ಮಕ್ಕಳಿಗಾಗಿ ಆಸ್ತಿ ಮಾಡಬೇಡಿ,ಮಕ್ಕಳನ್ನೆ ಆಸ್ತಿ ಮಾಡಿ:ಸಿದ್ಧಲಿಂಗಪ್ಪ
ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದ ದಿ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಮಾಜಿ ಪ್ರಧಾನಿ ಮಂತ್ರಿ ಜವಹರಲಾಲ್ ನೆಹರು ಹುಟ್ಟು ಹಬ್ಬದ ಅಂಗವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ, ಶಾಲೆಯ ಕಾರ್ಯದರ್ಶಿ ಸಿದ್ಧಲಿಂಗಪ್ಪ ರವರು ಮಾತನಾಡಿ ಇಂದಿನ ಮಕ್ಕಳೇ ಭವ್ಯ ಭಾರತ ಭವಿಷ್ಯದ ಪ್ರಜೆಗಳು, ನಿಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದ್ದು ಅದನ್ನು ಸರಿಯಾಗಿ ಪಾಲಿಸಬೇಕು,ಶಾಲೆಯಲ್ಲಿ ಶಿಕ್ಷಕರು ಹೇಳುವ ಆಟ ಪಾಠ ಭಕ್ತಿಭಾವದಿಂದ ಕಲಿತು ತಂದೆ ತಾಯಿ ಮತ್ತು ಸಮಾಜಕ್ಕೆ ಹೆಸರು ತರುವ ಕೆಲಸ ಮಾಡಬೇಕು,ತಂದೆತಾಯಿಗಳು ಕೂಡ ಮಕ್ಕಳ ಕಲಿಕೆಯಲ್ಲಿ ಜವಾಬ್ದಾರಿ ಇರಬೇಕು,ಕೇವಲ ಶಾಲೆಗೆ ಸೀಮಿತ ಮಾಡದೇ ಪಾಲಕರು ಮಕ್ಕಳ ಬಗ್ಗೆ ಜಾಗೃತಿ ಇರಲಿ,ಮಕ್ಕಳಿಗಾಗಿ ಆಸ್ತಿ ಮಾಡಬೇಡಿ,ಮಕ್ಕಳನ್ನೆ ಆಸ್ತಿ ಮಾಡಿ ಎನ್ನುವ ಸೂಕ್ತಿಯೊಂದಿಗೆ ಪರಿಪಾಲಿಸಬೇಕು ಎಂದರು.
ಈ ವೇಳೆ, ಕೆ ಶೆಖರಪ್ಪ ಯದ್ದಲದಿನ್ನಿ, ಮುಖ್ಯ ಗುರುಗಳಾದ ರವಿಕುಮಾರ್ ತೊರಣದಿನ್ನಿ, ಶಿಕ್ಷಕರಾದ ಕುಮಾರ ಮಸ್ಕಿ,ದೇವೆಂದ್ರಕುಮಾರ,ಕೃಷ್ಣಮೂರ್ತಿ, ಕುಪ್ಪಣ್ಣ ಹಾಗೂ ಶಿಕ್ಷಕಿಯರು ಇದ್ದರು.
ನಂತರ ಮಕ್ಕಳಿಗೆ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ