"ನನ್ನ ವೃತ್ತಿ ನನ್ನ ಆಯ್ಕೆ "ಶಾಲಾ ಮಟ್ಟದ ಉದ್ಘಾಟನಾ ಸಮಾರಂಭ ಇಲಕಲ್ಲ 2024

ಬಾಗಲಕೋಟೆ : ಇಲಕಲ್ಲ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಇಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅನಾಹತ ಯುನೈಟೆಡ್‌ ಎಫರ್ಟ್‌ ಪೌಂಡೆಶೆನ್‌ ಬೆಂಗಳೂರು ಇವರುಗಳ ಸಹಯೋಗದಲ್ಲಿ ಶಾಲಾ ಹಂತದ “ನನ್ನ ವೃತ್ತಿ ನನ್ನ ಆಯ್ಕೆ” ಎಂಬ ಸಮಾರಂಭದ ಉದ್ಘಾಟನೆಯು ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ಜರುಗಿತು.

 ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ನೀಲಮ್ಮ ತೆಗಿನಮಠ ನನ್ನ ವೃತ್ತಿ ನನ್ನ ಅಯ್ಕೆ ಜಿಲ್ಲಾ ನೋಡಲ್‌ ಅಧಿಕಾರಿಗಳು ಹಿರಿಯ ಉಪನ್ಯಾಸಕರು ಡಯಟ್‌ ಇಲಕಲ್ಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಎಮ್.ಪಿ.ಗೋಟೂರ, ಮುಖ್ಯೋಪಾಧ್ಯಯರು ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಇಲಕಲ್ಲ, ಬಾಗಲಕೊಟ, ಮುಖ್ಯ ಅಥಿತಿಗಳಾಗಿ ಶ್ರೀ.ಅನೀಲ ಕುಮಾರ ಬಿ.ಎಮ್‌ ವಿಭಾಗೀಯ ಮುಖ್ಯಸ್ಥರು, ಅನಾಹತ ಯುನೈಟೆಡ್‌ ಎಫರ್ಟ್‌ ಪೌಂಡೆಶೆನ್‌ ಬೆಂಗಳೂರು. 

ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀಮತಿ ನೀಲಮ್ಮ ತೆಗಿನಮಠ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಕಂಡುಕ್ಕೊಳಲು ಒಂದು ಒಳ್ಳೆಯ ಅವಕಾಶ ಇದು ಹೊಸ ಶಿಕ್ಷಣ ನೀತಿಯ ಕೌಶಲ್ಯಗಳ ಪ್ರಕಾರ ಈ ಪಠ್ಯ ವಿಷಯವು ರಚಿತವಾಗಿರುವುದು.

ಇದು ಪ್ರೌಡಶಾಲಾ ಮಕ್ಕಳಿಗೆ ಅತಿ ಮೌಲ್ಯಯುತ ವೃತ್ತಿ ಯೋಜನಾ ವಿಷಯವಾಗಿದ್ದು, ವಿಶೇಷವಾಗಿ ಮಕ್ಕಳಿಗೆ ಈ ಕಾರ್ಯಕ್ರಮ ಅನುಷ್ಠಾನಗೊಳುತ್ತಿರುವುದು ನಮಗೆ ಸಂತಸದ ವಿಷಯವಾಗಿದೆ. ಇದು ಮಕ್ಕಳು ತಮ್ಮ ಭವಿಷ್ಯದ ವೃತ್ತಿಯನ್ನು ರೂಪಿಸಿಕೊಂಡು ಭವಿಷ್ಯದ ಹುದ್ದೆಗೆ ಅಥವಾ ಭವಿಷ್ಯದ ಜೀವನಕ್ಕೆ ತಮ್ಮ ಉತ್ತಮ ಪೂರ್ವ ಯೋಜನೆಯನ್ನು ರೂಪಿಸಿಕೊಳ್ಳಲು ಭುನಾದಿಯಾಗಿ, ಎಂದು ತಿಳಿಸಿದರು.

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂತರಾಷ್ಡ್ರೀಯ ಖಾಸಗಿ ಶಾಲೆಗಳಲ್ಲಿ ನೀಡುವ ಪಠ್ಯ ವಿಷಯದ ತರಬೇತಿಯನ್ನು ನಮ್ಮ ಅನಾಹತ ಯುನೈಟೆಡ್‌ ಎಫರ್ಟ್‌ ಫೌಂಡೇಶನ್ರವರು ನಮ್ಮ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಭಾಗಿತ್ವದಲ್ಲಿ ಶಾಲೆಗಳಲ್ಲಿ ಅನುಷ್ಠಾನ ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ತರಬೇತಿ ಪಡೆದ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮವು ಯಶಸ್ವಿ ಮತ್ತು ಪರಿನಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು ಸಹಾಯ ಸಹಕಾರ ನಿಮ್ಮಗೆ ಸದಾ ಇರುತ್ತದೆ ಎಂದು ಹೇಳಿದರು. 

ಮುಖ್ಯ ಅಥಿತಿಗಳಾಗಿ ಶ್ರೀ.ಅನೀಲ ಕುಮಾರ ಬಿ.ಎಮ್‌ ವಿಭಾಗೀಯ ಮುಖ್ಯಸ್ಥರು, ಅನಾಹತ ಯುನೈಟೆಡ್‌ ಎಫರ್ಟ್‌ ಪೌಂಡೆಶೆನ್‌ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ನನ್ನ ವೃತ್ತಿ ನನ್ನ ಅಯ್ಕೆ ಕಾರ್ಯಕ್ರಮವು ರಾಜಾದ್ಯಾಂತ ಆಯ್ದ 150 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು ಮಕ್ಕಳು ಸಹ ಇದರ ಸದುಪಯೋಗವನ್ನು ಪಡೆದುಕೊಂಡು ಮುಂದಿನ ದಿನಮಾನಗಳಲ್ಲಿ ತಮ್ಮ ವೃತ್ತಿಯನ್ನು ತಾವೆ ಆಯ್ಕೆ ಮಾಡಿಕೊಳ್ಳಲು ಈ ಪುಸ್ತಕವು ನಿಮಗೆ ಮಾರ್ಗದರ್ಶಣ ಮಾಡುತ್ತದೆ ಜೊತೆಗೆ ತರಬೇತಿ ಪಡೆದ ಶಿಕ್ಷಕರು ನಿಮಗೆ ತರಬೇತಿ ನಿಡುತ್ತಾರೆ ಎಂದು ಹೆಳಿದ್ದರು.

ಶ್ರೀ.ಎಮ್.ಪಿ.ಗೋಟೂರ, ಮುಖ್ಯೋಪಾಧ್ಯಯರು ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಇಲಕಲ್ಲ ಅಧ್ಯಕ್ಷಪರ ಮಾತುಗಳನ್ನಾಡಿದರು “ನನ್ನ ವೃತ್ತಿ ನನ್ನ ಆಯ್ಕೆ” ಕಾರ್ಯಕ್ರಮವನ್ನು ನಮ್ಮ ಶಾಲೆಯ ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮವೆಂದು ನೇರೆದ ಮಕ್ಕಳಿಗೆ ತಿಳಿಸಿ ಹೇಳುವುದರ ಮುಖಾಂತರ ಈ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಯಶಸ್ವಿಗೊಳಿಸಲು ಸಹಾಯ ಸಹಕಾರ ಮಾಡುತ್ತೇವೆ ಎಂದು ಹೆಳಿದರು. 

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು ಭಾಗವಹಿಸಿದರು. ನಿರೂಪಣೆಯನ್ನು ಸಹ ಶಿಕ್ಷಕರಾದ ಶ್ರೀಮತಿ ಸರಸ್ವತಿ ನೆರವೆರಿಸಿದರು, ಶ್ರೀ ಮಹೇಶ ಗೊರಜಿನಾಳ ಎನ್‌.ಎಸ್.ಕ್ಯೂ.ಎಫ್‌ ತರಬೇತಿದಾರರು ಇವರು ಪ್ರಾಸ್ತಾವಿಕ ಮಾತುಗಳನಾಡಿದರು,ಟಿ ವಾಯ್ ಗೊಲ್ಲರ ಸ್ವಾಗತ ಮಾಡಿದರು, ಟಿ. ಎಲ್. ತುಂಬದ ಕಾರ್ಯಕ್ರಮದ ವಂದರ್ನಾಪನೆಯನ್ನು ನೇರವೆರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*