ಸಂಜೀವರಾಯನಕೋಟೆ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ

ಬಳ್ಳಾರಿ: ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಳೆಯ ಕಟ್ಟಡಗಳಿಂದ ಕೂಡಿ,ಕೋಣೆಗಳು ಶಿಥಿಲಗೊಂಡಿರುವುದರಿಂದ ಸಂಪೂರ್ಣ ನೆಲಸಮಗೊಳಿಸುವ ಸಲುವಾಗಿ ಈಗಾಗಲೇ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ಕೊಟ್ಟಿರುತ್ತಾರೆ. ವಸ್ತು ಸ್ಥಿತಿ ತಿಳಿದಿರುತ್ತಾರೆ.

                                                            ಹೊಸ ಕಟ್ಟಡದ ನೀಲ ನಕಾಶೆ

ಕೊನೆಯ ಹಂತದ ತೀರ್ಮಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯನಿರ್ವಾಕ ಇಂಜಿನಿಯರ್ ಬಿ.ಶ್ರೀಕಂಠಸ್ವಾಮಿ ಭೇಟಿನೀಡಿ ನೆಲಸಮಗೊಳಿಸುವ ಕ್ರಿಯೆಗೆ ಒಪ್ಪಿಗೆ ನೀಡಿ, ಅಲ್ಲಿಯ ವರೆಗೆ ಮಕ್ಕಳ ಕಲಿಕೆಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಅವರಿಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಎ.ಸುರೇಶ್,PRED ಗಳಾದ ಕೊಟ್ರಬಸಪ್ಪ,PTC ಗಳಾದ ಶ್ರೀನಿವಾಸ, ಬಿ.ಆರ್. ಪಿ.ರುದ್ರಮುನಿಸ್ವಾಮಿ,ಸಿ.ಆರ್. ಪಿ.ಶ್ರೀನಿವಾಸ  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*