಿಯಿಂದ ಗೋವಾ ಕೊಲ್ಹಾಪುರ, ಗುಡ್ಡಾಪುರ ಹಾಗೂ ಕಳೆದ ಅಕ್ಟೊಬರ್ ನಲ್ಲಿ ದಸರಾ ಹಬ್ಬಕ್ಕೆ ರಾಯಬಾಗ ದಿಂದ ಮೈಸೂರು ವರೆಗೆ ಸೈಕಲ್ ಮೂಲಕ ಪ್ರವಾಸ ಮಾಡಿದ್ದಾರೆ.

ಅವಕಾಶ ಸಿಕ್ಕರೆ ಮಂತ್ರಾಲಯ,ಶ್ರೀ ಶೈಲಕ್ಕೆ ಹೋಗೋ ಯೋಜನೆ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕಲ್ ಪ್ರವಾಸ ಮಾಡುವ ಆಸೆ ಇದೆ ಎಂದು ಪ್ರಜಾ ಪ್ರಸಿದ್ಧ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*