*ಕಾನಾ ಹೊಸಹಳ್ಳಿ ಕನ್ನಡ ಭವನದಲ್ಲಿ 69.ನೇ ಕನ್ನಡ ರಾಜ್ಯೋತ್ಸವ ಆಚರಣೆ.*
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ 69.ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಮತ್ತು ಭುವನೇಶ್ವರಿ ಭಾವ ಚಿತ್ರಕ್ಕೆ, ಪೂಜಿಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ನಂತರ ಸಾಹಿತಿಗಳು ವಿಜಯನಗರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎನ್ ಎಂ ರವಿಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಮತ್ತು ಕನ್ನಡ ನಾಡಿಗೆ. ಪಂಪ. ರನ್ನ. ರಾಘವಾಂಕ. ಹರಿಹರ. ಕುವೆಂಪು. ದಾ.ರಾ. ಬೇಂದ್ರೆ. ಸೇರಿದಂತೆ ಅನೇಕ ಕವಿಗಳು ಸಾಹಿತಿಗಳು ಸೇರಿದಂತೆ ಅನೇಕ ವಿದ್ವಾಂಸರು ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ.
ಎಂದು ಹೇಳಿದರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ ಮಾತನಾಡಿ ಕನ್ನಡ ನಾಡು. ನುಡಿ. ಜಲ.ಭಾಷೆಯನು ಮತ್ತು ಕನ್ನಡವನ್ನು ಉಳಿಸಿ ಬೆಳೆಸುವಂತಹ ಕೆಲಸಕ್ಕೆ ನಾವೆಲ್ಲರೂ ಕೂಡ ಕಂಕಣ ಭದ್ಧರಾಗಿರಬೇಕು ಮತ್ತು ಕನ್ನಡ ನಾಡಿನ ಅನೇಕ ಸಾಹಿತ್ಯ ಕಲೆ ಸಂಸ್ಕೃತಿ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕೋಶ ಅಧ್ಯಕ್ಷರಾದ ಕೆ.ಜಿ.ಕುಮಾರ ಗೌಡ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹ ಕಾರ್ಯದರ್ಶಿ ಕೆ.ಸುಭಾಷ್ ಚಂದ್ರ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಶಾಮಸುಂದರ ಸಫಾರಿ. ಹೋಬಳಿ ಘಟಕದ ಕೋಶ ಅಧ್ಯಕ್ಷರಾದ ಸಫಾರಿ ರಾಮಣ್ಣ. ಶರಣನ ಗೌಡ್ರು. ಮತ್ತು ಶಿಕ್ಷಕರಾದ ಕರಿ ಬಸಣ್ಣ. ಗುರುಮೂರ್ತಿ. ಉಮೇಶ್. ಪ್ರಕಾಶ್ ಗೌಡ. ನಿರಂಜನ್ ಕುಮಾರ ಎ. ಹೊಸಹಳ್ಳಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ