ಸಿ.ಎಸ್.ಪುರ.ಬಿಸಿಎಂ ನಿಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
*ಗುಡೇಕೋಟೆ*: ‘ಸೈನಿಕರ ತ್ಯಾಗದ ಫಲ ಹಾಗೂ ನಿಸ್ವಾರ್ಥ ಸೇವೆಯಿಂದ ದೇಶ ಸಮೃದ್ಧವಾಗಿದೆ’ ಎಂದು ಅತಿಥಿ ಶಿಕ್ಷಕ ಭೀಮರೆಡ್ಡಿ ಹೇಳಿದರು.
ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಿಸಿಎಂ ನಿಲಯದಲ್ಲಿ ಭಗತ್ ಸಿಂಗ್ ಯುವಕ ಸಂಘ ಮತ್ತು ದಲಿತ ಯುವಕ ಸಂಘದ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ ಅಭಿವೃದ್ಧಿಯಾಗಿ ಪ್ರಪಂಚಕ್ಕೆ ಮಾದರಿಯಾಗಬೇಕಾದರೆ ಸೈನಿಕರ ಕೊಡುಗೆ ಅಪಾರವಾಗಿದೆ ಎಂದರು.
ಭಗತ್ ಸಿಂಗ್ ಯುವಕ ಸಂಘದ ವಿ.ಲೋಕೇಶ್ ಮಾತನಾಡಿ, ದೇಶದ ರಕ್ಷಣೆಗಾಗಿ ಹಗಲಿರುಳು ಗಡಿಗಳಲ್ಲಿ ಕಾಯುತ್ತಿರುವ ಸೈನಿಕರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸೈನಿಕರ ಮೇಲೆಯೂ ಗೌರವ, ಅಭಿಮಾನ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಸಿ.ಎಂ.ನಿಲಯದ ಮೇಲ್ವಿಚಾರಕರಾದ ಕುಮಾರಸ್ವಾಮಿ,ಅತಿಥಿ ಶಿಕ್ಷಕ ಭೀಮರೆಡ್ಡಿ,ಶಿಕ್ಷಣಪ್ರೇಮಿ ಕೊಟ್ರೇಶ್,ವಿ, ಲೋಕೇಶ್, ಡಿಎಸ್ಎಸ್ ಅದ್ಯಕ್ಷ ಶಿವು,ಶಂಕರನಾಗ್, ಮಹಾಂತೇಶ್, ಬಸವರಾಜ್, ಸಂದೀಪ್, ನಾಗೇಶ್,ಬಸವೇಶ್,ರಾಜೂ,ಅಡುಗೆ ಸಿಬ್ಬಂದಿ ಚೌಡಮ್ಮ,ರಂಗಪ್ಪ, ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ