ಹಟ್ಟಿ ಪಟ್ಟಣದಿಂದ ಆದಷ್ಟು ಬೇಗನೆ ಬೇರೆ ಬೇರೆ ಜಿಲ್ಲೆಗಳಿಗೆ ಬಸ್ ಬಿಡುವ ಭರವಸೆ. 2ನೇ ದಿನಕ್ಕೆ ಸರಣಿ ಉಪವಾಸ ಸತ್ಯಾಗ್ರಹ ಅಂತ್ಯ.
ಹಟ್ಟಿ ಚಿನ್ನದ ಗಣಿ :ಹಟ್ಟಿ ಚಿನ್ನದ ಗಣಿಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಬಸ್ ಬಿಡುವಂತೆ.ಸೋಮವಾರದಿಂದ ಪ್ರಾರಂಭವಾದ ಅಹೋರಾತ್ರಿ ಸರಣಿ ಉಪವಾಸ ಸತ್ಯಾಗ್ರಹ ಮೂರನೇ ಮೂರನೇ ದಿನಕ್ಕೆ ಕಾಲಿಡುವಷ್ಟರೊಳಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತುಕೊಂಡು.ಅಹೋ ರಾತ್ರಿ ಸರಣಿ ಉಪವಾಸ ಸತ್ಯಾಗ್ರ ಸ್ಥಳಕ್ಕೆ ಆಗಮಿಸಿ. ಹಟ್ಟಿ ಚಿನ್ನದ ಗಣಿಯ ಪ್ರಗತಿಪರ ಸಂಘಟನೆಗಳ ಕೆಲವು ಪ್ರಮುಖರ ಜೊತೆ ಚರ್ಚಿಸಿದ
ಕೆಎಸ್ಆರ್ಟಿಸಿ ರಾಯಚೂರು ವಿಭಾಗ ಹಾಗೂ ಲಿಂಗಸುಗೂರು ವಿಭಾಗದ ಮಲತಾಯಿ ಧೋರಣೆ ಖಂಡಿಸಿ ಹಾಗೂ ಹಟ್ಟಿ ಪಟ್ಟಣಕ್ಕೆ ಅಂತರ ಜಿಲ್ಲಾ ಬಸ್ಸುಗಳ ಸೌಲಭ್ಯ ಒದಗಿಸಿ ಕೊಡಬೇಕೆಂದು ನಡೆದ ಹೋರಾಟಕ್ಕೆ ಮಂಗಳವಾರ ರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿದ ರಾಯಚೂರು ವಿಭಾಗೀಯ ಸಂಚಾರ ಅಧಿಕಾರಿ(ಡಿಟಿಒ) ಚಂದ್ರಶೇಖರ್ ಅವರಿಗೆ ಸಂಘಟನೆಯ ಮುಖಂಡರು ಹಾಗೂ ಊರಿನ ಮುಖಂಡರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ ಟಿ ಒ ಅವರು ಹಟ್ಟಿ ಪಟ್ಟಣಕ್ಕೆ ಆದಷ್ಟು ಬೇಗನೆ ಬೆಳಗಾವಿಗೆ,ಬಾಗಲಕೋಟೆ,ಹೊಸಪೇಟೆ,ಮಂತ್ರಾಲಯ,ಬಳ್ಳಾರಿ,ಹುಬ್ಬಳಿ ಹಾಗೂ ರಾಜ್ಯದ ಇನ್ನಿತರ ಭಾಗಗಳಿಗೆ ಬಸ್ಸುಗಳನ್ನು ಬಿಡುತ್ತೇವೆ,ಹಾಗೂ ಹೆಚ್ಚುವರಿಯಾಗಿ ಕಲಬುರಗಿ,ಹುಬ್ಬಳಿ,ರಾಯಚೂರು,ಗಂಗಾವತಿ ಮಾರ್ಗಕ್ಕೆ ಬಸ್ಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು,ಒಂದು ವೇಳೆ ಹೊಸ ಬಸ್ಸುಗಳನ್ನು ಬಿಟ್ಟರೆ ವರ್ಷಪೂರ್ತಿ 365 ದಿನ ಹಟ್ಟಿ ಮಾರ್ಗವಾಗಿ ಸಂಚರಿಸಬೇಕು ಹಾಗಾಗಿ ಮಾರ್ಗ ಬದಲಾವಣೆಗೆ ಹಾಗೂ ಹಟ್ಟಿ ಪಟ್ಟಣದಿಂದ ನೇರ ಬಸ್ ಗಳು ಕಲ್ಪಿಸಲು ವಾಹನ,ಸಿಬ್ಬಂದಿ ವ್ಯವಸ್ಥೆಗೆ ಸಮಯಾವಕಾಶ ಬೇಕಾಗುತ್ತೆದೆ,ಹಾಗೂ ಹೊಸ ಬಸ್ಸುಗಳನ್ನು ಕಲ್ಪಿಸುವುದಕ್ಕೆ ಏಪ್ರಿಲ್ 5ನೇ ತಾರೀಕು ಊರಿನ ಮುಖಂಡರು,ಹಾಗೂ ಅಧಿಕಾರಿಗಳು ಜೊತೆ ಚರ್ಚೆ ಮಾಡಿ ಹೊಸ ಮಾರ್ಗ ಹಾಗೂ ಹೊಸ ಬಸ್ಗಳು ಬಿಡುವ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ಈ ಮೂಲಕ ತಿಳಿಸಿದರು.ಅಧಿಕಾರಿಗಳು ಸಮಯಾವಕಾಶ ಕೇಳಿರುವುದರಿಂದ ಮತ್ತು ಆದಷ್ಟು ಬೇಗನೆ ನಮ್ಮ ಬೇಡಿಕೆಗಳನು ಈಡೇರಿಸದೆ ಹೋದರೆ ಮುಂದಿನ ತಿಂಗಳು ಯಾರಾಡೋಣ ರಾಷ್ಟ್ರೀಯ ಹೆದ್ದಾರಿ ಬಂದ ಮಾಡಲಾಗುತ್ತೆ ಎಂದು ಈ ಮೂಲಕ ಅವರಿಗೆ ಎಚ್ಚರಿಸಿ.ಈ ಹೋರಾಟವನು ಹಿಂತೆಗೆದುಕೊಳಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಹೋರಾಟಗಾರರಾದ ಸುರೇಶ್ ಗೌಡ ಗುರಿಕಾರ್. ವಿನೋದ್ ಕುಮಾರ್.ವೆಂಕಟೇಶ್ ಗಿರಿ. ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎಂಡಿ ಸಮಾಧಾನಿ.ಹನುಮಂತರೆಡ್ಡಿ.ಪರಮೇಶ್ ಯಾದವ್.ವೆಂಕೋಬ್ ಪವಡೆ.ಮಲ್ಲಿಕಾರ್ಜುನ್ ಲಾಲ್ ಪೀರ್. ಮೌಲಾ ಸರ್.ದೇವೇಂದ್ರಪ್ಪ.ಜ್ಯೋತಿ ಮಹಿಳಾ ಸಂಘಟನೆ ಸದಸ್ಯರು.ಆಕಳು ಪಕ್ಷದ ಸದಸ್ಯರು.ಹಟ್ಟಿ ಪಟ್ಟಣದ ಪ್ರಗತಿಪರ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ