ಭದ್ರಾ ಒಳ ಹರಿವಿನಲ್ಲಿ ಭಾರೀ ಇಳಿಕೆ
ದಾವಣಗೆರೆ:ಭದ್ರಾ ಜಲಾಶಯಕ್ಕೆ ಇಂದು ಬೆಳಗಿನ ಜಾವದ ವೇಳೆಗೆ 1.4 ಟಿಎಂಸಿ ನೀರು ಹರಿದುಬಂದಿದೆ. ಒಳ ಹರಿವಿನಲ್ಲಿ ಭಾರೀ ಇಳಿಕೆ ಆಗಿದೆ.
ನಿನ್ನೆ 28 ಸಾವಿರದ 296 ಕ್ಯೂಸೆಕ್ ಇದ್ದ ಹರಿವಿನ ಪ್ರಮಾಣ ಇಂದು 16 ಸಾವಿರದ 41 ಕ್ಯೂಸೆಕ್ ಗೆ ಇಳಿದಿದೆ.
ನಿನ್ನೆ ಬೆಳಗ್ಗೆ 6 ಗಂಟೆ ವೇಳೆಗೆ ಇದ್ದ 158 ಅಡಿ ಇದ್ದ ಮಟ್ಟ ಇಂದು 159 ಅಡಿ 9 ಇಂದು ತಲುಪಿದೆ.
ಜಲಾಶಯದಲ್ಲಿ ನಿನ್ನೆ 41 ಟಿಎಂಸಿ ನೀರು ಇತ್ತು. ಇಂದು 42.45ಕ್ಕೇರಿದೆ. ಅಲ್ಲಿಗೆ 1.4 ಟಿಎಂಸಿ ನೀರು ಕಳೆದ 24 ತಾಸಿನ ಒಳಗೆ ಹರಿದುಬಂದಿದೆ.
ಮಳೆ ಪ್ರಮಾಣ ಕೊಂಚ ತಗ್ಗಿದ ಕಾರಣ ಒಳ ಹರಿವಿನಲ್ಲಿ ಇಳಿಕೆ ಆಗಿದೆ. ಇಂದು ಮತ್ತು ನಾಳೆ ಮತ್ತೆ ಮಳೆ ಚುರುಕು ಆಗುವ ಸಂಭವ ಇದ್ದು ಮತ್ತೆ ನೀರಿನ ಹರಿವಿನ ಪ್ರಮಾಣ ಹೆಚ್ಚಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ