ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

 

ಬೆಂಗಳೂರು, ಮಾ.16- ಡಾ ಶ್ರೀ.ಶಿವಕುಮಾರ ಮಹಾ ಸ್ವಾಮಿಗಳವರ 118ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶ್ರೀ ಶಿವಕುಮಾರಸ್ವಾಮೀಜಿ ದಾಸೋಹ ಟ್ರಸ್ಟ್‌ ತಿಳಿಸಿದೆ.ಮಾ.1 ದಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸಬಹುದು.

ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡಬೇಕು. ನಾಮಕರಣಗೊಳ್ಳುವ ಮಗುವಿನ ಜನನ ಪ್ರಮಾಣ ಪತ್ರ.ತಂದೆ ಅಥವಾ ತಾಯಿಯ ಆಧಾರ ಕಾರ್ಡ್ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ಮಾ.31 ಕೊನೆ ದಿನ,ನಾಮ ಕರಣಗೊಳ್ಳ ಬಯಸುವ ಮಕ್ಕಳ ವಯಸ್ಸು : ನವಜಾತ ಶಿಶುವಿನಿಂದ 1 ವರ್ಷದೊಳಗಿನ ಮಕ್ಕಳು ಮಾತ್ರ. ಗಂಡು ಮಗುವಿಗೆ ಹುಟ್ಟು ಹೆಸರು ಶಿವಕುಮಾರಸ್ವಾಮಿ ಎಂತಲೂ ಹೆಣ್ಣು ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹುಟ್ಟು ಹೆಸರನ್ನು ನಾಮಾಂಕಿತಗೊಳಿಸಲು ಕೋರಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*