ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವ

 

ಮಸ್ಕಿ : ಲಿಂ.ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವವು ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಭಾನುವಾರ ಸಹಸ್ರಾರು ಸಹಸ್ರಾರು ಜನ ಸಂದಣಿಯಲ್ಲಿಯೂ ಶಾಂತಿಯುತವಾಗಿ ಜರುಗಿತು.

ಭಾನುವಾರ ಬೆಳಿಗ್ಗೆ ಚನ್ನಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗಂಗಾ ಸ್ಥಳದಿಂದ ಕುಂಭ ಹಾಗೂ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.ನಂತರ ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಬರ ಮಾಡಿಕೊಂಡು ಹಾಸನ ಸ್ವೀಕಾರ ಮಾಡಿದ ಗಣ್ಯರಿಗೆ ಶಾಲು ಹೊದಿಸಿ ಮಠದ ಹಿನ್ನೆಲೆ ಇರುವ ಪುಸ್ತಕ ಹಾಗೂ ನೆನೆಪಿನ ಕಾಣಿಗೆ ನೀಡಿ ವೇದಿಕೆಗೆ ಬರಮಾಡಿಕೊಂಡರು.

ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಭರತ ನಾಟ್ಯ ಮಾಡಲಾಯಿತು.ವಿಶೇಷ ಎಂಬಂತೆ ತಮ್ಮ ಇಳಿ ವಯಸ್ಸಿನಲ್ಲೂ 3 ನವ ದಂಪತಿಗಳಿಗೆ ಹೊಸ ಸಮವಸ್ತ್ರ,ಬಂಗಾರ,ಹಸಿರು ಬಳೆ,ಹಾಗೂ ಮದುವೆ ಕಾರ್ಯಕ್ಕೆ ಬೇಕಾಗುವವನ್ನೂ ನೀಡಿ ತಮ್ಮ ಅಂತರಾಳದ ಚನ್ನಮಲ್ಲ ಸ್ವಾಮೀಜಿರವರ ಮೇಲಿನ ಭಕ್ತಿ ಮತ್ತು ಪ್ರೀತಿಗೆ ಹಾಗೂ ಅವರ ಸ್ಮರಣಾರ್ಥದ ಮಠಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದ ಬಸಮ್ಮ ಗಂಡ ದಿವಂಗತ ಮಲ್ಲಪ್ಪ ಕೋಸಗಿ ಅವರನ್ನು ವೇದಿಕೆಗೆ ಅಥಿತಿಯಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದರು.

ನಂತರ ಶ್ರೀ ಮಠದ 501 ಬಾಲಮಕ್ಕಳಿಗೆ ಹಾಗೂ ಮುತ್ತೈದೆ ಮಹಿಳಾ ಭಕ್ತರಿಗೆ ಅತೀ ಶಿಸ್ತು ಬದ್ಧವಾಗಿ ಅತ್ಯಂತ ಗೌರವಯುತವಾಗಿ ಅಂದರೆ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಹೇಗೆ ಸಂಪ್ರದಾಯದಂತೆ ಹುಡಿ ತುಂಬಲಾಗುವದೋ ಅದೇ ಮಾದರಿಯಲ್ಲಿಯೇ ಅವರ ಹುಡಿಗಳಿಗೆ ಶ್ರೀಗಳೇ ಹುಡಿ ಸಾಮಾನುಗಳನ್ನು ಹಾಕುವ ಮೂಲಕ ಹೊಸತನ ಕಾರ್ಯಕ್ರಮವು 2 ನೇ ವರ್ಷವೂ ಯಶಸ್ವಿಯಾಗಿ ಜರುಗಿತು.

ಮಠದಲ್ಲಿಯೇ ಜರುಗಿದ 3 ಸಾಮೂಹಿಕ ವಿವಾಹವಾದ ನವ ದಂಪತಿಗಳಿಗೆ ಅಕ್ಷತೆ ಕಾಳು ಹಾಕುವ ಮೂಲಕ ವೇದಿಕೆಯ ಗಣ್ಯರು ಆಶೀರ್ವದಿಸಿ ಶುಭ ಹಾರೈಸಿದರು. ಶ್ರೀಮಠದ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಕುರಿತು ಮಾನವಿ ಕಲ್ಮಠದ ಶ್ರೀಗಳು,ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್,ಹಾಲಿ ಶಾಸಕರಾದ ಆರ್ ಬಸನಗೌಡ ತುರುವಿಹಾಳ ಮಾತನಾಡಿದರು.ಕಾರ್ಯಕ್ರಮದ ನಂತರ ಲಡ್ಡು, ಅನ್ನ - ಸಾಂಬಾರ್ ಭಕ್ತರಿಗೆ ಪ್ರಸಾದ ರೂಪದಲ್ಲಿ ಸಹಸ್ರಾರು ಭಕ್ತರು ಸವಿದರೂ.ಸಂಜೆ 6 ಗಂಟೆಗೆ ಶ್ರೀ ಮಠದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.

ಇದೇ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ,ಗ್ಯಾರಂಟಿ ಸಂಘದ ಅಧ್ಯಕ್ಷ ಮೈಬೂಬ ಸಾಬ್ ಮುದ್ದಾಪುರ, ಎಲಿಗಾರ್ ಶರಣಪ್ಪ,ಬಸವ ಶರಣರು ಸಂತೆ ಕೆಲ್ಲೂರು ಮಠ,ನಿರೂಪದೇಪ್ಪ ವಕೀಲರು,ಚನ್ನಮಲ್ಲ ಶಿವಯೋಗಿಗಳ ಮೆದಿಕಿನಾಳ ಮಠದ ಸಕಲ ಸದ್ಭಕ್ತರು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*