ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಲಾ ಕಟ್ಟಡ ಶಂಕು ಸ್ಥಾಪನೆ

ಇಮೇಜ್
  ಮಸ್ಕಿ : ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೆದಿಕಿನಾಳ ಶಾಲೆಗೆ 2023-24 ನೇ ಸಾಲಿನ ಮೂರು ಹೆಚ್ಚುವರಿ ಕಟ್ಟಡ ಕಾಮಗಾರಿಗಳಿಗೆ ಶನಿವಾರ ಬೆಳಿಗ್ಗೆ ಶಂಕು ಸ್ಥಾಪನೆ ಕಾರ್ಯವನ್ನು ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರುವಿಹಾಳ ರವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು,ಶಾಲೆಯ ಮುಖ್ಯ ಶಿಕ್ಷಕರು,ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು,ಇತರೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.

ವಿಕಲಚೇತನರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮಹ್ಮದ್ ಹುಸೇನ್‌ ಸಾಬ ಪರಾಪೂರು ಆಯ್ಕೆ

ಇಮೇಜ್
ಮಸ್ಕಿ : ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಹದ್ ಹುಸೇನ್‌ ಸಾಬ ಪರಾಪೂರು ಅವರನ್ನು ನವ ಕರ್ನಾಟಕ ಎಂಆ‌ರ್ ಡಬ್ಲ್ಯೂ,ಯುಅರ್‌ಡಬ್ಲ್ಯೂ ವಿಕಲಚೇತನರ ಗೌರವಧನ ಮತ್ತು ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಅಂಭೋಜಿ ಮೇಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾ ಅಧ್ಯಕ್ಷರನ್ನು ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಈ ಸಮಿತಿಯ ಗೌರವಾಧ್ಯಕ್ಷರಾಗಿ ರಾಘವೇಂದ್ರ ಮಾನ್ವಿ,ಪ್ರಧಾನ ಕಾರ್ಯದರ್ಶಿಯಾಗಿ ವಿರುಪಾಕ್ಷಸ್ವಾಮಿ ಕಾಳಾಪುರು,ಖಜಾಂಚಿಯಾಗಿ ಅಮರೇಶ ಪಾಟೀಲ್ ಐದಭಾವಿ,ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಗೊರೇಬಾಳ,ಕಲುಬುರಗಿ ವಿಭಾಗದ ಅಧ್ಯಕ್ಷರಾಗಿ ಸಣ್ಣರಾಮಣ್ಣ ಗುಂಡಾ,ಜಿಲ್ಲಾ ಸಂಚಾಲಕರಾಗಿಬಸವರಾಜ ಸಾಸಲಮರಿ,ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಕೆ.ಬೀರಪ್ಪ ಗೊರೇಬಾಳ,ಸಿಂಧನೂರು ನಗರ ಘಟಕ ಅಧ್ಯಕ್ಷರಾಗಿ ಭೀಮರಾಯ,ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಮಹ್ಮದ್‌ ಅಲಿ ಮಟಮಾರಿ,ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸಾಹೇಬಿ ಜವಳಗೇರಾ ಅವರುಗಳು ಆಯ್ಕೆ ಆಗಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಪ್ರವೀಣ ನಾಯ್ಕ್,ದತ್ತಾತ್ರೇಯ ಕುಡಿಕಿ,ಸಿದ್ಧಾರೂಢ ಬಿರಾದಾ‌ರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನರೇಗಾದಡಿ ಸರ್ಕಾರಿ ಶಾಲೆಗೆ ಹೈಟೆಕ್ ಸೌಕರ್ಯ

ಇಮೇಜ್
  ಮಸ್ಕಿ: ದುಡಿಯುವ ಕೈಗಳಿಗೆ ಕೆಲಸ ಒದಗಿಸಿ, ಗುಳೆ ತಪ್ಪಿಸುವ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸುವಲ್ಲಿ ನೆರವಾಗಿದೆ.  ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ 2024-25 ನೇ ಸಾಲಿನಲ್ಲಿ 21 ಶಾಲಾ ಕಂಪೌಂಡ್, 18 ಶೌಚಾಲಯ, 9 ಶಾಲೆಗಳ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಸ್ಥಳೀಯ ಶಾಲೆಗಳ ಬೇಡಿಕೆ ಅನುಸಾರ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ ಕೊಳಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನರೇಗಾದಡಿ ನಿರ್ಮಿಸಿದ ಹೈಟೆಕ್ ಶೌಚಾಲಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಮಲ ಮೂತ್ರ ವಿಸರ್ಜನೆಗೆ ಪ್ರತ್ಯೇಕ ಕಾಬೋರ್ಡ್ ನಿರ್ಮಿಸಲಾಗಿದೆ. ನೀರು ಸರಬರಾಜು ಮಾಡಲು ಟ್ಯಾಂಕ್ ಅಳವಡಿಸಲಾಗಿದೆ.  ಖಾಸಗಿ ಶಾಲೆಯಲ್ಲಿ ಇರುವಂತೆ ಹೈಟೆಕ್ ಶೌಚಾಲಯ ನಿರ್ಮಿಸಿದ್ದರಿಂದ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸದರಿ ಶಾಲೆಯಲ್ಲಿಒಂದರಿಂದ 7 ನೇ ತರಗತಿಯಿದೆ. 136 ಬಾಲಕರು, 115 ಬಾಲಕಿಯರು ಸೇರಿ ಒಟ್ಟು 251 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 5.20 ಲಕ್ಷ ರೂ. ವೆಚ್ಚದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲಾಗಿದೆ. ಅದೇ ರೀತಿ ನರೇಗಾದಡಿ ಶಾಲೆ ಆವರಣದಲ್ಲಿ ಭೋಜನಾಲಯ ನಿರ್ಮಿಸಿದ್ದು, ಬಿಸಿಯೂಟದ ವೇಳೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂ...
ಇಮೇಜ್
  *ಭಾವದಂಗಳ 20* *ನಡುವೆ ಅಂತರವಿರಲಿ* ಪರಿಚಯವಾದ ಹೊಸತರಲ್ಲಿ ಎಲ್ಲವೂ ಸುಂದರ.ಬಿಡುವಿಲ್ಲದ ಮಾತುಕತೆ,ಎಡೆಬಿಡದೆ ರವಾನೆಯಾಗುವ ಸಂದೇಶಗಳು, ಮುಗಿಯದ ಕರೆ ಕಾಳಜಿ,ಆತ್ಮೀಯತೆ. ಇದೆಲ್ಲದರ ನಡುವೆ ಎಷ್ಟು ಬೇಗ ಪರಿಚಿತರಾಗುತ್ತೇವೆಯೋ, ಅಷ್ಟೇ ಬೇಗ ಅಪರಿಚಿತ ರಾಗಿ ಬಿಡುತ್ತೇವೆ ಅನ್ನುವುದು ಸೋಜಿಗ.ಹೀಗೇಕೆ ಎನ್ನುವ ಪ್ರಶ್ನೆ ಸದಾ ಕಾಡುವುದು.  ಕೆಲವರು ಇದ್ದಕ್ಕಿದ್ದ ಹಾಗೆ ಬದಲಾಗುತ್ತಾರೆ.ಇವತ್ತು ನಾವು ಅವರಿಗೆ ಅಗತ್ಯ ಎಂದು ಅನ್ನಿಸಿರಬಹುದು, ಇನ್ನು ಕೆಲವು ದಿನ ಕಳೆದರೆ ನಾವು ಅವರಿಗೆ ಏನೂ ಅಲ್ಲ ,ನಮಗಿಂತಲೂ ಇನ್ನೊಬ್ಬರು ಅಗತ್ಯ ಎಂದು ಅನ್ನಿಸಬಹುದು ಹೀಗಾಗಿ ಯಾವಾಗಲೂ ಏಕಾಂಗಿಯಾಗಿ ಬದುಕಲು ತಯಾರಾಗಿರಬೇಕು, ಇದೇ ಜೀವನ, ಇದೇ ವಾಸ್ತವ. *ಅನಿವಾರ್ಯತೆ ತಂದ ಬದಲಾವಣೆ* ಬೆಳೆಯುತ್ತಾ ಬೆಳೆಯುತ್ತಾ ಅನಿವಾರ್ಯತೆಯೋ, ಅವಶ್ಯಕತೆಯೋ? ಭಯವೋ? ನಾನಾ ರೀತಿಯ ಒತ್ತಡ,ಸಂಕಟಗಳ ಸುಳಿಗೆ ಸಿಲುಕಿ ಒದ್ದಾಡುತ್ತೇವೆ.ಸಹಜವಾಗಿ ಇರಬೇಕಾದ ನಗು,ಖುಷಿ,ಮುಗ್ಧತೆ,ತುಂಟಾಟ ಮರೆಯಾಗಿ ಬಿಡುತ್ತದೆ.ಬದುಕಿನಲ್ಲಿ ಒಮ್ಮೊಮ್ಮೆ ಏನಾಗುತ್ತಿದೆ? ಏಕೆ ಹೀಗಾಗುತ್ತಿದೆ?ಮುಂದೇನು ಮಾಡುವುದು ಎನ್ನುವ ಗೊಂದಲ ಮೂಡುತ್ತದೆ. ವ್ಯಕ್ತಿಗಳು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ? ಎನ್ನುವುದನ್ನುಕಲ್ಪಿಸಿ ಕೊಳ್ಳುವುದೂಕಷ್ಟ.ಪ್ರತಿಯೊಬ್ಬರಿಗೆ ಒಂದಲ್ಲ ಒಂದು ಸಂದರ್ಭದಲ್ಲಿ ನೋವಾಗುತ್ತದೆ,ಭಯವೂ ಆಗುತ್ತದೆ,ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಕುಗ್ಗುತ್ತಾರೆ ಇನ...

“ವಿಶ್ವಕರ್ಮರು ಒಂದಾದರೆ ರಾಜ್ಯದಲ್ಲಿಯೇ ಅತಿ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯ” ಬಿ.ಎಂ.ಉಮೇಶ್ ಕುಮಾರ್

ಇಮೇಜ್
ಉಡುಪಿ : ವಿಶ್ವಕರ್ಮರು ಒಂದಾದರೆ ರಾಜ್ಯದಲ್ಲಿಯೇ ಅತಿ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯ” ಎಂದು ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.  ಉಡುಪಿ ಜಿಲ್ಲೆ ಬಾರಕೂರು ಕ್ಷೇತ್ರದ ಪ್ರಸಿದ್ಧ ಶ್ರೀ ಕಾಳಿಕಾಂಬಾ ದೇವಸ್ಥಾನದವರು "ರಂಗಪೂಜಾದಿ ದೀಪೋತ್ಸವ"ದ ಅಂಗವಾಗಿ ನವೆಂಬರ್ 28 ರಂದು ಆಯೋಜಿಸಿದ್ದ ವಿಶೇಷ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. “ರಾಜ್ಯದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯದ ಜನರಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಎರಡನೇ ಅತಿ ದೊಡ್ಡ ಸಮುದಾಯ ನಮ್ಮದು. ನಮ್ಮಲ್ಲಿ 40ಕ್ಕೂ ಹೆಚ್ಚು ಉಪಪಂಗಡಗಳಿವೆ. ನಮ್ಮಲ್ಲಿರುವ ಎಲ್ಲ ಉಪಪಂಗಡಗಳು, ಎಲ್ಲ ಪ್ರದೇಶದಲ್ಲಿರುವ ವಿಶ್ವಕರ್ಮರು ಒಂದಾದರೆ ರಾಜ್ಯದಲ್ಲಿಯೇ ಅತಿ ದೊಡ್ಡ ಶಕ್ತಿಯಾಗಿ ನಾವು ಹೊರಹೊಮ್ಮುತ್ತೇವೆ. ನಮ್ಮ ಸಮುದಾಯ ದೊಡ್ಡ ಶಕ್ತಿಯಾಗಿ ಬೆಳೆದಾಗ ಸರ್ಕಾರಿ ಮಟ್ಟದಲ್ಲಿ ನಮ್ಮ ಬೇಡಿಕೆಗಳಿಗೆ ಬಹುಬೇಗ ಸ್ಪಂದನೆ ದೊರೆಯುತ್ತದೆ.” ಎಂದು ಅವರು ಅಭಿಪ್ರಾಯಪಟ್ಟರು. ಈ ಧಾರ್ಮಿಕ ಕಾರ್ಯಕ್ರಮದ ದಿವ್ಯ ನಾನಿದ್ಯವನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ವಹಿಸಿ ಆಶೀರ್ವಚನ ನೀಡಿದರು ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಧರ್ಮದರ್...

ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ: ಕೇಂದ್ರೀಯ ಸಂಸ್ಕೃತಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ

ಇಮೇಜ್
  ಬೆಂಗಳೂರು,; ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ. ಛಂದೋಬದ್ಧವಾದ, ವ್ಯಾಕರಣ ಶುದ್ಧವಾದ ಕಾವ್ಯ ರಚನೆಗೆ ಕಾವ್ಯ ಶಾಸ್ತ್ರಜ್ಞರಿಂದ ತರಬೇತಿ ಅತ್ಯಗತ್ಯ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ ಹೇಳಿದ್ದಾರೆ.  ನಗರದಲ್ಲಿಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕಾವ್ಯ ರಚನೆ ಕುರಿತು ತರಬೇತಿ ನೀಡಲು ಆಯೋಜಿಸಿದ್ದ “ಸಂಸ್ಕೃತ ಕಾವ್ಯ ಶಾಲಾ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಈ ವಿಶ್ವವೇ ಭಗವಂತನ ಕಾವ್ಯ. ಕಾವ್ಯ ರಚನೆಗೆ ಸಾಮರ್ಥ್ಯ, ನೈಪುಣ್ಯ ಇರಬೇಕು. ಜೊತೆಗೆ ತಜ್ಞರಿಂದ ಅಭ್ಯಾಸವು ಕೂಡ ಮುಖ್ಯ.. ಈ ಹಿಂದೆಯೂ ಕೂಡ ತರಬೇತಿಯನ್ನು ಪಡೆದು ಅನೇಕರು ಉತ್ತಮ ಕವಿಗಳಾಗಿದ್ದಾರೆ. ಆದ್ದರಿಂದ ಇಂತಹ ಕಾವ್ಯ ಶಾಲೆಗಳ ಆಯೋಜನೆಯ ಮೂಲಕ ಸಂಸ್ಕೃತ ಕಾವ್ಯ ರಚನೆಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.  ಹಿರಿಯ ವಿದ್ವಾಂಸ ಡಾ. ಎಚ್. ವಿ. ನಾಗರಾಜ ರಾವ್ ಮಾತನಾಡಿ, “ಕವಿತ್ವದ ಅಂಶ ಮನುಷ್ಯರಲ್ಲಿಯೂ ಇರುವುದರಿಂದ ಅವರು ಕವಿಗಳು. ಕವಿತ್ವವು ಜನ್ಮತಃ ಬಂದಿರಲಿ ಅಥವಾ ಇಲ್ಲದಿರಲಿ ಪ್ರಯತ್ನ ಮತ್ತು ಅಭ್ಯಾಸದಿಂದ ಉತ್ತಮ ಕವಿಗಳಾಗಬಹುದು. ಛಂದಸ್ಸು, ಅಲಂಕಾರ ವ್ಯಾಕರಣಗಳ ಅಧ್ಯಯನ ಹಾಗೂ ತಜ್ಞರ ಉಪದೇಶವನ್ನು ಶ್ರದ್ದೆಯಿಂದ ಕೇಳಬೇಕು. ಕೇಳಿದ್ದನ್ನು ಮನನ ಮಾಡಬೇಕು. ಆ ಮೂಲಕ ಪ್ರಾವೀಣ್ಯವನ್ನು ಸಾಧಿಸಬೇಕು” ಎಂದು ಕಿವಿಮಾತು ಹೇಳಿದರು. ಮೇಲುಕೋಟೆ...

ಭಾಷೆಯಿಂದ ನಾಡಾಭಿಮಾನವೂ ಬೆಳೆಯುತ್ತದೆ : ವೈ.ಕೆ. ಮುದ್ದು ಕೃಷ್ಣ

ಇಮೇಜ್
  ಬೆಂಗಳೂರು; ಕರ್ನಾಟಕ ಕೇವಲ ರಾಜ್ಯವಲ್ಲ. ಅದು ನಮ್ಮ ಸಂಸ್ಕೃತಿ. ಕನ್ನಡ ನಮ್ಮ ಭಾಷೆ ಮಾತ್ರವಲ್ಲದೇ ನಮ್ಮ ಸಂಪ್ರದಾಯವೂ ಆಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ. ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.  ನಗರದ ಎಂ ಕೆ ಪಿ ಎಂ ಅರ್ ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನ ಮಂಗಳ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಭಾಷೆಯಿಂದ ನಾಡಾಭಿಮಾನವೂ ಬೆಳೆಯುತ್ತದೆ ಎಂದರು.  ರಾಜ್ಯ ಹೈಕೋರ್ಟ್ ನ ವಕೀಲರಾದ ಶ್ರವಣ ಪ್ರಭಾ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು. ಭಾಷೆ ಮಾತನಾಡುವುದರಿಂದ ಕನ್ನಡ ರಾಜ್ಯೋತ್ಸವಕ್ಕೆ ಮಹತ್ವ ದೊರೆಯುತ್ತದೆ ಎಂದರು.  ಆರ್.ವಿ ಇನ್ಸ್ಟಿಟ್ಯೂಟ್ ಲೀಗಲ್ ಸ್ಟಡೀಸ್ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಅಂಜಿನ ರೆಡ್ಡಿ ಮತ್ತಿತರೆ ಗಣ್ಯತರು ಪಾಲ್ಗೊಂಡಿದ್ದರು.

ರಾಜೇಶ್ ಚಾವತ್ ಅವರಿಗೆ ನ್ಯೂಸ್ ಪೇಪರ್ಸ್ ಆಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಇಮೇಜ್
  ಬೆಂಗಳೂರು; ವ್ಯಾಪಾರ, ವಾಣಿಜ್ಯ ಮತ್ತು ಸೇವಾ ಕ್ಷೇತ್ರದಲ್ಲಿ ಪ್ರೇಮ್ ಜ್ಯುವೆಲರ್ಸ್ ಮುಖ್ಯಸ್ಥ ರಾಜೇಶ್ ಚಾವತ್ ಮತ್ತಿತರ   ಗಣ್ಯರಿಗೆ ನ್ಯೂಸ್ ಪೇಪರ್ಸ್ ಆಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ನಗರದ ಪುರಭವನದಲ್ಲಿ ನ್ಯೂಸ್ ಪೇಪರ್ಸ್ ಆಸೋಸಿಯೇಷನ್ ಆಫ್ ಕರ್ನಾಟಕದಿಂದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡು, ನುಡಿಗಾಗಿ ಹೋರಾಟ ಮಾಡಿದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ತುಮಕೂರಿನಿಂದ ಕರೆತಂದಿದ್ದ ಆನೆ. ಸಾಧಕರಿಗೆ ಹಾರ ಹಾಕಿ ಸ್ವಾಗತಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಆನೆಯು ಕನ್ನಡ ಬಾವುಟವನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿ ಗಮನ ಸೆಳೆಯಿತು. ಕನ್ನಡ ಪರ ಹೋರಾಟಗಾರರು, ಸಾಹಿತಿ, ಚಿಂತಕರಿಗೆ ಆನೆಯು ಕನ್ನಡ ಶಾಲು ಹೊದಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿತು.  ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಕುಟುಂಬ. ಮೂಗುರು ಕುಟುಂಬದ ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಒಟ್ಟು 69 ಜನರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು, 7 ಸಾಧಕರಿಗೆ ಕರುನಾಡ ಕರ್ನಾಟಕ ರತ್ನ ಪುರಸ್ಕಾರ ನೀಡಲಾಯಿತು.  ಈ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ದಿನೇಶ್ ಖಿವೇಸರ, ರಾಜೇಶ್ ಬಂಥಿಯಾ, ರೂಪ್ ಚಂದ್ ಕುಮತ್, ಶ್ರೇಯನ್ಸ್ ಗೊಲೆಚಾ,...

ಮಂಗ ದಾಳಿ ಮಹಿಳೆಯ ಕೈ ಮುರಿತ ಸಾರ್ವಜನಿಕರಲ್ಲಿ ರಲ್ಲಿ ಆತಂಕ!

ಇಮೇಜ್
ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾ.ಪಂ ವ್ಯಾಪ್ತಿಯ ಬುದ್ದಿನ್ನಿ.ಎಸ್. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕರಿ ಮುಸುಡಿಯ ಮಂಗವೊಂದು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಾ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ ಶಾಲೆಯ ಮೈದಾನದಲ್ಲಿನ ಗಿಡ ಮರಗಳಿಗೆ ನುಗ್ಗಿ ಶಾಲಾ ಮಕ್ಕಳು ಹಾಲು ಕುಡಿಯುವ ಮತ್ತು ಊಟ ಮಾಡುವ ಸಂದರ್ಭದಲ್ಲಿ ಮಕ್ಕಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದರಿಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಮುಖ್ಯಗುರುಗಳು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಪೋನ ಮೂಲಕ ಮಾಹಿತಿ ನೀಡಿದರೆ ಅರಣ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸುತ್ತಾರೆ. ಲಿಂಗಸುಗೂರು ತಾಲೂಕಿನ ಅರಣ್ಯಾಧಿಕಾರಿ ವಿದ್ಯಾ ರವರ ಗಮನಕ್ಕೆ ತಂದರೆ ಪಿಡಿಒ ರವರು ಪತ್ರ ಕೊಟ್ಟರೆ ನಮ್ಮ ಇಲಾಖೆಯಿಂದ ಮಂಗ ಹಿಡಿಯುವ ತಂಡವನ್ನು ನಾವು ಕಳಿಸುತ್ತೇವೆ ಮಂಗ ಹಿಡಿಯುವ ತಂಡಕ್ಕೆ ಗ್ರಾ.ಪಂ ನವರೇ ಖರ್ಚುಕೊಡಬೇಕೆಂದರು ಅರಣ್ಯಾಧಿಕಾರಿಗಳ ಮಾಹಿತಿಯನ್ನು ಪಿಡಿಒ ರವರ ಗಮನಕ್ಕೆ ತಂದರೆ ಗ್ರಾ.ಪಂ ಖಜಾನೆಯಲ್ಲಿ ಹಣವಿಲ್ಲವೆನ್ನುತ್ತಾರೆ ಎರಡು ದಿನಗಳ ಹಿಂದೆ ಗದ್ದೆಮ್ಮ ಗಂಡ ನಿಂಗಪ್ಪ ಎನ್ನುವ ಮ‌‌ಹಿಳೆ ಮಾಳಿಗೆ ಮೇಲೆ ಬಟ್ಟೆ ತರುವಾಗ ಮಂಗ ದಾಳಿ ಮಾಡಿದ್ದರಿಂದ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾಳೆ. ಕಲ್ಲಪ್ಪ ಪೂಜಾರಿ ಎನ್ನುವವರ ಮೇಕೆ ಮರಿಮೇಲೆ ಮಂಗದಾಳಿ ಮಾಡಿ ಸಾಯಿಸಿದೆ ಮನೆಯ ಒಳಗೆ ನುಗ್ಗಿ ಆತಂಕ ಸೃಷ್ಟಿಸಿದೆ ...

"ಸಾರ್ವಜನಿಕರ ಸಹಕಾರವು ಬಹಳ ಮುಖ್ಯ :ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ "

ಇಮೇಜ್
  *ಜನ ಸಂಪರ್ಕ ಸಭೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ:ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ* "ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹೇಳಿಕೆ ಅಪರಾಧ ತಡೆಗೆ ಸಿಸಿ ಕ್ಯಾಮರ ಅಳವಡಿಸಿ, ಅಕ್ರಮ ದಂಧೆಗಳಿಗೆ ಕಡಿವಾಣ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು " ಕೊಟ್ಟೂರು: ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಬುಧವಾರ ರಂದು ಪೋಲೀಸ್ ಇಲಾಖೆಯು ಜನ ಸಂಪರ್ಕ ಸಭೆಯನ್ನು  ಏರ್ಪಡಿಸಿದ ಹಿನ್ನೆಲೆಯಲ್ಲಿ ಸಭೆ ಉದ್ದೇಶಿಸಿ ಕುಂದು ಕೊರತೆಗಳ  ಆಲಸಿ ಕೂಡ್ಲಿಗಿ ವಿಭಾಗ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು ಕೊಟುರೇಶ್ವರ ಕಾಲೇಜ್ ,ಜ್ಯೂನಿಯರ್ ಕಾಲೇಜ್‌ನಲ್ಲಿ ಈಗಾಗಲೆ ಸಿಸಿ ಟಿವಿ ಅಳವಡಿಸಿದ್ದಾರೆ. ಪಟ್ಟಣದಲ್ಲಿ ಸಿಸಿ ಟಿವಿ ಅಳವಡಿಕೆಗೆ ಪಪಂ ಮುಂದಾಗಬೇಕು. ಕಳ್ಳತನ ಹಾಗೂ ಇತರೆ ಅಪರಾದಗಳನ್ನು ತಡಿಯಲು ಅನುಕೂಲವಾಗುತ್ತೆ. ಇನ್ಸ್ಪೆಟ್ , ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ದಂಧೆ,ಮಟ್ಕಾ, ಜೂಜಾಟ ಕ್ಯಾನ್ಸರ್  ಗಡ್ಡೆ ಇದ್ದಂತೆ  ಇದನ್ನು ತಡೆಯುವಲ್ಲಿ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ. ಎಂದರು. ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಕೊಟ್ಟೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವುದರಿಂದ ಪಟ್ಟಣದ ವ್ಯಾಪಾರಿಗಳು ಸುರಕ್ಷತೆ ಹಿತ ದೃಷ್ಟಿಯಿಂದ ಅಂಗಡಿ ಮಾಲೀಕರು ಹಾಗೂ ಜನಸಂದಣಿ ಇರುವ ಜ...

ರಾಷ್ಟ್ರಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದದ್ದು - ಚಕ್ರವರ್ತಿ ಸೂಲಿಬೆಲೆ

ಇಮೇಜ್
  ಬೆಂಗಳೂರು, ನ, ೨೭; ರಾಷ್ಟ್ರಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದದ್ದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.  ನಗರದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಒಂದು ದಿನದ ಶಿಕ್ಷಕರ ಕಾರ್ಯಗಾರ “ಪ್ರೇರಣಾ ಪ್ರವಾಹ" ಕಾರ್ಯಗಾರದಲ್ಲಿ "ವ್ಯಕ್ತಿತ್ವ ನಿರ್ಮಾಣಕ್ಕಾಗಿ ಬೋಧನೆ” ವಿಷಯವಾಗಿ ಮಾತನಾಡಿದ ಅವರು, ಶಿಕ್ಷಕರು ನಕಾರಾತ್ಮಕ ಮನೋಭಾವನೆಯಿಂದ ಹೊರಬಂದು, ತಮ್ಮ ಬದುಕನ್ನು ವಿದ್ಯಾರ್ಥಿಗಳಿಗಾಗಿ ಸಮರ್ಪಿಸಬೇಕು. ಮಾದರಿಯಾಗಿ ನೈತಿಕ ಶಿಕ್ಷಣ ಬೋಧಿಸಬೇಕು ಎಂದರು.  ಶಿಕ್ಷಕರು ಗೊಂದಲಕ್ಕೆ ಒಳಗಾಗದೇ ತಮ್ಮ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಭಾರತ ಮುಂಬರುವ ದಿನಗಳಲ್ಲಿ 6ಜಿ ತಂತ್ರಜ್ಞಾನದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.  ಬೆಂಗಳೂರಿನ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಮೇಲ್ವಿಚಾರಕರಾದ ಸ್ವಾಮಿ ತದ್ಯುಕ್ತಾನಂದಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶಗಳಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.  ಎಪಿಎಸ್ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ.ವಿಷ್ಣುಭರತ್‌ ಮಾತನಾಡಿ ಶ್ರೇಷ್ಟ ಭಾರತದ ನಿರ್ಮಾಣಕ್ಕೆ ಶಿಕ್ಷಕರೆ ರೂವಾರಿಗಳಾಗಬೇಕು. ಸೇವೆ, ತ್ಯಾಗ ಭಾರತದ ಅವಳಿರತ್ನಗಳಾಗಿದ್ದು, ವ್ಯಕ್ತಿಗಿಂತ ಸಂಸ್ಥೆ ಮುಖ್ಯವ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ 27 ರಂದು 3ನೇ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ.

ಇಮೇಜ್
ಲಿಂಗಸಗೂರು:26  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಕರ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ಆದೇಶದಂತೆ.ಇದೇಂಬರ್27 ಬುಧುವಾರದಂದು ಲಿಂಗಸುಗೂರಿನ ಶಂಕರ್ ರೆಡ್ಡಿ ಕಲ್ಯಾಣಮಂಟಪದಲ್ಲಿ 3ನೇ ಜಿಲ್ಲಾ ಪತ್ರಕರ್ತರ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯಿಂದ ಪ್ರಪ್ರಥಮ ಬಾರಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿಗೆ ಆಗಮಿಸಿದ ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯ ಮೂರ್ತಿಗಳಾದ ಸಂತೋಷ್ ಹೆಗಡೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾ ರ್ಜುನ, ಅವರು ಭಾಗವಹಿಸಿದ್ದರು. ಇದೇ ವೇಳೆ ನಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗ್ಡೆ  ವಿದ್ಯಾರ್ಥಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಕಲಾ ತಂಡಗಳು ವೇದಿಕೆಯನ್ನು ರಂಜಿಸಲು ಆಗಮಿಸಲಿವೆ. ತಾಲೂಕಿನ ಜನ ಪ್ರತಿನಿಧಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಯಚೂರು ಜಿಲ್ಲೆಯ ಪ್ರತಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.ಕನಿಪ ಸಂಘಟನೆಯ ಪತ್ರಕರ್ತರ ಮಟ್ಟದ ಧ್ವನ...

ಆನ್ವರಿ ಪ್ರೌಢಶಾಲೆಯಲ್ಲಿ ಭಾರತೀಯ ಸಂವಿಧಾನ ದಿನವನ್ನು. ಅದ್ದೂರಿಯಾಗಿ ಆಚರಣೆ.

ಇಮೇಜ್
ಹಟ್ಟಿ ಚಿನ್ನದ ಗಣಿ:26 ಭಾರತೀಯ ಸಂವಿಧಾನ ದಿನ 1949ರ ನವಂಬರ್ 26ರಂದು ನಮ್ಮ ಸಂವಿಧಾನ ಅಂಗೀಕಾರಗೊಂಡ ದಿನ. ಈ ಸಂವಿಧಾನವನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತ ಅವಿಸ್ಮರಣೆಯ ದಿನದಂದು. ಲಿಂಗಸಗೂರು ತಾಲೂಕಿನ ಆನ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಸಂವಿಧಾನ ಪೀಠಿಕೆಗೆ ಹಾಗೂ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ನಂತರ ಮುಖ್ಯ ಗುರುಗಳಾದ ಶಂಕ್ರಪ್ಪ ಸಕ್ರಿ ಸಾರ್ ರವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.ನಂತರ ಶಾಲಾ ವಿದ್ಯಾರ್ಥಿಗಳ ಜೊತೆಗೆ ಸಂವಿಧಾನ ರೂಪಕ ಮಾಡಿದರು. ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಂಕ್ರಪ್ಪ ಸಕ್ರಿ ಸರ್.ಹಾಗೂ ಸಹ ಶಿಕ್ಷಕರು.ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆ ಭಾರತೀಯ ಸಂವಿಧಾನವನ್ನು ಅದ್ದೂರಿಯಾಗಿ ಆಚರಿಸಿದರು.

ದಿ|| ಶ್ರೀ ಉತ್ತಂಗಿ ರುದ್ರಮ್ಮನವರ ಕೊಟ್ರಸ್ವಾಮಿ ಅನಾಥಾಶ್ರಮಕ್ಕೆ:-ದಿನ ನಿತ್ಯದ ಸಮಾಗ್ರಿಗಳ ಕಿಟ್ ನ್ನು ವಿತರಿಸುವ ಮೂಲಕ ಮಾದರಿಯಾದ ಜನಚಿತ್ತ ಟ್ರಸ್ಟ್

ಇಮೇಜ್
ಕೊಟ್ಟೂರು:-ದಿ " ಶ್ರೀ ಉತ್ತಂಗಿ ರುದ್ರಮ್ಮ ಕೊಟ್ರಸ್ವಾಮಿ ಅನಾಥಾಶ್ರಮ ಟ್ರಸ್ಟ್ ಗೆ ದಿನನಿತ್ಯದ ಸಾಮಗ್ರಿಗಳು ದಿನಾಸಿಪಾದರ್ಥಗಳನ್ನು ವಿತರಿಸುವ ಮೂಲಕ ಕಷ್ಟದಲ್ಲಿರುವ ವೃದ್ರಶ್ರಮಕ್ಕೆ ಆಸರೆಯಾ ದಾರಿಯಾಯಿತು ರುದ್ರಮ್ಮ ಅನಾಥಾಶ್ರಮದಲ್ಲಿ ಒಟ್ಟು 14 ಜನ ವೃದ್ದರು ಮತ್ತು ಅಂಗವಿಕಲರಿದ್ದು ರುದ್ರಮ್ಮ ಅವರ ಅಗಲಿಕೆಯಿಂದಾಗಿ ಅನಾಥಾಶ್ರಮ ಸಾಕಷ್ಟು ತೊಂದರೆಯಲ್ಲಿದೆ ವಯೋಸಹಜದ ಕಾಯಿಲೆಗಳಿಂದ ಊಟದ ತೊಂದರೆ ಇಂದ ಅವರಿಗೆ ಜೀವನ ನಡೆಸಲು ಸಾಕಷ್ಟು ತೊಂದರೆ ಆಗುತ್ತಿದೆ ದಾನಿಗಳು ಅವರ ಕಷ್ಟಗಳನ್ನು ಅರಿತು ನಿಮ್ಮ ಸ್ವಯಂ ಸೇವೆಯನ್ನು ಖುದ್ದಾಗಿ ಮಾಡಬೇಕೆಂದು ಅಲ್ಲಿನ ವೃದ್ಧರು ಕೇಳಿಕೊಂಡರು. ಜನಚಿತ್ತ ಟ್ರಸ್ಟ್ ನಲ್ಲಿನ ಸರ್ವ ಸದಸ್ಯರಾದ ಎಂ ಎಂ ಜೆ ಮಂಜುನಾಥ್, ಎಂ ಎಂ ಜೆ ರೇಣುಕಾರದ್ಯ ದರ್ಶನ್ ಬೇವೂರು ಅಲ್ತಾಫ್ ಏಕಾಂತ ತುಪ್ಪದ ಗಣೇಶ್ ಪೂಜಾರ್ ಎಂ ಎಂ ಜೆ ಪ್ರಮೋದ್ ಮುರಳಿ ಜಿಬಿ ಕೊಟ್ರೇಶ್ ಉಪಸ್ಥಿತರಿದ್ದರು. ಕೊಟ್ 1  ಕೊಟ್ರಸ್ವಾಮಿ ಅನಾಥಶ್ರಮದ ಸಂಸ್ಥಾಕ ಅಧ್ಯಕ್ಷರಾದ ದಿ. ಉತ್ತಂಗಿ ರುದ್ರಮ್ಮನವರ ಜೀವಿತಾವಧಿಯಲ್ಲಿ ಆನಾಥಶ್ರಮದಲ್ಲಿ, ವೃದ್ಧರಿಗೆ, ಅನಾಥರಿಗೆ, ಉತ್ತಮವಾದ ಆಹಾರದ ಜೊತೆಗೆ, ಅಲ್ಲಿರುವ ಅನಾಥರನ್ನು ಕಾಳಜಿಯಿಂದ ಸಾಕುತ್ತಿದ್ದರು. ಆದರೆ ರುದ್ರಮ್ಮನವರು ದೈವದೀನರಾದಗಿಂದ, ಅನಾಥಶ್ರಮದಲ್ಲಿ ಅನಾಥರಿಗೆ, ವೃದ್ದರಿಗೆ ಸರಿಯಾದ ಊಟದ ವ್ಯವಸ್ಥೆ ದೊರುಕುತ್ತಿಲ್ಲ ಎಂದರು.  ಕೊಟ್ 2  ಹೀಗಿರುವ ಅನಾಥಾಶ್ರಮವನ್ನು ನಡೆಸುತ...

ಅಂಧರಿಗೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ನ ಹೊಸ ಕನ್ನಡಕಗಳ ಆವಿಷ್ಕಾರ:ಪ್ರೊ.ಎಸ್.ಎಸ್.ಐಯ್ಯಂಗಾರ್

ಇಮೇಜ್
 ಬೆಂಗಳೂರು, ನ,26; ಆಚಾರ್ಯ ಪಾಠಶಾಲಾ ಇಂಜಿನೀಯರಿಂಗ್‌ ಕಾಲೇಜಿನ ಪ್ರಥಮ ವರ್ಷ ಬಿ.ಇ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಪ್ರಪಂಚದ ಪ್ರಸಿದ್ಧ ವಿಜ್ಞಾನಿ ಹಾಗೂ ಅಮೆರಿಕಾದ ಪ್ಲೊರಿಡಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರೊ.ಎಸ್.ಎಸ್.ಐಯ್ಯಂಗಾರ್‌ ಹಾಗೂ ಇಂಡಿಯನ್‌ ಇನ್ಸ್ಟಿಟ್ಯೂಟ್ ‌ ಆಫ್‌ ಸೈನ್ಸ್‌ನ ಪ್ರೊ.ಕೆ.ಜೆ.ರಾವ್‌ ಉದ್ಘಾಟಿಸಿದರು. ಪ್ರೊ.ಎಸ್.ಎಸ್.ಐಯ್ಯಂಗಾರ್ ಮಾತನಾಡಿ, ಪ್ರಪಂಚದ ಅಂಧರಿಗೊಂದು ಬೆಳಕಾಗುವ ಸಾಧನವೊಂದನ್ನು ತಾವು ಸಂಶೋಧಿಸಿದ್ದು, ಈ ಕನ್ನಡಕದ ಮೂಲಕ ಅಂಧರೂ ಸಹ ದೃಷ್ಠಿಯನ್ನು ಪಡೆಯಬಹುದು. ಈ ಸಂಶೋಧನೆಯು ಇದೆ ಡಿಸೆಂಬರ್‌ 9 ರಂದು ಲೋಕಾರ್ಪಣೆಗೊಳ್ಳಲಿದೆ. ಎಪಿಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಅತಿ ಹೆಚ್ಚು ಅಂಧರು ಅಧ್ಯಯನ ಮಾಡುತ್ತಿರುವುದು ಬಹಳ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ. ಈ ಕನ್ನಡಕಗಳು ಲೋಕಾರ್ಪಣೆಗೊಂಡನಂತರ ಸಂಸ್ಥೆಯ ಎಲ್ಲಾ ಅಂಧ ವಿದ್ಯಾರ್ಥಿಗಳಿಗೆ ಈ ಕನ್ನಡಕಗಳನ್ನು ನೀಡುತ್ತೇವೆ ಎಂದು ತಿಳಿಸಿದರು.  ಪ್ರೊ.ಕೆ.ಜೆ.ರಾವ್‌, ಮಾತನಾಡಿ, ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು, ಹೆಚ್ಚು ಕ್ರಿಯಾಶೀಲರಾಗಬೇಕು, ಸಮಾಜದ ಉತ್ತಮ ನಾಗರೀಕರಾಗಿ, ತಂದೆ-ತಾಯಿಯನ್ನು ಗೌರವಿಸಿ ಹಾಗೂ ಜೀವನದಲ್ಲಿ ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು .ಹಾಗೂ ಇದೆ ಸಂದರ್ಭದಲ್ಲಿ ಡಾ.ಸಿ.ವಿ.ಹರೀಶ್‌, ಸಂಶೋಧಕ...

ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ - ಕೆ ನೇಮರಾಜನಾಯ್ಕ

ಇಮೇಜ್
  ಕೊಟ್ಟೂರು: ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ನಿಖರ ಅಂಕಿ ಅಂಶಗಳೊಂದಿಗೆ ಬರಬೇಕೇ ವಿನಃ ಸುಳ್ಳು ಅಂಕಿ ಅಂಶಗಳನ್ನು ನೀಡಿ ನಮ್ಮನ್ನು ಯಾಮಾರಿಸಲು ನೋಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ  ಕ್ಷೇತ್ರದ ಶಾಸಕ ಕೆ.ನೇಮರಾಜನಾಯ್ಕ ಎಚ್ಚರಿಕೆ  ನೀಡಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ  ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀಧಿಸುವ ಧಾನ್ಯಗಳನ್ನು ಬೇರೆಯವರ ಪಹಣಿಯನ್ನು  ಮಧ್ಯವರ್ತಿಗಳು ದುರಪಯೋಗ ಪಡಿಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಯದರ್ಶಿ ಎ.ಕೆ.ವೀರಣ್ಣ ಇವರಿಗೆ ಸೂಚಿಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕೇ ವಿನಃ ತಮಗಿಷ್ಟ ಬಂದಂತೆ ನಡೆದುಕೊಳ್ಳುವಂತಿಲ್ಲ ಎಂದು ಕಟ್ಟು ನಿಟ್ಟಾಗಿ ನೋಟಿಸ್ ನೀಡಲು ಆದೇಶಿಸಿದರು.      ರೈತರಿಗೆ ಬೆಳೆ ಪರಿಹಾರ ಹಣವನ್ನು ಖಾಸಗಿ ವಿಮಾ ಸಂಸ್ಥೆಗಳು ಇಂದಿಗೂ ನೀಡದಿರುವುದು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖಾಧಿಕಾರಿ ಕೊಳ್ಳಿ ವಾಮದೇವ ಇವರಿಗೆ...

ಮಸ್ಕಿ ಪರಮ ಪೂಜ್ಯ ದಿ.ವೀರಭದ್ರಯ್ಯ ತಾತ ಮಹಾ ಸ್ವಾಮಿಗಳು ಕೃತ ಗದ್ದುಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ.

ಇಮೇಜ್
ಮಸ್ಕಿ : ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣದ ಗಾಂಧಿ ನಗರದಲ್ಲಿ ಇರುವ ಶ್ರೀ ಪರಮ ಪೂಜ್ಯ ದಿ.ವೀರಭದ್ರಯ್ಯ ತಾತ ಮಹಾ ಸ್ವಾಮಿಗಳು ಹಾಗೂ ಮೋತೋ ಶ್ರೀ ಶರಣಮ್ಮ ನವರ  ಕೃತ ಗದ್ದುಗೆ ಇಂದು ಮುಂಜಾನೆ  ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಾಯಂಕಾಲ ಗದ್ದುಗೆ ಮುಂದೆ ಭಕ್ತರು ಕಾರ್ತಿಕ  ದೀಪೋತ್ಸವ ಹಾಗೂ ಅನ್ನ ದಾಸೋಹ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಕುರಿತು ಮಾತನಾಡಿ ನಾವು ಪ್ರತಿವರ್ಷ   ದೀಪೋತ್ಸವ ಕಾರ್ಯಕ್ರಮ ಆಚರಣೆ ಮಾಡುತ್ತಾರೆ ಈ ಮಾಸದಲ್ಲಿ ಪ್ರತಿಯೊಬ್ಬ ಭಕ್ತರು  ಶಿವನ ಆರಾಧನೆ ಮಾಡಿದರೆ ನಮಗೆ ಹೆಚ್ಚಿನ ಫಲ ದೊರೆಯುತ್ತದೆ  ಎಂದು  ರುದ್ರಯ್ಯ ಸ್ವಾಮಿ ಸೊಪ್ಪಿಮಠ ಹೇಳಿದರು. ಈ ವೇಳೆ, ಶರಣಬಸವ ಸೊಪ್ಪಿಮಠ, ದೇವಯ್ಯ  ಸಾಮಿ ಕಾರಲಕುಂಟಿ ,ಮಲ್ಲಯ್ಯ ಸೊಪ್ಪಿಮಠ, ಚನ್ನಬಸವ ಸ್ವಾಮಿ, ಅಮರೇಶ ಸೊಪ್ಪಿಮಠ, ವಿಜಯ ಕುಮಾರ,ಮಂಜುನಾಥ ಸೊಪ್ಪಿಮಠ, ಕಿರಣ್ ಕುಮಾರ ಸೊಪ್ಪಿಮಠ, ವಿಶ್ವನಾಥ ಸೊಪ್ಪಿಮಠ ಹಾಗೂ ಮಹಿಳೆಯರು ಹಾಗೂ ಮಕ್ಕಳು ಹಾಗೂ ಭಕ್ತರು ಇದ್ದರು.

ನಾಗಲದಿನ್ನಿ ಯುವಕ ಬಾಂಗ್ಲಾ ಗಡಿಯಲ್ಲಿ ಬಿಎಸ್ಎಫ್ ಯೋಧರಾಗಿ ನೇಮಕ ಅಭಿನಂದನಾ ಸಮಾರಂಭ

ಇಮೇಜ್
  *ಮಸ್ಕಿ* ತಾಲ್ಲೂಕು ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗಲದಿನ್ನಿ ಎಂಬ ಪುಟ್ಟ ಹಳ್ಳಿಯ ಯುವಕ ಇಂದು ಭಾರತೀಯ ಸೈನ್ಯ ಗೆ ಸೇರಿ ಭಾರತಾಂಬೆಯ ಸುಪುತ್ರನಾಗಿ ಹೊರಹೊಮ್ಮಿದ್ದು ನಿಜಕ್ಕೂ ಸಂತೋಷದ ಕ್ಷಣವಾಗಿದೆ.ನಾಗಲದಿನ್ನಿ ಗ್ರಾಮದ ಗೋಪಾಲ ತಂದೆ ಹನುಮಂತಪ್ಪ ಎಂಬ ಬಡ ಕುಟುಂಬದ ಯುವಕ,ಗ್ರಾಮೀಣ ಭಾಗದಲ್ಲಿ ಅಪರೂಪದ ವ್ಯಕ್ತಿಯಾಗಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದಾರೆ,ಇವರು ಕಳೆದ ವರ್ಷ ನಡೆದ ಗಡಿ ಭದ್ರತಾ ಪಡೆಯ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ನೇಮಕವಾಗುತ್ತಾರೆ. ಆದರೆ ದೂರದ ಜಾರ್ಖಂಡ್ ಗೆ ಹೋಗಬೇಕಾಗುತ್ತದೆ ಆದರೆ ಭಾಷೆ ಸಮಸ್ಯೆ,ದೂರದ ಪ್ರಯಾಣ ತುಂಬಾ ಸಮಸ್ಯೆ ಒದಗಿಬಂದಾಗ ಎನೇ ಆಗಲಿ ನಾನು ಹೊಗಲೇಬೇಕು ಎಂಬ ಹಠದೊಂದಿಗೆ ಇವರು ಜಾರ್ಖಂಡ್ ನಲ್ಲಿ ಒಂಭತ್ತು ತಿಂಗಳ ಕಠಿಣ ತರಬೇತಿ ಪಡೆದು ಯಶಸ್ವಿಯಾಗಿ ಎಲ್ಲರೂ ಇಷ್ಟಪಡುವ ರೀತಿಯಲ್ಲಿ ಅತ್ಯುತ್ತಮ ತರಬೇತಿ ಪಡೆದು ಕೊಂಡು ಸ್ವ ಗಾಮ ನಾಗಲದಿನ್ನಿಗೆ ಆಗಿಮಿಸಿದಾಗ ಗೋಪಾಲ ರವರ ತಂದೆ ಹನುಮಂತಪ್ಪ ನವರು ಮಗನ ದೇಶ ಪ್ರೇಮದ ಹುದ್ದೆಗೆ ಆಯ್ಕೆಯಾಗಿದ್ದಕ್ಕೆ ಖುಷಿಯಿಂದ ಅಪಾರ ಬಂಧುಬಳಗ,ಗುರುಗಳಿಗೆ, ಸ್ನೇಹಿರಿಗೆ ಅಭಿನಂದನಾ ಸಮಾರಂಭ ನಡೆಸಿ ಔತಣಕೂಟ ಏರ್ಪಡಿಸಿದ್ದರು.  ಈ ಸಭೆಯಲ್ಲಿ ನೂರಾರು ಜನರು ಭಾಗಿಯಾಗಿ ಶುಭಾಶಯಗಳು ತಿಳಿಸಿದರು.

ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಅಡಳಿತ ಪಾರದರ್ಶಕವಾಗಿರಬೇಕು : ಕೆ ಎಂ ಎಫ್ ಅಧ್ಯಕ್ಷ ಎಸ್ ಭೀಮಾನಾಯಕ್

ಇಮೇಜ್
  ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ಸದಸ್ಯರ ವತಿಯಿಂದ ಅಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಸೋಮವಾರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಂತರ ಮಾತನಾಡಿ ಎಲ್ಲಾ ಸದಸ್ಯರು ಕೃಷಿ ಉತ್ಪನ್ನ ಮಾರಾಟ ನೀತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತಂದು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಿ,ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನಾಗಿಸಿ ಎಂದು ಹೇಳಿದರು  ಈ ಸಂಧರ್ಭದಲ್ಲಿ ಕೂಡ್ಲಿಗಿ ಶಾಸಕ ಶ್ರೀ ಎನ್.ಟಿ ಶ್ರೀನಿವಾಸ್,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ದ್ವಾರುಕೇಶ್,ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರಾದ ಶಿರಿಬಿ ಕೊಟ್ರೇಶ್ಸ,ಎಂ ಓ ಕೊಟ್ರಯ್ಯ ಸರ್ವ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ರಮೇಶ್, ಪುರಸಭೆ ಅಧ್ಯಕ್ಷರಾದ ಶ್ರೀ ಮರಿ ರಾಮಪ್ಪನವರು,ಕೆ.ಪಿ.ಸಿ.ಸಿ ಸದಸ್ಯರಾದ ಗೂಳಿ ಮಲ್ಲಿಕಾರ್ಜುನ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೋರಿ ಗೋಣಿ ಬಸಪ್ಪನವರು, ಪುರಸಭೆ ಸದಸ್ಯರಾದ ಡಿಶ್ ಬಾಳಪ್ಪನವರು, ಮುಖಂಡರಾದ,ನಾಗರಕಟ್ಟೆ ರಾಜೇಂದ್ರ ಪ್ರಸಾದ್ ,ಅಕ್ಕಿ ತೋಟೇಶ್...

75ನೇ ಸಂವಿಧಾನ ಸಮರ್ಪಣಾ ದಿನಾಚರಣೆ- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನೆ

ಇಮೇಜ್
ಬೆಂಗಳೂರು; 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ 26 ರಂದು ಬೆಂಗಳೂರು ಯುವನಿಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಕೀಲರ ಸಂಘದ ನೂತನ ಸಂಘದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ  ಮೈಸೂರು ಉರಿಲಿಂಗಪೆದ್ದಿ ಮಠದ ಸ್ವಾಮೀಜಿ ಶ್ರೀ ಪರಮಪೂಜ್ಯ ಜ್ಞಾನಪ್ರಕಾಶ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಕ.ರಾ.ಪ.ಟಾ ಪ.ಪಂ.ವ.ಸಂ(ರಿ). ಅಧ್ಯಕ್ಷರಾದ ಎಂ. ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯ, ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್‌, ಕೃಷ್ಣ ಎನ್ ದೀಕ್ಷಿತ್‌ ಗೃಹ ಸಚಿವ ಜಿ. ಪರಮೇಶ್ವರ್‌ ಸಚಿವರುಗಳಾದ ಡಾ| ಹೆಚ್.ಸಿ. ಮಹದೇವಪ್ಪ, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಭಕ್ತವಚ್ಚಲರ, ಕರ್ನಾಟಕ ಉಚ್ಚ ನ್ಯಾಯಾಲಯ ಅಡಿಷನಲ್ ಅಡ್ವಕೇಟ್ ಜನರಲ್ ಎಸ್.ಎ. ಅಹಮದ್‌ ಅವರುಗಳು ಭಾಗವಹಿಸಲಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಎಂ.ಮುನಿಯಪ್ಪ, ಶ್ರೀ.ಭಕ್ತವತ್ಸಲ, ಎಂ.ಕುಂಭಯ್ಯ, ಎಸ್.ಬಿ.ಸುರೇಶ್, ಮುನಿರಾಜು, ಕೆ.ಪಿ.ವೆಂಕಟೇಶ್, ಗೋಪಾಲ್, ಟಿ.ಎಲ್.ನಾಗರಾಜ್, ಚಂದ್ರಶೇಖ‌ರ್, ಮಾರಪ್ಪ, ಸಂಪತ್ ಕುಮಾರ್ ಭಾಗವಹಿಸಿದ್ದರು

*ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಪಾದಯಾತ್ರೆ ಜಾಲಿಹಾಳ ವಿಶ್ವಕರ್ಮ ಬಂಧುಗಳಿಂದ ಸನ್ಮಾನ,ಹಣ್ಣು,ಹಂಪಲು ವಿತರಣೆ*

ಇಮೇಜ್
ಸಿಂಧನೂರು ತಾಲೂಕಿನ ಮುಕುಂದ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಕಾರ್ತೀಕ ಮಾಸದ ಅಂಗವಾಗಿ ಇಂದು ನಾಡಿನ ಹಾಗೂ ವಿಶ್ವಕರ್ಮ ಸಮಾಜದ ಒಳಿತಿಗಾಗಿ ಮುಕ್ಕುಂದ ಶ್ರೀ ಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಬಸವರಾಜ ಆಚಾರಿ ಇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಲೆಂದು ಚನ್ನಳ್ಳಿ ಕ್ರಾಸ್ ಬಳಿ ಜಾಲಿಹಾಳ ಹೋಬಳಿ ವಿಶ್ವಕರ್ಮ ಬಂಧುಗಳು ಪಾದಯಾತ್ರೆ ನೇತೃತ್ವ ವಹಿಸಿದ ಶ್ರೀ ಬಸವರಾಜ ಆಚಾರಿ ಅವರಿಗೆ ಸನ್ಮಾನಿಸಿ,ಗೌರವಿಸಿ ಹಣ್ಣು, ಹಂಪಲುಗಳನ್ನು ನೀಡಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಪಾದಯಾತ್ರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಿಂದ ಪ್ರಾರಂಭವಾಗಿ ಕಾರಟಗಿ,ನಾಗನಕಲ್ಲು(ಲಕ್ಷೀ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ತಾವರಗೇರ(ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಗಜೇಂದ್ರಗಡ ಪಟ್ಟಣದ(ಮೌನೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ),ಬೇವಿನಹಾಳ(ಉಚ್ಚೀರಪ್ಪ ಅಜ್ಜ ದೇವಸ್ಥಾನದಲ್ಲಿ ರಾತ್ರಿ ವಿಶ್ರಾಂತಿ)ಸುರೇಬಾನ (ಶರಣರ ಮಠದಲ್ಲಿ ರಾತ್ರಿ ವಿಶ್ರಾಂತಿ) ನಂತರ ಈ ಮಾರ್ಗವಾಗಿ ವಿಶ್ವಕರ್ಮರ ಅಧಿದೇವತೆ ಶ್ರೀ ಕ್ಷೇತ್ರ ಸಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ತಲುಪಲಿದೆ.ಈ ಪಾದಯಾತ್ರೆ ಯಶಸ್ವಿಗಾಗಲೆಂದು ಈ ನಾಡಿಗೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ತಾಯಿ ಕಾಳಿಕಾದೇವಿ ಕೃಪೆ ದೊರೆಯಲೆಂದು ಸಿಂಧ...

*ಯುನಿಕ್ ಚಾರಿಟಬಲ್ ಸಮಾಜಮುಖಿ ಸೇವೆ ಶ್ಲಾಘನೀಯ : ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು*

ಇಮೇಜ್
ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮವನ್ನು ಷ ||ಬ್ರ||ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಸಮಾಜಕ್ಕೆ ಉಪಯುಕ್ತವಾದ ಸೇವಾ ಯೋಜನೆಗಳನ್ನು ರೂಪಿಸಿ ಜನರ ಸೇವೆಗೆ ಇದೆ. ಸಂಘಟನೆ ಕಟ್ಟುವ ಮನಸ್ಸು , ಜನಸೇವೆ ಮಾಡುವ ಕನಸು ಸಂಘಟಕರಲ್ಲಿರಬೇಕು. ಯುನಿಕ್ ಟ್ರಸ್ಟ್ ನವರು ತಮ್ಮ ದುಡಿಮೆಯ ಉಳಿತಾಯದಲ್ಲಿ ಇಂಥಾ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು  ಸೇವಾ ಟ್ರಸ್ಟ್‌ಗಳು ಈ ರೀತಿಯ ಜನ ಉಪಯೋಗಿ ಆರೋಗ್ಯ ಕೇಂದ್ರವನ್ನು ಮಾಡುತ್ತಿರುವುದು ಮೆಚ್ಚುವುದು, ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವವರನ್ನು ಮೆಚ್ಚಿಕೊಳ್ಳುವುದು ಬಡವರಿಗೆ ಉಚಿತ ಕನ್ನಡಕ ಕೊಡುವಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೂಪಿಸಲು ಟ್ರಸ್ಟ್ ಸದಸ್ಯರಿಗೆ ಕೊಟ್ಟೂರು ಸಮುದಾಯ ಆರೋಗ್ಯ ವೈದ್ಯಾಧಿಕಾರಿ ಬದ್ಯಾನಾಯ್ಕ್ ಟ್ರಸ್ಟ್ ಸದಸ್ಯರಿಗೆ ಸಲಹೆ ನೀಡಿದರು ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ತಮ್ಮ ದುಡಿಮೆಯ ಉಳಿತಾಯ ಹಣದಲ್ಲಿ ಸಮಾಜ ಸೇವೆ ನಡೆಯುತ್ತಿದೆ. ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತರು ಹಾಗೂ ಟ್ರಸ್ಟ್ ಸದಸ್ಯರ ಅಭಿಲಾಷೆ ಆರೋಗ್ಯ ಇಲಾಖೆ ವಿಜಯನಗರ ಮತ್ತು ಸಮುದಾಯ ಕೊಟ್ಟೂರು ಹಾಗೂ ಆರೋಗ್ಯ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಲ್ಲಿ ಈ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನ...

ಜೀವನಶೈಲಿಯನ್ನು ಬದಲಾಯಿಸಿ ಸಾವಯವ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ : ತಹಸೀಲ್ದಾರ್ ಡಾ:ಮಲ್ಲಪ್ಪ. ಕೆ.ಯರಗೋಳ ಕರೆ

ಇಮೇಜ್
  ಮಸ್ಕಿ : ಪಟ್ಟಣದ ಅಮರ ಪ್ರೇಮ ಕಾನ್ವೆಂಟ್ ನಲ್ಲಿ ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದಲ್ಲಿ ಉಜ್ಜೀವನ ಯೋಜನೆಯ ಸಾವಯವ ಕೃಷಿಯ ಕುರಿತು ಇಲಾಖೆಗಳ ಅಧಿಕಾರಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಜೀವನ ಶೈಲಿಯನ್ನು ಬದಲಾಯಿಸಿ ಸಾವಯ ಕೃಷಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ತಹಶೀಲ್ದಾರರಾದ ಡಾ : ಮಲ್ಲಪ್ಪ.ಕೆ.ಯರಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು.  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅಮರೇಗೌಡ ತಾಲೂಕ ಪಶು ವೈದ್ಯಾಧಿಕಾರಿಗಳು ಮಸ್ಕಿ ಇವರು ಪಶು ಇಲಾಖೆಯಿಂದ ದೊರೆಯುವ ಸೌಕರ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾದ ಶ್ರೀ ಮಲ್ಲಪ್ಪ ಕೆ ವ್ಯವಸ್ಥಾಪಕರು ನೀರಾವರಿಯಲಕ್ಕೆ ಮಸ್ಕಿ ಇವರು ಸಾವಯವ ಕೃಷಿಯ ಮಹತ್ವದ ಕುರಿತು ಮಾತನಾಡಿದರು. ಅತಿಥಿಗಳಾದ ಶ್ರೀ ಅರಳಪ್ಪ ಹಾಗೂ ಯೋಜನಾ ಸಂಯೋಜಕರಾದ ಶಾಂತಪ್ಪ ಸೋಮನಮರಡಿ ಇವರು ಸಾವಯವ ಕೃಷಿಯ ಕುರಿತು ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಗಾರದಲ್ಲಿ ನೂರಾರು ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡರು.   ಈ ಕಾರ್ಯಕ್ರಮದಲ್ಲಿ ಅಮರ ಪ್ರೇಮ ಕಾನ್ವೆಂಟಿನ ಸಿಸ್ಟರ್ ದೀಪ, ಶ್ರೀ ಮುದುಕಪ್ಪ ಪರಾಪೂರ, ವಿಜಯಕುಮಾರ್ ಕಾಟಿಗಲ್, ಹನುಮಂತ ಬೆನಕನಾಳ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ –ವಿಜ್ಞಾನಿ ಪ್ರೊ.ಎಸ್ ಎಂ ಶಿವಪ್ರಸಾದ್

ಇಮೇಜ್
  ಕೊಟ್ಟೂರು: ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಙಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ  ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ  ‘ ವಿಜ್ಞಾನ  ಅರಿವು ಮತ್ತು ಜಾಗೃತಿ ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು.    ವಿಜ್ಙಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ  ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ    ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.  ಯಂತ್ರಗಳ ಸಹಾಯ...

"ಕರ್ನಾಟಕ ಸಂಸ್ಕೃತಿ ನಾಡಿನ ಪರಂಪರೆಯ ತಾಣ"

ಇಮೇಜ್
ಕೊಟ್ಟೂರು: ರಾಜ್ಯ ಸೇರಿ ಪಕ್ಕದ ರಾಜ್ಯಗಳಲ್ಲಿಯೂ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರಿಗದು ಎಂದಿಗೂ ಅಸ್ಮಿತೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕೆ.ರವೀಂದ್ರನಾಥ ಹೇಳಿದರು. ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಏಕೀಕರಣದ ಮಹತ್ವ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು. ಬ್ರಿಟಿಷ್ ಆಡಳಿತದಲ್ಲಿ ೨೦ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ನಮ್ಮ ಭಾಷಿಕರೇ ಅಧಿಕವಾಗಿದ್ದ ಪ್ರದೇಶಗಳಲ್ಲಿದ್ದ ಕನ್ನಡಿಗರಿಗೆ ಭಾಷಿಕವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಅನೇಕ ವಿಭಿನ್ನ ಸಮಸ್ಯೆಗಳು ಎದುರಾಗಿದ್ದವು. ಇಂತಹ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಉದ್ದೇಶಕ್ಕಾಗಿ, ಕನ್ನಡ ಭಾಷೆಯ ಆಧಾರದ ಮೇಲೆ ಅಖಂಡ ಕರ್ನಾಟಕ ನಾಡನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ನಾಡಿನ ಸಾಹಿತಗಳು, ಕಲಾವಿದರು, ಪತ್ರಿಕೆಗಳು, ಸಂಘ ಸಂಸ್ಥೆಗಳು ನಡೆಸಿದ ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆ ಕಥೆಯಾಗಿದೆ ಎಂದರು. ಕರ್ನಾಟಕ ಸಂಸ್ಕೃತಿಕೆ ನಾಡಿನ ಅರಸರು ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಏಕೀಕರಣದ ನಂತರ ಭಾಷಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡದ ಪ್ರತಿನಿಧಿಕತೆಯನ್ನು ಪುನರಾವಲೋಕನ ಮಾಡಿಕೊಳ್ಳುವುದ ಅವಶ್ಯವಾಗಿದೆ. ರಾಜ್ಯದಲ್ಲಿ ನ...

ಮಸ್ಕಿ ಪುರಸಭೆ ಉಪಚುನಾವಣೆ ಶೇಕಡ 68 ರಷ್ಟು ಮತದಾನ

ಇಮೇಜ್
  ಮಸ್ಕಿ : ಸ್ಥಳೀಯ ಪುರಸಭೆ 3 ನೇ ವಾರ್ಡ್ ಅಭ್ಯರ್ಥಿ ಒಬ್ಬರು ಅಕಾಲಿಕ ಮರಣ ಹೊಂದಿದ್ದರಿಂದ ಮಸ್ಕಿ ಪುರಸಭೆ ಮೂರನೇ ವಾರ್ಡ್ ಗೆ ಉಪಚುನಾವಣೆ ಶನಿವಾರ ನಡೆಯಿತು . ಬೆಳಗ್ಗೆ ಆರಂಭವಾದ ಮತದಾನ ಸಂಜೆವರೆಗೂ ಶಾಂತಿಯುತವಾಗಿ ಮತದಾನ ನಡೆಯಿತು. ಇದೀಗ ಸ್ಥಳೀಯ ಪುರಸಭೆ ಮೂರನೇ ವಾರ್ಡ್ ಉಪಚುನಾವಣೆ ಶೇಕಡ 68% 03ರಷ್ಟು ಮತದಾನವಾಗಿದೆ. ಪುರುಷರ ಮತದಾರ 445 ಮಹಿಳೆ ಮತದಾರರು 509 ಒಟ್ಟು 954 ಮತದಾರರಿದ್ದು ಇದರಲ್ಲಿ 329 ಮಹಿಳೆಯರು ಮತದಾನ ಮಾಡಿದ್ದು, ಇನ್ನುಳಿದ ಪುರುಷ ಮತದಾನ320 ಮತದಾನ ಚಲಾಯಿಸಿದ್ದಾರೆ , ಒಟ್ಟು 649 ಮತದಾನವಾಗಿದ್ದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತ ಮತದಾನ ಜರುಗಿತು. ಮತದಾನದ ನಡುವೆ ಸ್ವಲ್ಪ ಸಮಯ 3 ನೇ ವಾರ್ಡಿನ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ 70 ರಿಂದ 80 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವಾದ ವಿಗ್ವಾದ ಜರುಗಿತು. ಇಂದಿನ ಚುನಾವಣೆ ಆದಂತೆ ಮುಂಬರುವ ಚುನಾವಣೆಗೆ 3 ನೇ ವಾರ್ಡಿನ ಮತದಾರರ ಹೆಸರನ್ನು ಸೇರಿಸುವ ಮೂಲಕ ಸರಿಪಡಿಸಿ ಎಂದು ಪುರಸಭೆ ಮಸ್ಕಿ ಚುನಾವಣಾ ಅಧಿಕಾರಿ ಮತ್ತು ತಾಲ್ಲೂಕ ದಂಡಾಧಿಕಾರಿ ಗಳಿಗೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಭ್ಯರ್ಥಿಗಳ ಅರ್ಜಿಗೆ ಮನವಿ

ಇಮೇಜ್
  ಮಸ್ಕಿ : ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆಯನ್ನು ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಘೋಷಣೆ ಮಾಡಲಾದ ಚುನಾವಣೆ ಪ್ರಯುಕ್ತ ಜರುಗುವ 2024 ನೇ ಸಾಲಿನ ಚುನಾವಣೆಗೆ ಅರ್ಜಿ ಸಲ್ಲಿಸಲು ಮನವಿ. 2024 -25 ನೇ ಸಾಲಿನಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆ ಯೂ  ಡಿರಸೆಂಬರ್ ಹಾಗೂ ಭಾನುವಾರ ರಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 3:00 ಗಂಟೆವರೆಗೆ ಮಸ್ಕಿ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ನಿಗಧಿಪಡಿಸಿರುತ್ತಾರೆ. ತಾಲ್ಲೂಕಿನ ಎಲ್ಲಾ ಸದಸ್ಯರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಮಸ್ಕಿಯಲ್ಲಿ ಹಾಗೂ ಮಸ್ಕಿ ತಾಲ್ಲೂಕಿನ ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ನಾಮಪತ್ರಗಳನ್ನು ಅರ್ಜಿ ಮೂಲಕ ರೂ. 250/- ಗಳ ಠೇವಣಿ ಪಾವತಿಸಿದ ಮೂಲ ರಸೀದಿ, ಪಹಣಿ ಪ್ರತಿಕೆಯೊಂದಿಗೆ ಸಲ್ಲಿಸಬೇಕು. ಚುನಾವಣೆಯ ಪ್ರಕ್ರಿಯೆಯು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಪ್ರಾರಂಭಗೊಂಡು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರ ಸಲ್ಲಿಸುವುದು. ಡಿಸೆಂಬರ್ 07 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರಗಳನ...

ಶಿವಪುತ್ರಪ್ಪ ಜಾಲಹಳ್ಳಿ ರವರಿಗೆ ಕರ್ನಾಟಕ"ರತ್ನಶ್ರೀ"ಪ್ರಶಸ್ತಿ.

ಇಮೇಜ್
  ಜಾಲಹಳ್ಳಿ:ಬೆಂಗಳೂರು ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ)ಬೆಂಗಳೂರು ಇವರು ನೀಡುವ ವಾರ್ಷಿಕ ಪ್ರಶಸ್ತಿ ಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಗೆ ಭಾಜನರಾಗಿದ್ದರು ಶ್ರೀಯುತರಿಗೆ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಎಚ್ಚಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಬೆಂಗಳೂರಿನ ರಾಜಾಜಿನಗರದ ಯಕ್ಷಿತ್ ರಾಯಲ್ ಅಕಾಡೆಮಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಶ್ರೀ ಶಿವಪುತ್ರಪ್ಪ ಇವರಿಗೆ ಕರ್ನಾಟಕ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಿವಪುತ್ರಪ್ಪ ಇವರು.ಸಮೀಪದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರಡಿಯಲ್ಲಿ ಕಾರ್ಯ ನಿರ್ವಹಿಸುತ್ತ ಸರಕಾರಿ ಸೇವೆಯಲ್ಲಿ ಸುಧೀರ್ಘ 35 ವರ್ಷಗಳ ಕಾಲ ತಮ್ಮ ಜೀವನ ಪಯಣ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ವಿವಿಧ ಜವಾಬ್ದಾರಿಗಳಾದ ಸಿ ಆರ್ ಪಿ,ತಾಲೂಕ ಪಂಚಾಯತನಲ್ಲಿ ಕಲಾ ಜಾತಾ ನಾಯಕರಾಗಿ, ವಯಸ್ಕ ಶಿಕ್ಷಣ ಕೇಂದ್ರದ ತಾಲೂಕ ನೋಡಲ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಹುದ್ದೆಗಳನ್ನು  ಸಮರ್ಥವಾಗಿ ನಿಭಾಯಿಸಿದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹಿರಿಯ ಬಡ್ತಿ ಮುಖ್ಯೋಪಾಧ್ಯಾಯರಾಗಿ ಸ ಮಾ.ಹಿ ಪ್ರಾ ಶಾಲೆ ಸೋಮನಮರಡಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಮತ್ತು ಇನ್ನೂ ...

ಪ್ರತಿಭಾ ದಿನಾಚರಣೆ "ಕಲರವ - 2024" : ಬದುಕಿನ ಉತ್ತಮ ಅಂಶಗಳು ಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

ಇಮೇಜ್
  ಬೆಂಗಳೂರು, ನ, 22; ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ "ಕಲರವ 2024" - ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಪ್ರಾಂಶುಪಾಲರಾದ ಪ್ರೊ. ಬಿ. ಜಯಶ್ರೀ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭೆ ಯಾರಲ್ಲೂ ಮೇಲ್ಮುಖವಾಗಿ ಗೋಚರಿಸುವುದಿಲ್ಲ. ಅದು ಸದಾ ಅಂತರ್ಮುಖಿ. ಹಾಗಾಗಿ ಅವಕಾಶ ದೊರೆತಾಗ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದರು.  ರೇಡಿಯೋ ಮತ್ತು ಟಿ.ವಿ. ನಿರೂಪಕಿ ಪಟ್ ಪಟ್ ಪಟಾಕಿ ಶ್ರುತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಬದುಕಿನ ಉತ್ತಮ ಅಂಶಗಳು ಮುಂದಿನ ಹಾದಿಗೆ ಸ್ಪೂರ್ತಿಯಾಗಬೇಕು ಎಂದರು.  ಎ.ಪಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಎ ವಿಷ್ಣುಭರತ್ ಎ. ಎಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾ ದಿನಾಚರಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.  ಎ.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ನಾಗರಾಜ್, ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿ ಪಿ. ಕೃಷ್ಣಸ್ವಾಮಿ ಮತ್ತು ಟ್ರಸ್ಟಿಗಳಾದ ಪ್ರ...