ಪಕ್ಷಿಗಳಿಗೆ ನೀರು - ಕಾಳು ವ್ಯವಸ್ಥೆ ಕಲ್ಪಿಸಿದ ಪ್ರಕೃತಿ ಫೌಂಡೇಶನ್

 

ಮಸ್ಕಿ: ಪ್ರಕೃತಿ ಫೌಂಡೇಶನ್ ಹಾಗೂ ಜಗದ್ಗುರು ರೇಣುಕಾಚಾರ್ಯ

ಜಂಗಮ ಸೇವಾ ಸಮಿತಿ (ರಿ) ಯುವ ಘಟಕ ಮಸ್ಕಿ ವತಿಯಿಂದ ವಿಶ್ವ ಕುಟುಂಬ ದಿನಾಚರಣೆ ಪ್ರಯುಕ್ತ ಪಕ್ಷಿಗಳಿಗೆ ಮಣ್ಣಿನ ಮಡಿಕೆ ಯಲ್ಲಿ ನೀರಿನ ಅರವಟ್ಟಿಗೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಇರುವ ಮರಗಳಿಗೆ ಮಣ್ಣಿನ ಮಡಕೆ ಕಟ್ಟಿ, ಮಡಕೆಯಲ್ಲಿ ನೀರು, ಕಾಳು, ಅಕ್ಕಿಯನ್ನು ಹಾಕುವ ಮೂಲಕ ಮೂಕ ಪಕ್ಷಿಗಳಿಗೆ ದಾಹ, ಹಸಿವು ನೀಗಿಸುವ ಉತ್ತಮ ಕಾರ್ಯ ಎಂದು ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯ ಸ್ವಾಮಿ ಸಿಂಧನೂರು ಮಠ ರವರು ಹೇಳಿದರು.

ಪ್ರಕೃತಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ, ಶಿವಮೂರ್ತಿ ಗದ್ಗಿಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 5 ನೇ ವರ್ಷದ ನಮ್ಮ ನಡೆ ಮೂಕ ಪ್ರಾಣಿ -ಪಕ್ಷಿಗಳ ರಕ್ಷಣೆ ಕಡೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ 

ಬಿರು ಬೇಸಿಗೆಯಲ್ಲಿ ಪ್ರಕೃತಿಯಲ್ಲಿ ಕುಡಿಯಲು ನೀರಿನ ತೀವ್ರ ಕೊರತೆಯಿಂದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗುತ್ತಿವೆ.

ಹೀಗಾಗಿ ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗಾಗಿ ತಮ್ಮ ತಮ್ಮ ಮನೆಯ ಮುಂದೆ ಹಾಗೂ ಮನೆಯ ಮೇಲೆ ನೀರು, ಕಾಳು ಇತರೆ ಧಾನ್ಯ ಅಥವಾ ಆಹಾರವನ್ನು ಇರಿಸಿ ಪ್ರಾಣಿ ಪಕ್ಷಿಗಳ ದಾಹ, ಹಸಿವು ನೀಗಿಸಿ ಮಾನವೀಯತೆ ಮೆರೆಯೋಣ. ಮೂಕ ಪ್ರಾಣಿ ಪಕ್ಷಿಗಳ ಸಂರಕ್ಷಣೆ ನಮ್ಮನಿಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದರು.

ಪ್ರಸ್ತುತ ಮನುಷ್ಯ ಆಧುನಿಕ ನಾಗರಿಕತೆ ಅಪ್ಪಿಕೊಳ್ಳುತ್ತಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ.ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಮರೆಯಾಗು­ತ್ತಿರುವುದೂ ಅಜಾಗರಕತೆಯ ಸಮಾಜ ನಿರ್ಮಾಣಕ್ಕೆ ಕಾರಣವಾ­ಗುತ್ತಿದೆ’ ಎಂದು ಜಂಗಮ ಸೇವಾ ಸಮಿತಿ ಯುವ ಘಟಕದ ಕಾರ್ಯದರ್ಶಿ ಯಾದ ವೀರೇಶ ಕ್ಯಾತ್ನಟ್ಟಿ ರವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ,ಮಾರುತಿ ಜಿನ್ನಾಪುರ, ಜಂಗಮ ಸಮಾಜದ ಯುವ ಘಟಕದ ಅಧ್ಯಕ್ಷ ಸಿದ್ದಯ್ಯ ಹೆಸರೂರು ಹಿರೇಮಠ,ಶಿವಶಂಕರಯ್ಯ ಸ್ವಾಮಿ ಗಚ್ಚಿನಮಠ,ಮಲ್ಲಿಕಾರ್ಜುನ, ಗ್ಯಾನಪ್ಪ ದೊಡ್ಡಮನಿ ಮೆದಿಕಿನಾಳ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*