ಕರುನಾಡಿನ ಕನ್ನಡ ಶಾಸನಗಳಿಗೆ ಇಲ್ಲವೇ ಕಿಮ್ಮತ್ತು..! ಭಾಷಾ ಅಭಿಮಾನಕ್ಕೆ ಆದ್ಯತೆ ‌ನೀಡದ ಕರ್ನಾಟಕ ಸರಕಾರ

 


ಮಸ್ಕಿ : ಬಜೆಟ್‌ನಲ್ಲಿ ರುಪಾಯಿ ಚಿಹ್ನೆಯನ್ನು ಮಾತೃಭಾಷೆಯಲ್ಲೇ ನಮೂದಿಸುವ ಮೂಲಕ ಭಾಷಾಪ್ರೇಮ ಮೆರೆದಿದ್ದ ತಮಿಳುನಾಡಿನ ಸರ್ಕಾರ, ಅದೇ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಏಳು ಸಾಲಿನ ಶಾಸನದ ಅಧ್ಯಯನಕ್ಕೂ ಹಣ ಮೀಸಲಿರಿಸಿ ಭಾಷಾ ಪ್ರೀತಿ ಮೆರೆದಿದೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಇರುವ ಸುಳಿದಿಬ್ಬ ಬಂಡೆಗಲ್ಲಿನಲ್ಲಿ ತಮಿಳು ಲಿಪಿ ಸಂಸ್ಕೃತಿ ಭಾಷೆಯ ಶಾಸನವಿದೆ. 

ಇದು ಕ್ರಿಶ ೧೦೨೦ರಲ್ಲಿನ ಎಡೆದೊರೆ ೨,000 ಸಾವಿರ ಗ್ರಾಮಗಳ ರಾಜಧಾನಿ ಯಾದ ಮೊಸಗೆ ಯಲ್ಲಿ (ಈಗಿನ ಮಸ್ಕಿ) ಕಲ್ಯಾಣ ಚಾಳುಕ್ಯರ ಇಮ್ಮಡಿ ಜಯಸಿಂಹ ಹಾಗೂ ತಮಿಳುನಾಡಿನ ಮೂರು ರಾಜಮನತೆನಗಳಾದ ಚೋಳರು, ಪಾಂಡ್ಯರು ಹಾಗೂ ಚೇರರ ಒಕ್ಕೂಟದ ಸೈನ್ಯವು ರಾಜೇಂದ್ರ ವರ್ಮಾ ನ ನೇತೃತ್ವ ದಲ್ಲಿ ನಡೆದ ಯುದ್ಧದಲ್ಲಿ ಕಲ್ಯಾಣ ಚಾಳುಕ್ಯರ ಅರಸಸೋಲನುಭವಿಸುತ್ತಾನೆ.ಇದರ ನೆನಪಿಗಾಗಿ ಸಂಸ್ಕೃತ ಭಾಷೆಯಲ್ಲಿ ತಮಿಳು ಲಿಪಿಯಲ್ಲಿ ಈ ಶಾಸನವನ್ನು ಕೆತ್ತಿಸಲಾಗಿದೆ.

ತಮಿಳುನಾಡು ಸರ್ಕಾರ ಈ ಮಹತ್ವದ ಶಾಸನವನ್ನು ಅರಿತು . ತಮಿಳು ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಅಲ್ಲಿನ ಸರ್ಕಾರ ಭಾಷೆಗೆ ಸಂಬಂಧಿಸಿದ ಪ್ರತಿ ಸಂಗತಿಗೂ ವಿಶೇಷ ಒತ್ತು ನೀಡುತ್ತಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.

ಆದರೆ ಮಸ್ಕಿ ಪಟ್ಟಣದ ಹಳೇ ಪ್ರವಾಸಿ ಮಂದಿರ ದಲ್ಲಿ ಕೆಲವು ಕನ್ನಡ ಶಾಸನಗಳು ದೊರೆತಿವೆ.ಆದರೆ ಅವುಗಳನ್ನು ರಕ್ಷಣೆ ಮಾಡುವಲ್ಲಿ ಸರಕಾರ ಹಾಗೂ ಪುರಾತತ್ವ ಇಲಾಖೆ ವಿಫಲವಾಗಿದೆ.

ಮಸ್ಕಿ ತಾಲ್ಲೂಕು ಸೇರಿದಂತೆ ರಾಯಚೂರು ಜಿಲ್ಲೆಯಾದ್ಯಂತ ಸಾವಿರಾರು ಕನ್ನಡ ಶಾಸನಗಳು ದೊರೆತಿವೆ.ಆದರೆ ತಮಿಳುನಾಡಿನ ಸರಕಾರ ಭಾಷೆಯ ಮೇಲೆ ತೋರುವ ಪ್ರೀತಿ ನಮ್ಮ ಕನ್ನಡ ನಾಡಿನ ಶಾಸನದ ಮೇಲೆ ಕರ್ನಾಟಕ ಸರಕಾರ ಯಾಕೊ ಭಾಷಾಭಿಮಾನ ಕಾಣುತ್ತಿಲ್ಲ.

ಕನ್ನಡ ಭಾಷೆಗೆ ತೊಂದರೆ ಆದರೆ ಹೋರಾಟ ಮಾಡುವ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಮನಸ್ಸುಗಳು ನಮ್ಮ ಕರುನಾಡಿನಲ್ಲಿ ಇರುವ ಶಾಸನ ಸ್ಮಾರಕಗಳ ರಕ್ಷಣೆಗೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ.

 *ಹೇಳಿಕೆ ೧* ತಮಿಳಿಗರು ಅಪ್ಪಟ ಭಾಷಾ ಪ್ರೇಮಿಗಳು. ಭಾಷೆಯ ಬಗ್ಗೆ ಬಹಳ ಅಭಿಮಾನ ಹೊಂದಿದ್ದಾರೆ. ಮಸ್ಕಿಯಲ್ಲಿರುವ ಈ ಏಳು ಸಾಲಿನ ಶಾಸನದ ಬಗ್ಗೆ ನಾನು ಅಧ್ಯಯನ ನಡೆಸಿ ಚೋಳರ ಮಸ್ಕಿಯ ಶಾಸನ ಎನ್ನುವ ವಿಸ್ತಾರವಾದ ಲೇಖನವನ್ನು

ಬರೆದಿದ್ದೆ. 


ಉತ್ತರ ಕರ್ನಾಟಕ ಭಾಗದಲ್ಲಿ ಈ ಶಾಸನ ಬಿಟ್ಟರೆ ಬೇರೆ ಎಲ್ಲೂ ಇಂಥಹ ಕುರುಹುಗಳಿಲ್ಲ. ಹೀಗಾಗಿ ತಮಿಳುನಾಡು ಸರ್ಕಾರ ಇದಕ್ಕೆ ವಿಶೇಷ ಪ್ರಾತಿನಿಧ್ಯ ಕೊಡುತ್ತಿದೆ. ಕರ್ನಾಟಕ ಸರ್ಕಾರ ಕೂಡ ಈ ಭಾಗದಲ್ಲಿರುವ ಐತಿಹಾಸಿಕ ಕನ್ನಡ ಶಾಸನಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. 

ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಇತಿಹಾಸ ಸಂಶೋಧಕರು.


ಹೇಳಿಕೆ ೨. ನಮ್ಮ ರಾಯಚೂರು ಜಿಲ್ಲೆಯಲ್ಲಿ ಅನೇಕ ಇತಿಹಾಸಕಾರರು ಕನ್ನಡ ಶಾಸನಗಳನ್ನು ಪತ್ತೆ ಹಚ್ವಿದ್ದು ಸಂಬಂಧಿಸಿದ ಇಲಾಖೆ ಸಂರಕ್ಷಣೆ ಮಾಡಿ ದೇಶಾದ್ಯಂತ ಕನ್ನಡ ಭಾಷೆಯ ಇತಿಹಾಸದ ಬಗ್ಗೆ ತಿಳಿಸುವ ಪ್ರಯತ್ನ ಮಾಡಬೇಕು.

ಕನ್ನಡ ಶಾಸನಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ಅಳಿವಿನ ಅಂಚಿನಲ್ಲಿ ಇರುವಕ ನ್ನಡ ಶಾಸನಗಳಿಗೆ ಸರಕಾರ ವಿಶೇಷ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಬೇಕು.

ದುರಗರಾಜ ವಟಗಲ್

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಸ್ಕಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*