ಸರಕಾರಿ ಪ್ರೌಢಶಾಲೆ ಹಿರೇನಗನೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

 

ಹಟ್ಟಿ ಚಿನ್ನದ ಗಣಿ:01 ಪಟ್ಟಣದ ಸಮೀಪದ ಹಿರೇನಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜಾಸಮರ್ಪಣೆ ಕೈಗೊಂಡು ರಾಷ್ಟ್ರಧ್ವಜಾರೋಹಣ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಪ್ರಾಸ್ತಾವಿಕ ನುಡಿಗಳಾಡಿ ನಾಡಿನ ಹಿರಿಮೆಯನ್ನು ತಿಳಿಸಿದರು.ನಂತರ ಊರಿನ ಹಿರಿಯರು ವಾಗ್ಮಿಗಳಾದ ಮೈಬೂಬಸಾಬ ರವರು ಕನ್ನಡವೇ ನಮಗೆಲ್ಲರಿಗೂ ತಾಯಿ ಎಂದರು.ಇನ್ನೋರ್ವ ಗಣ್ಯರು ಬಸವರಾಜ ಕುರುಗೋಡರವರು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು.ಇದು ಚಿನ್ನದ ಭಾಷೆ ನಮ್ಮ ಅನ್ನದ ಭಾಷೆ ಎಂದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ತಮ್ಮ ಭಾಷಣದ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಈರಮ್ಮ ರೇಖಾ ಹಾಗೂ ಸಂಗಡಿಗರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಕಣ್ಮನ ಸೆಳೆಯಿತು.ಊರಿನ ಗಣ್ಯರು ಸಮಾಜ ಸೇವಕರಾದ ಮೌನುದ್ದೀನ್ ಬೂದಿನಾಳ ರವರು ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಖತ್ ಮೌಲಸಾಬ ಮತ್ತು ಜಿಲ್ಲಾಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಹೇಖ್ ಅಬ್ಬಾಸಲಿ ಈರಮ್ಮ ಬಸವರಾಜ ಈ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ರಾಜ್ಯಮಟ್ಟದಲ್ಲಿಯೂ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದರು.

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ

ಅಧ್ಯಕ್ಷಿಯ ನುಡಿಗಳಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಚಿನ್ನಪ್ಪ ಕೊಟ್ರಿಕಿಯವರು ಕನ್ನಡ ಬಳಸೋಣ ಉಳಿಸೋಣ ಎಂದರು. ಕಾರ್ಯಕ್ರಮದಲ್ಲಿ ಭೂದಾನಿಗಳಾದ ಶ್ರೀ ವಿರೂಪಾಕ್ಷಪ್ಪ ಮಾಲಿಪಾಟೀಲ ಮೌನುದ್ದೀನ್ ಬೂದಿನಾಳ ಬಸವರಾಜಪ್ಪ ಕುರುಗೋಡ ಮಹಿಬೂಬಸಾಬ್ ರವರು ಬಸವರಾಜ ಹಡಪದ 

ಮೋದಿನ್ ಸಾಬ. ನಿಂಗಪ್ಪ ಬೆಂಚಮಟ್ಟಿ. ಪತ್ರಿಕಾಮಿತ್ರರಾದ ವಿಘ್ನೇಶ್.ಮತ್ತು ಮೌನುದ್ದೀನ್ ಹಿರೇಮನಿ. ಅಮರಗುಂಡ. ಹಾಗೂಸಹಶಿಕ್ಷಕರಾದ ಸುರೇಖಾ ಸಶಿ ರವೀಂದ್ರ ಸಶಿ ನಾಗರಾಜ ಸಶಿ ಪವಿತ್ರಾ ಅ ಶಿ ಹನುಮಂತಿ ಅ ಶಿ ಚಾಂದ್ ಪಾಷ್ ಅ,ಶಿ.ಉಪಸ್ಥಿತರಿದ್ದರು. ರವೀಂದ್ರಸ್ವಾಮಿ ಸ ಶಿ ಸ್ವಾಗತಿಸಿದರು ಮತ್ತು ಶ್ರೀ ಮುಸ್ತಾಖ್ ಅಹ್ಮದ್ ದೈ ಶಿ ಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ