ಶಾಲೆಯ 18 ನೇ ವಾರ್ಷಿಕೋತ್ಸವ ಸಮಾರಂಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ

 

ಮಸ್ಕಿ : ತಾಲೂಕಿನ ಹಾಲಾಪುರ ಗ್ರಾಮದ ಬೆಸ್ಟ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಶಾಲೆಯ 18 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಶ್ರೇಷ್ಠತೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಸಮಾರಂಭವನ್ನು ಜಂಗಮರಹಳ್ಳಿ ಪರಮಪೂಜ್ಯ ಶ್ರೀ ದಂಡಗುಂಡಪ್ಪ ತಾತ ಅವರು ಉದ್ಘಾಟಿಸಿದರು. ವಿಶೇಷವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತವಾಗಿ ಶ್ರೀ ಮತಿ ಸುಜಾತ ಕಟ್ಟಿ ಹಿರಿಯ ಶಿಕ್ಷಕಿ, ಕರ್ನಾಟಕ ಜಾನಪದ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರಾದ ಯಲ್ಲಮ್ಮ ಜಿನ್ನಾಪೂರ ಹಾಗೂ ಎರಡನೇ ದಾದಿಯರು ಎಂದೇ ಹೆಸರಾದ ಸುತ್ತಮುತ್ತಲಿನ ಹಳ್ಳಿಗಳ ಹತ್ತಾರು ಸೂಲಗುತ್ತಿಯರನ್ನು, ಶಾಲಾ ಪಾಲಕ ಪ್ರತಿನಿಧಿಯಾಗಿ ಶಾಲೆಯ ವಿದ್ಯಾರ್ಥಿಗಳ ಪಾಲಕರನ್ನು ವೇದಿಕೆಯ ಮೇಲೆ ಕರೆಸಿ ಸತ್ಕರಿಸಿ ಗೌರವಿಸಿದ್ದು ವೇದಿಕೆಗೆ ದೊಡ್ಡ ಕಳೆಬಂದಾಂತಾಯ್ತು ಎಂದು ಅನೇಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಇದೊಂದು ಅದ್ಭುತವಾದ ಸುಸಂದರ್ಭ ಎಂದು ಅನೇಕ ತಾಯಂದಿರು ತಮ್ಮ ಅಂತರಾಳದ ಸಂತೋಷ ವ್ಯಕ್ತಪಡಿಸಿದರು. ಶಾಲೆಯ ವಿವಿಧ ತರಗತಿಯ ಮಕ್ಕಳಿಗೆ ಶೈಕ್ಷಣಿಕ ಶ್ರೇಷ್ಠತೆಯ ವಿದ್ಯಾರ್ಥಿಗಳ ಪ್ರಶಸ್ತಿಯನ್ನೂ ಪ್ರಧಾನ ಮಾಡಲಾಯಿತು. ನಂತರ ಕಾರ್ಯಕ್ರಮದ ಕುರಿತು ವೆಂಕೊಬ ಪ್ರಾಚಾರ್ಯರು ,ಮಂಜುನಾಥ ಮುಖ್ಯಗುರುಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಗದ್ದೆಪ್ಪ. ಬಿ, ಉಪಾಧ್ಯಕ್ಷ ಶೇಖರಪ್ಪ. ಕೆ,ಕಾರ್ಯದರ್ಶಿ ಸಿದ್ದು. ಬಿ, ಕಾರ್ಯಕ್ರಮದ ಅತಿಥಿಗಳಾಗಿ ಕರಿಯಪ್ಪ ಹಿರೆಕುರಬರ, ರವಿಕುಮಾರ ರಾಮಲದಿನ್ನಿ,ಬಸವರಾಜ ಜಂಗಮರಹಳ್ಳಿ, ಸುಭಾಷ್ ಸಿಂಗ್ ಮುಖ್ಯಗುರು,ಬಾಲಸ್ವಾಮಿ ಜಿನ್ನಾಪೂರ,ಮಂಜುನಾಥಸ್ವಾಮಿ ಅನ್ವರಿ, ಮಲ್ಲಣ್ಣ ರಾವಣಕಿ,ಶಿವಣ್ಣ ಬೆಂಡೊಣಿ,ಚೌಡಪ್ಪ ಮಾಜಿ ಅದ್ಯಕ್ಷರು, ಸಿದ್ದಾರ್ಥ ಪಾಟೀಲ್ , ಪಂಪಣ್ಣ ಜಂಗಮರಹಳ್ಳಿ, ಶಾಲಾ ಮುಖ್ಯಗುರು ರವಿಕುಮಾರ,ಕುಮಾರ ಮಸ್ಕಿ, ದೇವೆಂದ್ರಕುಮಾರ, ಕೃಷ್ಣಕುಮಾರ,ಕುಪ್ಪಣ್ಣ ಶಾಲೆಯ ಶಿಕ್ಷಕ - ಶಿಕ್ಷಕಿಯರು ಹಾಗೂ ಮುದ್ದು ಮಕ್ಕಳು ಇದ್ದರು.

 ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*