ರಸ್ತೆ ಕಾಮಗಾರಿ ಕಳಪೆ ಆರೋಪಕ್ಕೆ ಗೊಂದಲ ಗೂಡಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಪಷ್ಟೀಕರಣ : ಶರಣ ಬಸವ ಕಾಟಗಲ್

 

ಮಸ್ಕಿ : ತಾಲ್ಲೂಕಿನ ಮುದಬಾಳ ಕ್ರಾಸ್ – ಮಾರಲದಿನ್ನಿ ಕಳಪೆ ಕಾಮಗಾರಿ ನಡೆಯುತ್ತಿದೆ.

 18/10/2022 ರಂದು ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ ಹಳೆಯ ಕಾಮಗಾರಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ನಮ್ಮ ಆರೋಪ ಶಾಸಕರ ವಿರುದ್ಧ ಅಲ್ಲಾ ಎಂದು ಸ್ಥಳೀಯರಾದ ಶರಣಬಸವ ಪತ್ರಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹೌದು ಮುದಬಾಳ ಕ್ರಾಸ್‌ ನಿಂದ ಮಾರಲದಿನ್ನಿ ರಸ್ತೆ ಡಾಂಬರು ಹಾಕಿದ ದಿನವೇ ಕಿತ್ತು ಹೋಗಿದೆ.ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಿಂದ ಬಿಆರ್‌ಜಿಎಫ್‌ ಯೋಜನೆಯ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿತ್ತು.

ಕಳಪೆ ಕಾಮಗಾರಿ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಟಗಲ್, ಉಸ್ಕಿಹಾಳ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಬಂದ್ ಮಾಡಿಸಿ ರಸ್ತೆ ಮೇಲೆಯೇ ಹೋರಾಟ ಮಾಡಿದ್ದರು.

ಎಫ್ ಶಿವಕುಮಾರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಲಿಂಗಸ್ಗೂರು ಇವರು ಅಪರ ನಿಭಂದಕರು ವಿಚಾರಣೆಗಳು -5

ಕರ್ನಾಟಕ ಲೋಕಾಯುಕ್ತರು ಬೆಂಗಳೂರು ಇವರಿಗೆ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗಿರುವುದಿಲ್ಲ ಎಂದು ವರದಿಯನ್ನು ಸಲ್ಲಿಸಿದರು.

ದೂರಿನ ಮೇರೆಗೆ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಮಾಡಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿದ್ದರು. ಆದರೆ ವರದಿ ಯಾವ ಹಂತದಲ್ಲಿ ಇದೆ ಎಂಬುದು ಗೌಪ್ಯವಾಗಿದೆ.

ಲೋಕಾಯುಕ್ತ ತನಿಖೆ ಹಂತದಲ್ಲಿದೆ ಎಂದು ಉಪಲೋಕ್ ಜಿಎಲ್ ಬಿ 4171 ಎಂಬ ಲೋಕಾಯುಕ್ತ ದೂರಿನ ಸಂಖ್ಯೆಯ ಅರ್ಜಿಯ ಸ್ಥಿತಿಯು ಹೇಳುತ್ತಿದ್ದು.

ಸೋಮವಾರ ಪುನಃ ಮತ್ತೆ ಅದೇ ರಸ್ತೆಯಲ್ಲಿ ಮತ್ತೆ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಮಾಡಿದ್ದಾರೆ. ಆದ್ದರಿಂದ ಅಂದಿನ ಕಾಮಗಾರಿಯ ಗುತ್ತಿಗೆದಾರರಾದ ನರಸರೆಡ್ಡಿ ರವರ ಲೈಸನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಫ್ ಶಿವಕುಮಾರ್ ಹಾಗೂ ಕಿರಿಯ ಇಂಜಿನಿಯರ್ ತ್ರಿವೇಣಿ ರವರ ಮೇಲೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಶರಣ ಬಸವ ಕಾಟಗಲ್ ಪತ್ರಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪತ್ರಿಕಾ ಹೇಳಿಕೆ ಮೂಲಕ ಮಾಡಲಾದ ವರದಿಗೆ ಶಾಸಕರು ಅಡಿಗಲ್ಲು ಪೂಜೆ ಮಾಡಿದ ಫೋಟೋವೊಂದನ್ನು ಹಾಕಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಕಾರಣವಾಗಿದ್ದರೂ ಅದಕ್ಕೆ ಸ್ಪಷ್ಟೀಕರಣ ನೀಡಿರುವ ಸ್ಥಳೀಯ ಗ್ರಾಮಸ್ಥರಾದ ಶರಣಬಸವ ಕಾಟಗಲ್ ರವರು ನಮ್ಮ ಆರೋಪ ಹಳೆಯ ಕಾಮಗಾರಿಗೆ ಹಾಗೂ ಅಂದಿನ ಕಾಮಗಾರಿಯ ಅಧಿಕಾರಿಗಳಾದ ಗುತ್ತಿಗೆದಾರರಾದ ನರಸರೆಡ್ಡಿ,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಫ್ ಶಿವಕುಮಾರ್ ಹಾಗೂ ಕಿರಿಯ ಇಂಜಿನಿಯರ್ ತ್ರಿವೇಣಿ ರವರ ಮೇಲೆ ಕ್ರಮ ಜರುಗಿಸಬೇಕು ಎಂಬುದು ವಿನಃ ಶಾಸಕರು ಮಾಡಿದ ಶಂಕು ಸ್ಥಾಪನೆ ಪೂಜೆಗೆ ಅಲ್ಲಾ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪತ್ರಿಕೆ ಮೂಲಕ ಶರಣಬಸವ ಕಾಟಗಲ್ ರವರು ಸ್ಪಷ್ಟೀಕರಣ ನೀಡಿದ್ದಾರೆ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*