'' ನನ್ನ ವೃತ್ತಿ ನನ್ನ ಆಯ್ಕೆ "ಎಂಬ ವಿನೂತನ ಕಾರ್ಯಕ್ರಮ ಯಶಸ್ವಿ

ಬೆಂಗಳೂರು : ಶುಕ್ರವಾರ ರಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅನಾಹತ ಯುನೈಟೆಡ್ ಏರ್ಫಟ್ ಫೌಂಡೇಶನ್ ಬೆಂಗಳೂರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿಕ್ಕೋಡಿ. ಇವರ ಸಂಯುಕ್ತ ಆಶ್ರಯದಲ್ಲಿ ,"ನನ್ನ ವೃತ್ತಿ ನನ್ನ ಆಯ್ಕೆ "ಎಂಬ ವಿನೂತನ ಕಾರ್ಯಕ್ರಮದ ಉದ್ಘಾಟನಾ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದ ಉದ್ಘಾಟಕರಾಗಿ ನಮ್ಮ ಹೆಮ್ಮೆಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ್ ಮೇಡಮ್ ರವರು ಅಧ್ಯಕ್ಷತೆ ವಹಿಸಿ.ಹಲವಾರು ನಿದರ್ಶನಗಳ ಜೊತೆಗೆ ಇಲಾಖಾ ಗುರಿ ಉದ್ದೇಶಗಳು ವೃತ್ತಿ ಪರ ಕೋರ್ಸ ಆಯ್ದಕೊಂಡು ಯಶಸ್ವಿಗಳಿಸಿ ಎಂದು ಮಾರ್ಮಿಕವಾಗಿ ಮಾತನಾಡಿದರು. 

ಕಾರ್ಯಕ್ರಮದ ಅತಿಥಿಗಳಾಗಿ ನಮ್ಮ ಜಿಲ್ಲೆಯ ಡಯಟ್ ನ ಹಿರಿಯ ಉಪನ್ಯಾಸಕರಾಧ ಡಾ. ಶ್ರೀ ಕೆ ಬಿ ತಳವಾರ್ ನೋಡಲ್ ಅಧಿಕಾರಿಗಳು ಹಾಗೂ ಕೆಪಿಎಸ್ ಶಾಲೆಗಳ ಉಸ್ತುವಾರಿಗಳಾದ ಹಿರಿಯ ಉಪನ್ಯಾಸಕರು ಶ್ರೀ ಹಿರೇಮಠ ಸರ್ ರವರು ಆಗಮಿಸಿದ್ದರು. ಈ ಕಾರ್ಯಕ್ರಮದ ಕುರಿತಾಗಿ ತಳವಾರ್ ಸರ್ ರವರು ಇಲಾಖೆಯ ಯೋಜನೆಗಳ ಬಗ್ಗೆ ಕರ್ನಾಟಕ ಸರ್ಕಾರ ಆಯ್ದ 150 ಶಾಲೆಗಳಲ್ಲಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಯಲ್ಲಿ ಮೂರು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ನನ್ನ ವೃತ್ತಿ ನನ್ನ ಆಯ್ಕೆ ಈ ಕೋರ್ಸನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ತರಬೇತಿಯನ್ನು ನೀಡಲಾಗಿದ್ದು ಅವರ ಮೂಲಕ ವಿದ್ಯಾರ್ಥಿಗಳಿಗೆ 10ನೇ ತರಗತಿಯ ನಂತರ ಮತ್ತು ಪಿಯುಸಿ ನಂತರ ಹತ್ತು ಹಲವಾರು ಕೋರ್ಸ್ ಗಳಿದ್ದು ತಮ್ಮ ಅಭಿಪ್ರಾಯ ಮತ್ತು ಅಭಿರುಚಿ

ಅನುಗುಣವಾಗಿ ವಿದ್ಯಾರ್ಥಿಗಳು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಆ ನಿಟ್ಟಿನಲ್ಲಿ ಈ ಉದ್ಘಾಟನಾ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕವಾಗಿ ಶ್ರೀ ಕೃಷ್ಣ.ಡಿ ಕಲ್ಕುಟಗಿ ಸರ್ ರವರು ಮಾತನಾಡಿ ಅಭಿರುಚಿ ತಕ್ಕಂತೆ ಕೋರ್ಸಗಳನ್ನು ಆಯ್ದುಕೊಂಡು ಯಶಸ್ವಿ ಗಳಾಗಲು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಅನಿಲ್ ಕುಮಾರ್ ಸರ್ ಆಗಮಿಸಿ 2 ಗಂಟೆಗಳವರೆಗೆ ಕಾರ್ಯಗಾರ ನಡೆಸಿದರು.ಶ್ರೀ ಎಸ್.ಎಂ ಗುಮಚಿ ಸರ್ ರವರಿಗೆ ತರಬೇತಿಯನ್ನು ವಾರದಲ್ಲಿ ಎರಡು ಅವಧಿಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ವನಿತಾ ಬಂದಾಯಿ ಮೇಡಂ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಂ ಎಂ.ಶೆಟ್ಟಿನ್ನವರ ಸರ್ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*