ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ - ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರು ಸೇನೆ ಆಗ್ರಹ!

ವರದಿ - ಮಂಜುನಾಥ ಕೋಳೂರು ಕೊಪ್ಪಳ

 ಕೊಪ್ಪಳ:ನ,19: -ಜಿಲ್ಲೆಯಲ್ಲಿ ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ ಕೊಪ್ಪಳ,ಕುಷ್ಟಗಿ, ಯಲಬುರ್ಗಾ, ಕನಕಗಿರಿ,ಎಲ್ಲಾ ತಾಲೂಕುಗಳು ಸಂಪೂರ್ಣ ನೀರಾವರಿ ಪ್ರದೇಶಗಲಾಗುತ್ತವೆ ಎಂದು ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಭೂಮಿ ನೀರಾವರಿಯಾಗಿದೆ ಅಷ್ಟೇ ಅಲ್ಲದೆ 70% ಒಣ ಭೂಮಿ ಇದೆ , ಈ ಭೂಮಿಯು ಮಳೆಯ ಆಧಾರಿತ ಪ್ರದೇಶಗಳಾಗಿವೆ ಮಳೆಬಂದ್ರು 

 ಬೆಳೆ ಇಲ್ಲಾ , ಬೆಂಗಳೂರು, ಮಂಗಳೂರು,ಮುಂಬೈಗೆ ದುಡಿಯಲು ವಲಸೆ ಹೋಗಬೇಕಾಗುತ್ತದೆ. ಕೃಷ್ಣ ಬಿ ಸ್ಕೀಮ್ ಯೋಜನೆ ಹೋರಾಟ ಪ್ರಾರಂಭವಾಗಿ ಸುಮಾರು 10-12 ವರ್ಷಗಳಾಗಿವೆ ಇನ್ನು ಯೋಜನೆ ಪರಿಪೂರ್ಣ ಆಗಿಲ್ಲ , ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಬೇವೂರಿನಲ್ಲಿ ಒಂದು ಕಾರ್ಯಕ್ರಮ ಮಾಡಲಾಗಿತ್ತು. ಈ ಯೋಜನೆ ಸಂಪೂರ್ಣ ಅನುಷ್ಠಾನವಾದರೆ, ಸುಮಾರು 2.701% ಲಕ್ಷ ಎಕರೆ ಭೂಮಿ ನೀರಾವರಿ ಪ್ರದೇಶವಾಗಿ ಮಾರ್ಪಾಡಾಗುತ್ತದೆ . ರೈತರು, ಕಾರ್ಮಿಕರು , ಬಡವರು ಗುಳೇ ಹೋಗುವುದು ತಪ್ಪುತ್ತದೆ ಇದರಿಂದ ಜನ ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆ ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜನ ಪ್ರತಿನಿಧಿಗಳಿಗೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತೇವೆ . ಅದಕ್ಕೂ ನಿರ್ಲಕ್ಷ ವಹಿಸಿದರೆ ನಮ್ಮ ರೈತ ಸಂಘಟನೆಯ ಸಭೆಯನ್ನು ಮುಂದಿನ ಹೋರಾಟದ ರೂಪರೇಷೆ ತಯಾರಿಸಿ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಈ ಸಂಧರ್ಭದಲ್ಲಿ ರಾಜ್ಯಉಪಾಧ್ಯಕ್ಷರಾದ ಗುರನಗೌಡ ಪಾಟೀಲ್ , ಕೊಪ್ಪಳ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಬ್ಯಾಡಗಿ, ಕಾರಟಗಿ ತಾಲೂಕ ಅಧ್ಯಕ್ಷ ಹುಲಗಪ್ಪ ಹೊಸಮನಿ, ಗಂಗಾವತಿ ತಾಲೂಕ ಅಧ್ಯಕ್ಷ ಶರಣಪ್ಪ ಗಂಗಣ್ಣ , ಶಿವು ಈಳಿಗನೂರ, ರಾಮಾಂಜನೇಯ , ಮಹಾದೇವ ಬಡಿಗೇರ, ಬಸವರಾಜ, ಹನುಮೇಶ ಹುಲಿಹೈದರ, ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ