ಬಾಗಲಕೋಟೆಯ ನವ ನಗರದ ಅಸ್ಸಿಸಿ ಅನುಗ್ರಹ ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ.
ಬಾಗಲಕೋಟೆ:ಬಾಗಲಕೋಟೆಯ ನವನಗರದ ಅಸ್ಸಿಸಿ ಅನುಗ್ರಹ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾರ್ಥನಾ ಗೀತೆಯೊಂದಿಗೆ ಹಾಗೂ ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಫಾದರ್ ಪ್ರಕಾಶ ಮೋರಸ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಮಹಿಳೆಯರ ಸಾಧನೆ ಕೇವಲ ಮನೆಗಳಲ್ಲಿ ಮಾತ್ರ ಸೀಮಿತವಾಗದೇ ಹೊರಗೆಲ್ಲ ಪರಿಚಯವಾಗಲಿ ಎಂದು ಹೇಳಿದರು.
ಅಡ್ವೋಕೇಟ್ ಸೋನಿಯಾ ಮೇಡಂ ಮಹಿಳೆಯರ ಹಕ್ಕುಗಳ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕಾಳಜಿವಹಿಸಿ ಎಂದು ತಮ್ಮ ಭಾಷಣದ ಮುಖಾಂತರ ತಿಳಿ ಹೇಳಿದರು. ಯಾವುದೇ ಭಿನ್ನಾಭಿಪ್ರಾಯಕ್ಕೂ ಕೋರ್ಟ್ ಒಂದೇ ಪರಿಹಾರ ಅಲ್ಲ ಅದು ಮಹಿಳೆಯರಿಂದಲೂ ಸಾಧ್ಯ ಅನ್ನುವಂತ ಮಾತನ್ನು ಅಡ್ವೋಕೇಟ್ ಮೋಹಮ್ಮದ್ ಸರ್ ಮಾತನಾಡಿದರು.ಹಾಗೂ ಬಾಗಲಕೋಟೆಯ ರೂಪಲ್ಯಾಂಡ್,ಯಡಹಳ್ಳಿ, ಆನದಿನ್ನಿ.ಮತ್ತು ಸೀಮಿಕೆರೀಯ ಹೊಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಹಾಡು,ನೃತ್ಯ,ಭಾಷಣ ಹಾಗೂ ಕೆಲವು ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಬಾಗಲಕೋಟೆಯ ರೂಪಲ್ಯಾಂಡ್ ಶ್ವೇತ ಟೈಲೋರಿಂಗ್ ಕ್ಲಾಸ್ ನ ಶಿಕ್ಷಕಿಯರಾದ ಶ್ರೀಮತಿ ಗೀತಾ ಭಜಂತ್ರಿ ಹಾಗೂ ಯಡಹಳ್ಳಿಯ ಟೈಲೋರಿಂಗ್ ಕ್ಲಾಸ್ ನ ಶಿಕ್ಷಕಿಯರಾದ ಶ್ರೀಮತಿ ಶೋಭಾ ಅವರು ನಡೆಸಿಕೊಟ್ಟರು.ಮಹಿಳೆಯರ ಹಕ್ಕುಗಳ ಬಗ್ಗೆ ಸಿಸ್ಟರ್ ದೀನಾ ಅವರು ಮಾತನಾಡಿದರು. ನಂತರ ಸಿಸ್ಟರ್ ಹೃದಯಾ ಅವರಿಂದ ಪ್ರಮಾಣ ಪತ್ರಗಳ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ನಂತರ ಶ್ರೀಮತಿ ನಿತ್ಯ ಹಿರೇಮಠ ಅವರಿಂದ ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ