ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ.ಮಿನಿ ಕ್ರಿಸ್ಮಸ್ ಆಚರಣೆ.
ಹಟ್ಟಿ ಚಿನ್ನದ ಗಣಿಯ:ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ.ಸಾಯಂಕಾಲ 8:00ಗೆ ಮಿನಿ ಕ್ರಿಸ್ಮಸ್ ಹಬ್ಬವನ್ನು.ಫಾದರ್
ಡಾ!ವಿಜಯಕುಮಾರ್ ಅವರ ನೇತೃತ್ವದಲ್ಲಿ.ಹಟ್ಟಿ ಚಿನ್ನದ ಗಣಿಯ ವಿವಿಧ ಚರ್ಚುಗಳ ಸಭಾ ಪಾಲಕರಾದ ರೆವರೆಂಡ್ ದೇವದನ್ ಆನಂದಪ್ಪ.ಶ್ಯಾಮ್ ಪ್ರದೀಪ್.
ರೆವರೆಂಡ್ ವೆಸ್ಲಿ.ಹಾಗೂ ಸಿಸ್ಟರ್ ಸುಪೀರಿಯರ್ ಇವರನ್ನು ಆಹ್ವಾನಿಸಿ.ಜ್ಯೋತಿ ಬೆಳಸಿ ನಂತರ ಕೇಕ್ ಕತ್ತರಿಸುವ ಮುಖಾಂತರ ಮಿನಿ ಕ್ರಿಸ್ಮಸ್ ಆಚರಣೆಗೆ ಚಾಲನೆ ನೀಡಲಾಯಿತು.ನಂತರ ರೆವರೆಂಡ್ ದೇವದನ್ ಆನಂದಪ್ಪ ಮಾತನಾಡಿ.
ನವಂಬರ್ ಕೊನೆಯ ದಿವಸ ಆರಂಭವಾದ ಮಧ್ಯರಾತ್ರಿಯಲ್ಲಿ.ಕ್ರೈಸ್ತ ಬಂದವರು ಆ ಮಧ್ಯರಾತ್ರಿಯಲ್ಲಿ ವೆಲ್ಕಮ್ ಕ್ರಿಸ್ಮಸ್ ಎಂಬುದಾಗಿ ಆಚರಣೆ ಮಾಡುತ್ತಾರೆ.ಅಂದರೆ ನಾವು ಭಕ್ತಿ ಪೂರ್ವಕವಾಗಿ ಲೋಕ ರಕ್ಷಕನಾದ ಯೇಸುಕ್ರಿಸ್ತನ ಜನನವನ್ನು ಆತ್ಮೀಯ ರೀತಿಯಲ್ಲಿ ಬರಮಾಡಿಕೊಳ್ಳುವಂತ ಸಂತೋಷದ ಸಮಯ.ಅದೇ ರೀತಿ ನಾವು ಇನ್ನೂ ಎರಡು ದಿನಗಳು ಕಳೆದರೆ ನಾವೆಲ್ಲರೂ ಕ್ರಿಸ್ಮಸ್ ಆಚರಣೆ ಮಾಡುತ್ತೇವೆ.ಕ್ರಿಸ್ತನ ಆಗಮನದ ದಿನಮಾನಗಳಲ್ಲಿ ಪ್ರಾರ್ಥನಾ ಪೂರಕ ಸಮಯವನ್ನು ಕಳೆಯುತ್ತಾ ಇದ್ದೇವೆ.ಹಾಗಾದರೆ ಕ್ರಿಸ್ತ ಜಯಂತಿ ಅಂದರೆ ಏನು? ಕ್ರಿಸ್ಮಸ್ ಹಬ್ಬ ಅಂದರೆ ಮೊದಲನೆಯ ಅರ್ಥ ಲೋಕ ರಕ್ಷಕನಾದಂತ ಏಸುಕ್ರಿಸ್ತನನ್ನು ಗುರುತಿಸುವಂತದ್ದು. ಗುರುತುಸುವಿಕೆ ಅದು ವ್ಯಕ್ತಿಯ ಶ್ರೇಷ್ಠತೆ.ಹಾಗೂ ವ್ಯಕ್ತಿತ್ವವನ್ನು ತೋರಿಸುವಂತದ್ದು ಆಗಿರುತ್ತದೆ.ಹಾಗೆ ಯೇಸುಕ್ರಿಸ್ತನು ಜನಿಸಿದಾಗ. ಈ ಪ್ರಕೃತಿ ಯೇಸುವನ್ನು ಗುರುತಿಸಿದೆ.ಪ್ರಕೃತಿ ಯೇಸುವಿನ ಮಹಿಮೆಯನ್ನು ತೋರಿಸಿದೆ.ಆ ಮಹಿಮೆಯನ್ನು ಭೂಲೋಕದಲ್ಲಿ ವಾಸಿಸುತ್ತಿರುವ ಪಂಡಿತರು.ಕುರುಬರು.ಗುರುತಿಸಿದ್ದಾರೆ.ಆಕಾಶದಲ್ಲಿ ಅದ್ಭುತವಾದ ತಾರೆ ಮುಡಿತು.ಮೂಡಣ ದೇಶದ ಪಂಡಿತರು ಅದನ್ನು ಗುರುತಿಸುತ್ತಾ ಇದ್ದಾರೆ.ಆ ಪಂಡಿತರು ಎಂದಿಗೂ ಇಂತಹ ಆಶ್ಚರ್ಯಕರವಾದ ನಕ್ಷತ್ರವನ್ನು ನಾವು ಕಾಣಲಿಲ್ಲ.ಶಾಸ್ತ್ರಗಳನ್ನು ಓದಿದಾಗ
ಆ ಶಾಸ್ತ್ರಗಳಲ್ಲಿ ಬರೆಯಲ್ಪಟ್ಟಿರುವ ಸಂದೇಶ.ಲೋಕ ರಕ್ಷಕನಾದ ಯೇಸುಕ್ರಿಸ್ತನು ಜನಿಸಿದ್ದಾನೆ.ಎಂಬುದಾಗಿ ಬರೆಯಲ್ಪಟ್ಟಿದೆ.ಎಂದು ಮಾತನಾಡಿದರು ಅದೇ ರೀತಿ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ತಿಳಿಸಿದರು.
ಹಟ್ಟಿ ಚಿನ್ನದ ಗಣಿಯ ಡಿಜಿಎಂ ಸೈಫ್ ಉಲ್ಲಾಖಾನ್ ಮಾತನಾಡಿ ಸಂತ ಅನ್ನಮ್ಮ ಶಾಲೆ ಹಾಗೂ ಚರ್ಚ್ ಅಂದರೆ ಇದು ನನಗೆ ಎರಡನೆಯ ಮನೆ.ಅಂದರೆ ತಪ್ಪಾಗಲಾರದು ಎಂಬ ಮಾತಿನಿಂದ ಪ್ರಾರಂಭಿಸಿದ ಇವರು.ಹಟ್ಟಿಯಲ್ಲಿ ಹುಟ್ಟಿ ಬೆಳೆದು ಇದೇ ಶಾಲೆಯ ವಿದ್ಯಾರ್ಥಿಯಾಗಿ ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಓದಿದರು ಆದರೆ ನನ್ನ ಹೃದಯ ನನ್ನ ಮನಸ್ಸು ಯಾವುದೇ ಇರಲಿ ನನ್ನನ್ನು ಬೆಳೆಸಿದ ಶಾಲೆ ಕ್ಯಾಂಪಸ್ ಹಾಗೂ ಚರ್ಚ್ ಎನ್ನುವಂತ ಮಾತನ್ನು ಹಾಡಿದರು.ಸಂತ ಅನ್ನಮ್ಮ ಶಾಲೆ ಹಾಗೂ ಚರ್ಚ್ ನಿಂದ ನಾವು ಎಲ್ಲಿಗೆ ಹೋದರು ನಮಗೆ ತುಂಬಾ ಗೌರವ ಸಿಗುತ್ತಾ ಇತ್ತು.ಇಲ್ಲಿನ ವಾತಾವರಣ ಇಲ್ಲಿನ ಶಿಕ್ಷಣ ಇದನ್ನೆಲ್ಲ ನೋಡಿದರೆ ನಾವು ಎಲ್ಲಿ ಹೋದರೂ ನಮಗೆ ಗೌರವ ಸಿಗುತ್ತಿತ್ತು.ಅದೇ ರೀತಿ ನಾನು ಕ್ರಿಶ್ಚಿಯನ್ ಬಗ್ಗೆ ನಾನು ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದೆ ಅದಕ್ಕೆ ಕೆಲವರು ನನಗೆ ನೀವು ಕ್ರಿಶ್ಚಿಯನ್ ಬಗ್ಗೆ ಓದಿದ್ದೀರಾ ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಹಳೆ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆಯನ್ನು ಓದಿದ್ದೇನೆ.ಅದೇ ರೀತಿ ಹಳೆ ಒಡಂಬಡಿಕೆಯಲ್ಲಿ ನ 10 ಆಜ್ಞೆಗಳನ್ನು ಅನುಸರಿಸಿದರೆ ನಮ್ಮ ಜೀವನ ತುಂಬಾ ಯಶಸ್ವಿಯಾಗುತ್ತದೆ.ನಾವು ಎಷ್ಟರಮಟ್ಟಿಗೆ ಈ ಹತ್ತು ಆಜ್ಞೆಗಳನ್ನು ಅನುಸರಿಸುತ್ತೇವೆಯೋ ನಮ್ಮ ಜೀವನವೇ ಸಫಲವಾಗುತ್ತದೆ ಎಂದು ಮಾತನಾಡಿದರು.
ನಂತರ ಫಾದರ್ ಡಾ!ವಿಜಯ್ ಕುಮಾರ್ ಮಿನಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಕೋರಿದರು.ಅದೇ ರೀತಿ 7 ಗುಂಪಿನಿಂದ ಏಸುಕ್ರಿಸ್ತನ ಜನದ ರೂಪಕ.ಹಾಗೂ ಡ್ಯಾನ್ಸ್ ಕಾರ್ಯಕ್ರಮ ನಡೆಸಿಕೊಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಓವನ್ ಮೇರಿ ಹಾಗೂ ಲೀನಾ ಮಿಸ್ ನೆರವೇರಿಸಿದರು ಸ್ವಾಗತವನ್ನು ಸೆಲ್ವಿ ಮಿಸ್ ನೆರವೇರಿಸಿದರು. ಪಾಲನ ಸಮಿತಿಯ ಕಾರ್ಯದರ್ಶಿ ರಾಜಪಾಲ ಹಾಗೂ ಉಪಾಧ್ಯಕ್ಷ ಮಾಣಿಕ್ಯಂ ಪಾಲನ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಅನೇಕ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಫಾದರ್ ಡಾ!ವಿಜಯಕುಮಾರ್ ವಂದನೆಯನ್ನು ಸಲ್ಲಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ