ಮಸ್ಕಿ ಪುರಸಭೆ ಉಪಚುನಾವಣೆ ಶೇಕಡ 68 ರಷ್ಟು ಮತದಾನ
ಮಸ್ಕಿ : ಸ್ಥಳೀಯ ಪುರಸಭೆ 3 ನೇ ವಾರ್ಡ್ ಅಭ್ಯರ್ಥಿ ಒಬ್ಬರು ಅಕಾಲಿಕ ಮರಣ ಹೊಂದಿದ್ದರಿಂದ ಮಸ್ಕಿ ಪುರಸಭೆ ಮೂರನೇ ವಾರ್ಡ್ ಗೆ ಉಪಚುನಾವಣೆ ಶನಿವಾರ ನಡೆಯಿತು . ಬೆಳಗ್ಗೆ ಆರಂಭವಾದ ಮತದಾನ ಸಂಜೆವರೆಗೂ ಶಾಂತಿಯುತವಾಗಿ ಮತದಾನ ನಡೆಯಿತು.
ಇದೀಗ ಸ್ಥಳೀಯ ಪುರಸಭೆ ಮೂರನೇ ವಾರ್ಡ್ ಉಪಚುನಾವಣೆ ಶೇಕಡ 68% 03ರಷ್ಟು ಮತದಾನವಾಗಿದೆ. ಪುರುಷರ ಮತದಾರ 445 ಮಹಿಳೆ ಮತದಾರರು 509 ಒಟ್ಟು 954 ಮತದಾರರಿದ್ದು ಇದರಲ್ಲಿ 329 ಮಹಿಳೆಯರು ಮತದಾನ ಮಾಡಿದ್ದು, ಇನ್ನುಳಿದ ಪುರುಷ ಮತದಾನ320 ಮತದಾನ ಚಲಾಯಿಸಿದ್ದಾರೆ , ಒಟ್ಟು 649 ಮತದಾನವಾಗಿದ್ದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಶಾಂತಿಯುತ ಮತದಾನ ಜರುಗಿತು.
ಮತದಾನದ ನಡುವೆ ಸ್ವಲ್ಪ ಸಮಯ 3 ನೇ ವಾರ್ಡಿನ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ 70 ರಿಂದ 80 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವಾದ ವಿಗ್ವಾದ ಜರುಗಿತು. ಇಂದಿನ ಚುನಾವಣೆ ಆದಂತೆ ಮುಂಬರುವ ಚುನಾವಣೆಗೆ 3 ನೇ ವಾರ್ಡಿನ ಮತದಾರರ ಹೆಸರನ್ನು ಸೇರಿಸುವ ಮೂಲಕ ಸರಿಪಡಿಸಿ ಎಂದು ಪುರಸಭೆ ಮಸ್ಕಿ ಚುನಾವಣಾ ಅಧಿಕಾರಿ ಮತ್ತು ತಾಲ್ಲೂಕ ದಂಡಾಧಿಕಾರಿ ಗಳಿಗೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ