ಕೆಸರು ಗದ್ದೆಯಾದ ಸಾರ್ವಜನಿಕ ರಸ್ತೆ ಪ್ರತಿಭಟನೆ ಮಾಡಲು ನಿರ್ಧಾರ

ಕಾನ ಹೊಸಹಳ್ಳಿ :- ಗುಂಡು ಮುಣು ಗು ಗ್ರಾಮ ಪಂಚಾಯಿತಿ ವ್ಯಾಪ್ತಿಗ ಬರುವ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಿಂದ ಗ್ರಾಮದ ಸಾಹಿಪ್ರ ಶಾಲೆಯ ಹಿಂಭಾಗದ ಸಾರ್ವಜನಿಕರು ಹೊಲ ತೋಟಗಳಿಗೆ ಹಾಗೂ ಇಮ್ಡಾಪುರ ಗ್ರಾಮಕ್ಕೆ ಹೋಗುವ ಸಾರ್ವಜನಿಕರ ಮಣ್ಣಿನ ರಸ್ತೆ ಸಂಪೂರ್ಣ ಹಾಳಾಗಿದ್ದು ತಗ್ಗು ಗುಂಡಿಗಳಿಂದ ಕೂಡಿದೆ. ಸತತವಾಗಿ ಸುರಿ ದ ಮಳೆಯಿಂದ ಕೆಸರು ಗದ್ದೆಯಂತಾಗಿದೆ. ರೈತರು ಸಾರ್ವಜನಿಕರು ಈ ರಸ್ತೆಯಲ್ಲಿ ತಮ್ಮ ತಮ್ಮ ದಿನ ನಿತ್ಯ ಕೆಲಸಗಳಿಗೆ ಜಮೀನುಗಳಿಗೆ ಹೋಗಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯಾವುದಾದರೂ ಕೆಲಸದ ನಿಮಿತ್ಯ ಸರಕಾರಿ ವಾಹನಗಳು ಕೂಡ ಬರಲು ಸಾಧ್ಯವಾಗುತ್ತಿಲ್ಲ ಇಲ್ಲಿನ ಸಮಸ್ಯೆ ಬಗ್ಗೆ ರಸ್ತೆ ದುರಸ್ತಿ ಪಡಿಸುವ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ ಆದರೂ ಕೂಡ ಏನೂ ಪ್ರಯೋಜನವಾಗಿಲ್ಲ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಯಾವ ಅಧಿಕಾರಿಗಳು ಧ್ವನಿ ಎತ್ತುತ್ತಿಲ್ಲ. ಗ್ರಾಮಸ್ಥರು ಮಾತ್ರ ಪದೇಪದೇ ಈ ರಸ್ತೆ ಬಗ್ಗೆ ಪತ್ರಿಕೆಯಲ್ಲಿ ಹಾಗೂ ಅಧಿಕಾರಿಗಳಲ್ಲಿ ಕೇಳುತ್ತಾ ಬಂದಿದ್ದಾರೆ.


ಬಿತ್ತನೆ ಆರಂಭವಾಗಿದೆ ಈ ರಸ್ತೆಯಲ್ಲಿ ಸಂಚರಿಸುವ ಸ್ಥಿತಿಗತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಂದು ನೋಡಬೇಕಾಗಿದೆ.

 ಶೀಘ್ರದಲ್ಲಿ ಈ ರಸ್ತೆ ಕಾಮಗಾರಿ ಮಾಡುವವರೆಗೂ ಸಂಬಂಧಪಟ್ಟ ಇಲಾಖೆ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು, ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂಬಂಧಪಟ್ಟ ಇಲಾಖೆಯವರಿಗೆ ಈ ಪತ್ರಿಕೆಯ ಮೂಲಕ ತಿಳಿಸಿದ್ದಾರೆ ಹಾಗೂ ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ