ನರೇಗಾದಡಿ ಸರ್ಕಾರಿ ಶಾಲೆಗೆ ಹೈಟೆಕ್ ಸೌಕರ್ಯ

 

ಮಸ್ಕಿ: ದುಡಿಯುವ ಕೈಗಳಿಗೆ ಕೆಲಸ ಒದಗಿಸಿ, ಗುಳೆ ತಪ್ಪಿಸುವ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸುವಲ್ಲಿ ನೆರವಾಗಿದೆ. 

ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ 2024-25 ನೇ ಸಾಲಿನಲ್ಲಿ 21 ಶಾಲಾ ಕಂಪೌಂಡ್, 18 ಶೌಚಾಲಯ, 9 ಶಾಲೆಗಳ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಸ್ಥಳೀಯ ಶಾಲೆಗಳ ಬೇಡಿಕೆ ಅನುಸಾರ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ ಕೊಳಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನರೇಗಾದಡಿ ನಿರ್ಮಿಸಿದ ಹೈಟೆಕ್ ಶೌಚಾಲಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಮಲ ಮೂತ್ರ ವಿಸರ್ಜನೆಗೆ ಪ್ರತ್ಯೇಕ ಕಾಬೋರ್ಡ್ ನಿರ್ಮಿಸಲಾಗಿದೆ. ನೀರು ಸರಬರಾಜು ಮಾಡಲು ಟ್ಯಾಂಕ್ ಅಳವಡಿಸಲಾಗಿದೆ. 

ಖಾಸಗಿ ಶಾಲೆಯಲ್ಲಿ ಇರುವಂತೆ ಹೈಟೆಕ್ ಶೌಚಾಲಯ ನಿರ್ಮಿಸಿದ್ದರಿಂದ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸದರಿ ಶಾಲೆಯಲ್ಲಿಒಂದರಿಂದ 7 ನೇ ತರಗತಿಯಿದೆ. 136 ಬಾಲಕರು, 115 ಬಾಲಕಿಯರು ಸೇರಿ ಒಟ್ಟು 251 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 5.20 ಲಕ್ಷ ರೂ. ವೆಚ್ಚದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲಾಗಿದೆ. ಅದೇ ರೀತಿ ನರೇಗಾದಡಿ ಶಾಲೆ ಆವರಣದಲ್ಲಿ ಭೋಜನಾಲಯ ನಿರ್ಮಿಸಿದ್ದು, ಬಿಸಿಯೂಟದ ವೇಳೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. 

ಕೋಟ್---

ಹೈಟೆಕ್ ಶೌಚಾಲಯ ನಿರ್ಮಾಣ ಮೊದಲು ಪ್ರಕೃತಿ ಕರೆಗೆ ಬಯಲನ್ನೇ ಆಶ್ರಯಿಸಿದ್ದೇವು. ನರೇಗಾದಡಿ ಶೌಚಾಲಯ ನಿರ್ಮಿಸಿದ್ದರಿಂದ ತುಂಬಾ ಅನುಕೂಲವಾಗಿದೆ. 

-ಶಾಲೆ ವಿದ್ಯಾರ್ಥಿಗಳು

ಕೋಟ್—

ಖಾಸಗಿ ಶಾಲೆಯಂತೆ ಶೌಚಾಲಯ ನಿರ್ಮಿಸಿದ್ದರಿಂದ ಶಾಲೆ ಸಿಬ್ಬಂದಿ ಮತ್ತು ಮಕ್ಕಳು ನಿರಾಳರಾಗಿದ್ದಾರೆ. ನರೇಗಾದಡಿ ಶಾಲೆ ಕಂಪೌಂಡ್, ಭೋಜನಾಲಯ, ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿದ್ದರಿಂದ ಮಕ್ಕಳ ಸ್ನೇಹಿ ಶಾಲೆಯಾಗಿ ಗುರುತಿಸಿಕೊಂಡಿದೆ.

-ಲಕ್ಷ್ಮಣ, ಪ್ರಭಾರ ಮುಖ್ಯ ಶಿಕ್ಷಕರು, ಸಕಿಪ್ರಾ ಶಾಲೆ ಕೊಳಬಾಳ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*