ರೋಡಲಬಂಡ(ತಾವಗ) ಗ್ರಾಮದಲ್ಲಿ: ಕಥೆಹೇಳುವ ಕಲ್ಲು ಚಪ್ಪಡಿ ಪತ್ತೆ

 

ಲಿಂಗಸಗೂರು:ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲ ಬಂಡ ಗ್ರಾಮದಲ್ಲಿ ಮೌರ್ಯ ವಂಶದ ಸಾಮ್ರಾಟ ಅಶೋಕನ ಕಾಲಾವದಿಯಿಂದ ಕ್ರಿ.ಶ. 1955ರ ವರೆಗೆ ಹಲವು ಅರಸು ಮನೆತನಗಳ ಶಾಸನಗಳು ದೊರೆತಿವೆ. ಪ್ರಸ್ತುತ ಲಿಂಗಸೂಗೂರು ತಾಲ್ಲೂಕಿನ ರೋಡಲಬಂಡ ಗ್ರಾಮದಲ್ಲಿ ಈಶ್ವರ, ಮಲ್ಲಿಕಾರ್ಜುನ, ಮಾರುತಿ,ತಾಯಮ್ಮ ಗುಡಿ,ನಂದಿ ವಿಗ್ರಹಗಳು, ಗಜಲಕ್ಷ್ಮೀ ಶಿಲ್ಪ,ಎರಡು ಹಳೆಯ ಬಾವಿಗಳು ಮೊದಲಾದ ಕುರುಹುಗಳಿವೆ. ಇವುಗಳೊಂದಿಗೆ ದುರ್ಗಾದೇವಿ ದೇವಾಲಯದ ಎದುರುಗಡೆ ಇರುವ ಕಲ್ಲು ಚಪ್ಪಡಿಯಲ್ಲಿ ಕನ್ನಡ ಭಾಷೆ,ಕನ್ನಡ ಲಿಪಿಯಲ್ಲಿರುವ ಬರಹವಿದೆ.ಇದು 19 ಸಾಲುಗಳಿಂದ ರಚಿತಗೊಂಡಿದ್ದು,ಕ್ರಿ.ಶ.15-02-1957ಕ್ಕೆ ಸೇರುತ್ತದೆ.ಇದರಲ್ಲಿ ಲಕ್ಷ್ಮೀದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ, ಪೌರಾಣಿಕ ವಿಷಯವಾದ ರಾಜ ಬಲಿಚಕ್ರವರ್ತಿಯನ್ನು ಕುರಿತು ಕಥೆ ಹೇಳುವ ವಿಶೇಷ್ಟಕಲ್ಲಾಗಿದೆ.ಈ ಗ್ರಾಮದಲ್ಲಿ ಬಲಿಚಕ್ರವರ್ತಿಯ ಕಥೆಯನ್ನು ಹೇಳುವ ಕಲ್ಲು ಯಾತಕ್ಕಾಗಿ ಹಾಕಿಸಿದರೆಂಬುದು ನಿಗೂಢವಾಗಿದೆ. ಸ್ಥಳೀಯರಿಗೆ ಇದರ ಕುರಿತು ವಿಚಾರಿಸಿದರೆ ಮೌನವಹಿಸುತ್ತಾರೆ. ಆದರೆ ಇದನ್ನು ಹಟ್ಟಿ ಗ್ರಾಮದ ಲಚಮಯ್ಯ ಮುತ್ಯಾ ಈಳಿಗೇರುರವರು ಹಾಕಿಸಿದ್ದಾರೆಂದು ತಿಳಿದು ಬರುತ್ತದೆ. ರಾಕ್ಷಸವಂಶದ ಬಲಿಚಕ್ರವರ್ತಿಯು ತನ್ನ ಸಾಮ್ರಾಜ್ಯದ ಪ್ರಜೆಗಳ ಹಿತವನ್ನು ಬಯಸಿ ದೇವಾನು ದೇವತೆಗಳಿಗೆ ಮತ್ತು ಋಷಿಗಳಿಗೆ ತೊಂದರೆ ಕೊಡುತ್ತಿರುತ್ತಾನೆ.ಆಗ ಇವರೆಲ್ಲರು ಈತನ ಸಂಹಾರಕ್ಕೆ ವಿಷ್ಣು ದೇವನಿಗೆ ಮೊರೆ ಹೋಗುತ್ತಾರೆ.

ಇದರಿಂದ ವಿಷ್ಣುದೇವನು ವಾಮನನ ಅವತಾರ ತಾಳಿ ಬಲಿಚಕ್ರವರ್ತಿಯಲ್ಲಿಗೆ ಬಂದು ದಾನ ನೀಡಬೇಕೆಂದು ಕೇಳಿಕೊಳ್ಳುತ್ತಾನೆ.ಈ ಸಮಯದಲ್ಲಿ ಬಲಿಚಕ್ರವರ್ತಿಯು ಅಶ್ವಮೇದ ಯಾಗದಲ್ಲಿದ್ದು,ದಾನ ಕೇಳಿದವರೆಲ್ಲರಿಗೂ ದಾನ ನೀಡುತ್ತಾನೆ.ಇದೇ ಸಮಯದಲ್ಲಿ ವಾಮನನು ಬಲಿ ಚಕ್ರವರ್ತಿಗೆ ತನಗೆ ಮೂರು ಹೆಜ್ಜೆ ಇಡುವಷ್ಟು ಸ್ಥಳವಕಾಶ ಮಾಡಿ ಕೊಡಬೇಕೆಂದು ಕೇಳಿಕೊಂಡಾಗ ಆತನು ಒಪ್ಪಿಗೆ ನೀಡುತ್ತಾನೆ.ಆಗ ವಾಮನನು ತ್ರಿವಿಕ್ರಮನಾಗಿ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತಾನೆ. ಈತನ ಮೊದಲ ಹೆಜ್ಜೆ ಇಡೀ ಭೂ ಮಂಡಲವನ್ನು ಆವರಿಸುತ್ತದೆ. ಎರಡನೆಯ ಹೆಜ್ಜೆ ಆಕಾಶವನ್ನು, ಮೂರನೆಯ ಹೆಜ್ಜೆಯನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇರಿಸಿದಾಗ ಬಲಿಯು ಪಾತಾಳಕ್ಕೆ ಕುಸಿಯುತ್ತಾನೆ.ಆಗ ವಿಷ್ಣುದೇವನು ಬಲಿಚಕ್ರವರ್ತಿಯ ಭಕ್ತಿಗೆ ಹಾಗೂ ನಿಷ್ಟೆಗೆ ವರಕೊಟ್ಟು ಪ್ರತಿವರ್ಷ ಪ್ರಜೆಗಳನ್ನು ನೋಡುವಸದಾವಕಾಶವನ್ನು ಒದಗಿಸಿ ಕೊಡುತ್ತಾನೆ.ಇದರಿಂದ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಮಾನವರು ಮೂರು ದಿನ ಪೂಜೆ ಮಾಡುವ ವರ ಪಡೆದುಕೊಳ್ಳುತ್ತಾನೆ. ಇದರ ಫಲವಾಗಿಯೇ ಚಿರಂಜೀವಿಯಾದ ಬಲಿಚಕ್ರವರ್ತಿಯು ದೀಪಾವಳಿ ಸಮಯದಲ್ಲಿ ಎಲ್ಲರು ದೀಪ ಹಚ್ಚಿ ಬಲೀಂದ್ರನಿಗೆ ಪೂಜೆ ಕೈಗೊಳ್ಳುತ್ತಾರೆ. ಎಂದು ಲಚಮಯ್ಯ ಮುತ್ಯ ಚಪ್ಪಡಿ ಕಲ್ಲಿನ ಬಗ್ಗೆ ವಿವರವಾಗಿ ತಿಳಿಸಿದರು.

ಈ ಗ್ರಾಮದ ಕ್ಷೇತ್ರ ಕಾರ್ಯದಲ್ಲಿ ಅಮರೇಶ ನಾಯಕ ಹಟ್ಟಿ, ಸ್ಥಳೀಯರಾದ ಮಂಜುನಾಥ ಬೂದೂರು,ನಾಗರಾಜ ನಾಯಕ, ಮಂಜುನಾಥ.ಆರ್ ಮೊದಲಾದವರು ನೆರವಾಗಿದ್ದರೆಂದು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ