ಆಶ್ರಯ ನೀಡಿದ ಮರಗಳು ಇಲ್ಲದೆ ರಸ್ತೆಗಳು ಖಾಲಿ ಖಾಲಿ : ಗಿಡಗಳ ನೆಟ್ಟು ಪರಿಸರ ಉಳಿಸಿ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಮನವಿ

 

ಮಸ್ಕಿ : ಪಟ್ಟಣದಲ್ಲಿ ಶತಮಾನಗಳ ಕಾಲ ನೆರಳನ್ನು ನೀಡಿ, ಸಾವಿರಾರು ಜನರಿಗೆ ಆಶ್ರಯ ನೀಡಿದ ಗಿಡಗಳನ್ನು ರಸ್ತೆ ಅಗಲೀಕರಣಕ್ಕಾಗಿ ಕಡಿದು ಪುನಃ ಮರಗಳನ್ನು ನೆಡದೇ ಮಸ್ಕಿ ಪಟ್ಟಣದ ಹಸಿರು ಗಿಡಗಳನ್ನು ಉಳಿಸಿ ಬೆಳೆಸುವ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.

ಹಿಂದೆ  ಪಟ್ಟಣದ ಗಳೇ ಬಸ್‌ನಿಲ್ದಾಣದೊಳಗಿದ್ದ ಮರಗಳು ಬಹು ಕಾಲದಿಂದ ಸಾರ್ವಜನಿಕರಿಗೆ ಹಾಗೂ ಶಾಲೆಯ ಮಕ್ಕಳಿಗೆ,ಪ್ರಯಾಣಿಕರಿಗೆ ಆಶ್ರಯವಾಗಿದ್ದ ಮರಗಳೇ ಇಲ್ಲದೆ ರಸ್ತೆಗಳು ಅನಾಥವಾಗಿವೆ.ಹಿಂದೆ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಮರದ ಕೆಳಗೆ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಆದರೆ ಇಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಚಾಸಕ್ತಿ ಕೊರತೆ ಯಿಂದ ತಾಲ್ಲೂಕಿನ ವಿವಿಧ ಪ್ರಮುಖ ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾದ್ದರಿಂದ ರಸ್ತೆಗಳು ಬೋಳು ಬೋಳಾಗಿ ಕಾಣುತ್ತಿದೆ.

ಸರ್ಕಾರ ಗಿಡ ನೆಡಿ, ಪರಿಸರ ಉಳಿಸಿ, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ ಎಂಬ ಆರೋಪವು ಕೇಳಿಬರುತ್ತದೆ.

ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ. ಮರಗಳನ್ನು ಕಡಿದ ಪ್ರಮಾಣದಲ್ಲೇ ಪಟ್ಟಣದಲ್ಲಿ ಬೇರೆ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇನ್ನಾದೂರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಮರಗಳನ್ನು ನೆಡುವ ಮೂಲಕ ಪರಿಸರ ಬೆಳೆಸಿ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಬುದ್ದಿವಂತ ನಾಗರೀಕರ ಒತ್ತಾಸೆಯಾಗಿದೆ.

 *ಹೇಳಿಕೆ*  ಕಳೆದ 2019 ರಿಂದ ನಿರಂತರವಾಗಿ ಸಸಿ ಗಳನ್ನು ಹಚ್ಚಿ ಅವುಗಳ ರಕ್ಷಣೆಮಾಡುತಿದ್ದೇವೆ ನಮ್ಮ ಗುರಿ ಹಸಿರು ಮಸ್ಕಿ ಯನ್ನಾಗಿಸುವುದು. ಮಸ್ಕಿ ತಾಲ್ಲೂಕ ಅಧಿಕಾರಿಗಳು ಕೈಜೋಡಿಸಿ ಪಟ್ಟಣ ಸೇರಿ ತಾಲೂಕಿನ ಸರಕಾರಿ ಶಾಲಾ ಕಾಲೇಜು ಹಾಗೂ ಕಚೇರಿ ಗಳಲ್ಲಿ ಅತೀ ಹೆಚ್ಚು ಸಸಿಗಳನ್ನು ಹಾಕಿ ಪಾಲನೆ ಪೋಷಣೆ ಮಾಡೋಣ ರಸ್ತೆಯ ಬಲಬದಿ ಹಾಗೂ ಎಡಬದಿ ಮತ್ತು ಸಾರ್ವಜನಿಕ ದೇವಸ್ಥಾನ ಗಳಂತಹ ಸ್ಥಳಗಳಲ್ಲಿ ಸಸಿ ಹಚ್ಚಿ ಅವುಗಳ ರಕ್ಷಣೆ ಮಾಡೋಣ. 

ಪ್ರಕೃತಿ ಫೌ೦ಡೇಶನ್(ರಿ) ಮಸ್ಕಿ ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ಗಿಮಠ. ಗ್ರೀನ್ ಆರ್ಮಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ