ವಿವಿಧೆಡೆ ಮೊಹರಂ ಹಬ್ಬದ ಸಡಗರ ಸಂಭ್ರಮ
ಮಸ್ಕಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದೇ ವಿಶ್ವ ಖ್ಯಾತಿ ಪಡೆದ
ಮೊಹರಂ ಆಚರಣೆಯೂ ಸಂಭ್ರಮ ಸಡಗರದಿಂದ ಶಾಂತಿಯುತವಾಗಿ ಜರುಗಿತು.
ಮೊಹರಂ ಹಿನ್ನೆಲೆ : ಇರಾಕಿನ ಕರ್ಬಲಾದಲ್ಲಿ ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್) ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು.ಅವರ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಮುಸ್ಲಿಮರು ಉರೂರುಗಳಲ್ಲಿ ಮೆರವಣಿಗೆ ನಡೆಸಿ ಇಮಾಮ್ ಅವರು ತೋರಿಸಿದ ಮಾನವೀಯತೆ ಸಂದೇಶ ಸಾರುತ್ತಾರೆ. ಕೆಲವರು ಮಾಸದ 9, 10 ಹಾಗೂ 11ನೇ ದಿನಗಳಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಎಲ್ಲೆಡೆ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗುತ್ತದೆ. ಕರ್ಬಲಾದ ಕದನದ ನೆನಪು ಮಾಡಿಕೊಳ್ಳಲಾಗುತ್ತದೆ.
ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂಥ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ. ಕುರಾನ್ ನಲ್ಲಿ ಹೇಳಲಾಗಿರುವ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡಾ ಒಂದಾಗಿದ್ದು, ತಿಂಗಳ ಕೊನೆದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ.
ಅದರಂತೆಯೇ ಇಂದು ಮಸ್ಕಿ ಪಟ್ಟಣ ಹಾಗೂ ಮೆದಿಕಿನಾಳ, ಬುದ್ದಿನ್ನಿ.ಎಸ್ ಗ್ರಾಮ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲಗೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿ ಮೊಹರಂ ಆಚರಣೆ ಶಾಂತಿಯುತವಾಗಿ ನಡೆಯಿತು.ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಸೇರಿ ಇನ್ನಿತರೇ ವರ್ಗದವರು ಭಾಗಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ