ಈಶ್ವರಗೌಡ್ರ ಅವರನ್ನು ರಾಜ್ಯ ಸಮಿತಿ ಗೆ ಸೇರಿಸುವಂತೆ ಬಿ.ಜೆ.ಪಿ ಕಾರ್ಯಕರ್ತರು ಆಗ್ರಹ

 

ಕೊಟ್ಟೂರು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಬಿ.ಜೆ.ಪಿ. ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಶ್ರೀಯುತ ಕೆ.ಎಸ್. ಈಶ್ವರಗೌಡ್ರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿ ಸದಾ ಕಾರ್ಯಕರ್ತರಿಗೆ ಸ್ಪಂದಿಸುತ್ತ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ 4 ದಶಕಗಳಿಂದ ಬಿ.ಜೆ.ಪಿ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು. ತಮ್ಮ 10ನೇ ವಯಸ್ಸಿನಲ್ಲಿ ಆರ್.ಎಸ್.ಎಸ್. ಗೆ ಪಾದಾರ್ಪಣೆ ಮಾಡಿ ಅನೇಕ ಆರ್.ಎಸ್.ಎಸ್. ನ ಸಂಘ ಚಟುವಟಿಕೆಗಳಲ್ಲಿ ಭಾಗಿಯಾದವರು.

ಶ್ರೀ ಗೋಮಧುಸೂದನ್ ಆರ್.ಎಸ್.ಎಸ್. ಸಂಚಾಲಕ ಇವರು ಹುಬಳ್ಳಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಧರಣಿ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿದ್ದು. ಅಂದಿನಿಂದ ಇಂದಿನವರೆಗೂ ಬಿ.ಜೆ.ಪಿ. ಗೆ ನಿಷ್ಟಾವಂತರಾಗಿರುತ್ತಾರೆ. ಫ್ಯಾಕಲ್ಟಿ ಮೆಂಬರ್ ಮತ್ತು ಚಾಟರ್ಡ್ ಎಂಜಿನಿಯರ್ ಪ್ರಧಾನ ಮಾಡಲಾಗಿದೆ.

ವೃತ್ತಿಯಿಂದ ಚಾಟರ್ಡ್ ಇಂಜಿನಿಯರ್, ವ್ಯಾಲುವರ್ ಮತ್ತು ಟಿ.ಎ.ಪಿ.ಸಿ.ಎಂ.ಎಸ್. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ನಿ, ಕೊಟ್ಟೂರು ಇದರ ಹಾಲಿ ಅಧ್ಯಕ್ಷರು (ಸಂಸ್ಥಾಪಕ ಅಧ್ಯಕ್ಷರು) ಹಾಗೂ ತಾಲ್ಲೂಕು ಹೋರಾಟ, ರೈಲ್ವೇ ಹೋರಾಟ, ಕೆರೆ ನೀರು ತುಂಬಿಸುವ ಜನಪರ ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವವನ್ನು ಹೊಂದಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿರುತ್ತಾರೆ.

ಹಾಲಿ ಕೊಟ್ಟೂರು. ಬಿ.ಜೆ.ಪಿ. ಪಟ್ಟಣ ಪಂಚಾಯ್ತಿ ಸದಸ್ಯರಾಗಿ ಸದಾ ಪಕ್ಷ ನಿಷ್ಠರಾಗಿ ದುಡಿಯುತ್ತಿರುವ ಇವರ ತನು ಮನ ಧನ ಸಹಾಯದಿಂದ ಪಕ್ಷವನ್ನು ಕಟ್ಟುತ್ತಿರುವ ಹಾಲಿ ವಿಜಯನಗರ ಜಿಲ್ಲಾ ಕಾರ್ಯಕಾರಿಣಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ತಮ್ಮಲ್ಲಿ ನಾವೆಲ್ಲ ಕೇಳಿಕೊಳ್ಳುವುದೇನೆಂದರೆ ಶ್ರೀಯುತ ಈಶ್ವರಗೌಡ್ರನ್ನು ರಾಜ್ಯ ಸಮಿತಿಯಲ್ಲಿ ಸೇರಿಸಿದರೆ [ಅವಕಾಶ ಮಾಡಿಕೊಟ್ಟರೆ] ಅವರಿಗೆ ಮತ್ತಷ್ಟು ಬಲ ಕೊಡುವುದರಿಂದ ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷ ಸಂಘಟನೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಡುತ್ತಿದ್ದೇವೆ.ಎಂದರು

ಈ ಸಂದರ್ಭದಲ್ಲಿ ಜಿಲ್ಯಾಧಕ್ಷರು ಸಂಜೀವ್ ರೆಡ್ಡಿ ,ಮಲ್ಲಿಕಾರ್ಜುನ ಯುವ ಘಟಕ ಅಧ್ಯಕ್ಷರು ಕೊಟ್ಟೂರು ಮಹಾಶಕ್ತಿ ಕೇಂದ್ರ ,ವಿಶ್ವನಾಥ್, ಉಪಾಧ್ಯಕ್ಷರು ಕೊಟ್ಟೂರು ಮಹಾಶಕ್ತಿ ಕೇಂದ್ರ ,ಮಂಜುನಾಥ್ ಭಜಂತ್ರಿ ಹಗರಿಬೊಮ್ಮನಹಳ್ಳಿ ಮಂಡಲ ಕಾರ್ಯದರ್ಶಿ ,ಚಂದ್ರು ಜಂಬೂರ್ ಪ್ರಧಾನ ಕಾರ್ಯದರ್ಶಿ ಕೊಟ್ಟೂರು ಮಹಾಶಕ್ತಿ ಕೇಂದ್ರ,ಅಶೋಕ್ ಉಪಾಧ್ಯಕ್ಷರು ರೈತ ಘಟಕ ಹಗರಿಬೊಮ್ಮನಹಳ್ಳಿ ಮಂಡಲ, ಬಿ.ಜೆ.ಪಿ ಎಲ್ಲಾ ಕಾರ್ಯಕರ್ತರು ಆಗ್ರಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*