ಹದಗೆಟ್ಟ ರಸ್ತೆ ದುರಸ್ತಿ ಮಾಡಿಸಿದ ಬಿ.ಮೌನೇಶ್
ಮಸ್ಕಿ : ತಾಲ್ಲೂಕಿನ ಬಳಗಾನೂರ ಪಟ್ಟಣದ ಮಸ್ಕಿ ಮುಖ್ಯ ರಸ್ತೆ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಹತ್ತಿರ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದುದ ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು,ರೈತರು, ವಾಹನ ಸವಾರರು ಹದಗೆಟ್ಟ ರಸ್ತೆ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆಯೇ ಸುದ್ದಿ ತಿಳಿಯುತ್ತಲೇ ಸುಮ್ಮನಿರದೆ ಬಳಗಾನೂರ ಪಟ್ಟಣದ ರೈತ ಹಾಗೂ ದಲಿತ ಸಂರಕ್ಷ ಸಮಿತಿಯ ಕಲಬುರಗಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಿ. ಮೌನೇಶ ಬಳಗಾನೂರ ರವರು ಬಾರಿ ಪ್ರಮಾಣದ ಮರಳು ಹಾಗೂ ಮರಮ್ ಟಿಪ್ಪರ್ ಓಡಾಟದಿಂದ ಹದಗೆಟ್ಟ ರಸ್ತೆಯ ತಗ್ಗು ದಿಣ್ಣೆಗೆ ಮರಂ ಹಾಕಿಸಿ ಮಾನವೀಯತೆ ಮೆರೆದರು.ಅವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಮಚ್ಚೆಗೆಗೆ ಪಾತ್ರರಾಗಿದ್ದಾರೆ.
ಆದರೇ ಸಂಭಂದಪಟ್ಟ ಮಾತೃ ಇಲಾಖೆಗಳ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತನೆ ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಯಾಗುತ್ತಿದೆ.ರಾಜಧನ ಇಲ್ಲದೇ ಓಡಾಟ ಹಾಗೂ ಒಂದೇ ರಾಜಧನ ಇಟ್ಟುಕೊಂಡು ಸಂಜೆವರೆಗೂ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಟಿಪ್ಪರ್ ಮೇಲೆ ಹಾಗೂ ಮಾಲೀಕರ ಮೇಲೆ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ