ನಾಗರಹುಣಸೆ: ಮುಸ್ಲಿಮರಿಲ್ಲದ ಊರು ಮೊಹರಂ ಬಲು ಜೋರು
ಗುಡೇಕೋಟೆ:ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ಅಂದಾಜು 200 ಮನೆಗಳು,1000 ಜನಸಂಖ್ಯೆ ಹೊಂದಿರುವ ನಾಗರಹುಣಸೆ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂರ ಕುಟುಂಬ ಇಲ್ಲದ್ದಿದ್ದರೂ ಸಹ ಮೊಹರಂ ಆಚರಣೆ ಮಾತ್ರ ಅದ್ದೂರಿಯಾಗಿ ಆಚರಿಸಲಾಯಿತು ಎಂಬುದು ನಾಗರಹುಣಸೆ ಗ್ರಾಮ, ಭಾವೈಕ್ಯತೆಗೆ ಸಾಕ್ಷಿಯಾಗಿದೆ
ನಾಗರಹುಣಸೆಯಲ್ಲಿ ಹಿಂದುಗಳೇ ಕಟ್ಟಿಸಿದ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ಶಾಂತಿಯುತವಾಗಿ ನಡೆಯುತ್ತದೆ. ಪಕ್ಕದ ಗ್ರಾಮದ ಮುಸ್ಲಿಮರನ್ನು ಕರೆದುಕೊಂಡು ಬಂದು ಗ್ರಾಮದಲ್ಲಿ ಹಬ್ಬಕ್ಕಿಂತ 15 ದಿನಗಳ ಮುಂಚೆ ಊರಿನ ಎಲ್ಲಾ ಜನಾಂಗದ ಜನರು ಸೇರಿ ಹಣ ಸಂಗ್ರಹಿಸುತ್ತಾರೆ. ಮಸೀದಿಗೆ ಸುಣ್ಣ ಬಣ್ಣ ಬಳಿಯುವುದರಿಂದ ಹಿಡಿದು ದೇವರನ್ನು ಕೂಡಿಸುವ ಎಲ್ಲಾ ತಯಾರಿಗಳನ್ನು ಹಿಂದುಗಳೇ ನಡೆಸುತ್ತಾರೆ.
ಮಸೀದಿಯಲ್ಲಿ ದೇವರ ಮುಂದೆ ನಡೆಯುವ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಕೂಡ ಗ್ರಾಮಸ್ಥರೇ ನೆರವೇರಿಸುತ್ತಾರೆ. ಕತ್ತಲರಾತ್ರಿ ದೇವರ ಮೆರವಣಿಗೆ ದಿನ ಹಾಗೂ ಮೊಹರಂ ಕೊನೆ ದಿನ ದೇವರು ಹಳ್ಳಕ್ಕೆ(ಹೊಳೆಗೆ) ಹೋಗುವಾಗ ಹಿಂದುಗಳೇ ದೀವಿಟಿಗೆಗೆ ಧೂಪ ಹಾಕುವ ವಸ್ತುಗಳನ್ನು ಹಾಗೂ ದೇವರುಗಳನ್ನು ಹಿಂದುಗಳೇ ಹಿಡಿದು ಮೆರವಣಿಗೆ ನಡೆಸುತ್ತಾರೆ.
ದೇವರು ಮನೆ ಮುಂದೆ ಬಂದಾಗ ಭಕ್ತರು ಭಕ್ತಿಯಿಂದ ನೀರು ಹಾಕಿ ನಮಸ್ಕರಿಸುತ್ತಾರೆ. ಸಕ್ಕರೆ ಪುಟಾಣಿ ಕೊಬ್ಬರಿ ಉತ್ತತ್ತಿ ನೈವೇದ್ಯ ಸಮರ್ಪಿಸುತ್ತಾರೆ. ಮೊಹರಂ ಹಬ್ಬದ ಮೊದಲ ದಿನ ಬೆಳಗಿನ ಜಾವ ಮಸೀದಿ ಮುಂದೆ ತೋಡಿದ ಗುಂಡಿಯಲ್ಲಿ ಅಗ್ನಿ ಹಾಕಿ ದೇವರು ಒತ್ತವರು ಹರಕೆ ಹೊತ್ತುವರು ಅಗ್ನಿಯಲ್ಲಿ ಹಾಯುತ್ತಾರೆ. ಮೊಹರಂ ಆಚರಣೆಯ ಐದು ದಿನಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ.
*ನಮ್ಮೂರಿನಲ್ಲಿ ಹಿಂದಿನಿಂದಲೂ ಹಿರಿಯರು ಮೊಹರಂ ಹಬ್ಬವನ್ನು ಬಹಳ ಭಕ್ತಿ ಪೂರ್ವಕವಾಗಿ ಮುಸ್ಲಿಮರಿಲ್ಲದಿದ್ದರೂ ಸಹ ಭಕ್ತಿ ಭಾವದಿಂದ ಹಬ್ಬ ಆಚರಣೆ ಮಾಡುತ್ತಾರೆ, ಕತ್ತಲ ರಾತ್ರಿ ದಿನ ಮಸೀದಿ ಮುಂದೆ ತೋಡಿದ ಗುಂಡಿಯಲ್ಲಿ ನಿಗಿನಿಗಿ ಕೆಂಡದಲ್ಲಿ ಗ್ರಾಮಸ್ಥರು ನಡೆದಾಡುವ ಪರಿ ಆಚರಣೆ ವಿಶಿಷ್ಟವಾಗಿದೆ.*
*.ಡಿ.ವಿನಯ್ ಕುಮಾರ್, ಶಿಕ್ಷಕರು.*
Super sir
ಪ್ರತ್ಯುತ್ತರಅಳಿಸಿ