ಯೂರೋ ಕಿಡ್ಸ್ ಪ್ರಾಂಚೈಸಿ ನಮ್ಮ ಶಾಲೆಗೆ ಬಂದಿರುವುದ ಸಂತೋಷ- ಕುಮಾರಸ್ವಾಮಿ

ಕೊಟ್ಟೂರು :ಚಿಕ್ಕ ಚಿಕ್ಕ ಮಕ್ಕಳ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬಂದಿತು ಇವರು ಕಿಡ್ಸ್ ಫ್ರಾನ್ಸಿಸಿ ಭಾರತದ ನಂಬರ್ ಒನ್ ಪ್ರೀ ಸ್ಕೂಲ್ ಫ್ರಾಂಚಿಸಿಯಾಗಿದ್ದು ನಮ್ಮ ಕೊಟ್ಟೂರಿಗೆ ಬಂದಿರುವುದು ಸಂತೋಷ ಕರವಾಗಿದೆ ಸಂಸ್ಥೆಯ ಅಧ್ಯಕ್ಷರಾದ ಜಂಬೂರು ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ನಡೆದ ಯುರೋ ಕಿಡ್ಸ್ ಫ್ರೀ ಸ್ಕೂಲ್ ಕೊಟ್ಟೂರು ಮೊದಲನೇ ವಾರ್ಷಿಕೋತ್ಸವ ಸಮಾರಂಭ ವನ್ನು ನ್ಯೂ ವಿದ್ಯಾ ಭಾರತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಅಯೋಜಿಸಲಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಅದ್ಭುತ ಪ್ರತಿಭೆಯನ್ನು ಕಂಡು ಸಂತೋಷವಾಯಿತು ಎರಡರಿಂದ ಮೂರು ವರ್ಷದ ಮಕ್ಕಳು ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಯೂರೋ ಕಿಡ್ಸ್ ದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ಪ್ರಸಿದ್ದವಾಗಿದೆ. ಅಲ್ಲದೆ  ಈ ಒಂದು ಪ್ರಾಂಚೈಸಿ ನಮ್ಮ ಶಾಲೆಗೆ ಬಂದಿರುವುದು ಪೋಷಕರಿಗೆ ಮತ್ತು ಮಕ್ಕಳು ತುಂಭಾ ಸಂತೋಷವಾಗಿದೆ ಅಲ್ಲದೆ ತಮ್ಮ ಪ್ರತಿಭೆಯನ್ನು ತೋರಿಸಲು ಈ ಕಿಡ್ಸ್ ನಿಂದ ಇನ್ನುಮುಂದೆ ತರಬೇತಿಯನ್ನು ನೀಡಲಾಗುವುದು ಎಂದು ಹೇಳದಿರು. 

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ , ಪತ್ರಕರ್ತರಾದ ದಾದಾಪೀರ್, ಶೋಹಿಬ್, ಪರುಶುರಾಮ ಎಸ್,ಹೆಚ್ ವಿಜಯಕುಮಾರ್, ಸಿದ್ದೇಶ್, ತಗ್ಗಿನಕೇರಿ ಕೊಟ್ರೇಶ್, ಗುರುಪ್ರಸಾದ್, ಎಸ್ ಪ್ರಕಾಶ್, ಶಿವರಾಜ್ ಹಾಗೂ ಕಾರ್ಯದರ್ಶಿಗಳಾದ ಬಸವರಾಜ್, ನಿರ್ದೇಶಕರಾದ ಮರುಳ ಸಿದ್ದಪ್ಪ,  ಕೊಟ್ರೇಶ್, ಹರ್ಷ, ರೇವಂತ್,ಬಸವರಾಜ್, ಚಿರಂಜೀವಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಕೇಂದ್ರ ಬಂದು ವಾದ ಚಿಕ್ಕ ಮಕ್ಕಳು ಆಕರ್ಷಕವಾದ ಪ್ರತಿಭೆಯನ್ನು ನೀಡಿದರು ಇದಕ್ಕೆಲ ಕಾರಣರಾದ ಶಿಕ್ಷಕರಿಗೆ ಧನ್ಯವಾದಗಳು ಹಾಗೆಯೇ ಪೋಷಕರ ಬೆಂಬಲ ಸಹಕಾರಿಯಾಗಿದೆ. ಪತ್ರಕರ್ತರಿಗೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*