ಹಿಂದುಸ್ಥಾನದ ಭವಿಷ್ಯಕ್ಕೆ ಮುಸ್ಲಿಂ ತುಷ್ಟೀಕರಣ ಕೆಡುಕು ಎಂದಿದ್ದ ಅಂಬೇಡ್ಕರ್
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
#ambedkar #ambedkarchintane #ambedkarkuritu #ambedkarbadukubaraha #ambedkaronmuslim
ಡಾ. ಬಿ.ಆರ್. ಅಂಬೇಡ್ಕರ್ ಮುಸ್ಲಿಮರ ಬಗ್ಗೆ ಯಾವ ನಿಲುವು ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಹಲವು ಬಾರಿ ಎದುರಾಗುತ್ತದೆ. ಇದಕ್ಕೆ ಉತ್ತರ ಅವರು ಯಾವುದೇ ವಿಶೇಷ ಅಥವಾ ವಿಶೇಷವಲ್ಲದ ನಿಲುವನ್ನು ನಮ್ಮ ದೇಶದಲ್ಲಿನ ಮುಸ್ಲಿಮರ ಕುರಿತು ಇಟ್ಟುಕೊಂಡಿರಲಿಲ್ಲ. ಆದರೆ, ಒಂದು ವಿಷಯದಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಅನ್ನು ಬಲವಾಗಿ ವಿರೋಧಿಸಿದ್ದರು. ಅದು ಪಂಡಿತ್ ಮೋತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿನ ಹಿಂದ್ ಸ್ವರಾಜ್ ಸಂವಿಧಾನ ಕರಡು ನಕ್ಷೆ ತಯಾರಿಸುವ ವಿಷಯದಲ್ಲಿ.
1928ರಲ್ಲಿ ಪಂಡಿತ್ ಮೋತಿಲಾಲ್ ನೆಹರು ಅಧ್ಯಕ್ಷತೆಯಲ್ಲಿ ಸಮಿತಿಯೊಂದು ರಚನೆ ಆಗುತ್ತದೆ. ಇದು ಹಿಂದ್ ಸ್ವರಾಜ್ಯದ ಸಂವಿಧಾನದ ಕರಡು ರಚನೆಯ ಕೆಲಸಮಾಡುತ್ತದೆ. ಹಿಂದು ದೇಶಕ್ಕೆ ಸಂವಿಧಾನ ರಚನೆಮಾಡುವ ಮೊದಲ ಯತ್ನ ಈ ಸಮಿತಿ ಮಾಡುತ್ತದೆ.
ಅಂಬೇಡ್ಕರ್ ಈ ಸಮಿತಿಯನ್ನು ಖಡಿಸಲು ಪ್ರಮುಖ ಕಾರಣ ಈ ಸಮಿತಿ ಕರಡು ರಚನೆ ವೇಳೆ ದೇಶದ ಒಟ್ಟು ಆಸಕ್ತಿಯನ್ನು ನೋಡುವ ಬದಲು ಮುಸ್ಲಿಮರ ಪ್ರೀತಿ ಗಳಿಸಲು ಯತ್ನಿಸಿದೆ ಎಂಬುದೇ ಆಗಿತ್ತು. ಎಲ್ಲೂ ಸಹಿತ ದಲಿತ, ಶೋಷಿತರ ಪರ ಒಂದಿಷ್ಟೂ ಆಸಕ್ತಿಯನ್ನು ಈ ಸಮಿತಿ ತನ್ನ ವರದಿಯಲ್ಲಿ ತೋರಲಿಲ್ಲ ಎಂಬುದನ್ನು ಅಂಬೇಡ್ಕರ್ ಟೀಕಿಸಿದ್ದರು. ವರದಿಯಲ್ಲಿ ಮುಸ್ಲಿಮರಿಗೆ ಹೊಸ ಪ್ರಾಂತ ನಿರ್ಮಾಣ ಮಾಡುವ ಅವಕಾಶವನ್ನು ನೀಡಲಾಗಿತ್ತಂತೆ. ಇದು ಹಿಂದುಸ್ಥಾನದ ಮಟ್ಟಿಗೆ ಅತ್ಯಂತ ಅಪಾಯಕಾರಿ ಎಂಬುದನ್ನು ಅಂಬೇಡ್ಕರ್ ಹೇಳಿದ್ದರು. ಹಾಗೆಂದರೆ ಜಾತಿವಾಚಕ ಆಧಾರದಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಸ್ಥಳ ಮೀಸಲಿಡುವುದು ಇದ್ದಿರಬೇಕು.
ಇದೇ ಕಾರಣಕ್ಕೆ ಅಂಬೇಡ್ಕರ್ ನೆಹರು ಸಮಿತಿ ಶಿಪಾರಸ್ಸನ್ನು ಕಟುವಾಗಿ ಟೀಕಿಸಿದರು. ಕಾಂಗ್ರೆಸ್ ಮುಸ್ಲಿಮರ ಪರ ತೋರುವ ಒಲವನ್ನು ಅದು ಯಾಕೆ ಹಿಂದುಳಿದ ಹಿಂದೂಗಳ ಪರ ತೋರುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದೆ ಇಟ್ಟಿದ್ದರು. ಅಷ್ಟೇ ಅಲ್ಲ ನೆಹರು ಸಮಿತಿ ಅನುಸರಿಸಿದ ನೀತಿ ಅಂದರೆ "ತೇಲುವವನಿಗೆ ತೋಳಿನಾಸೆ, ಮುಳುಗುವವನಿಗೆ ಒದೆತ" ಎಂದಿದ್ದರು ಅಂಬೇಡ್ಕರ್.
ಆಧಾರ:ಅಂಬೇಡ್ಕರ್ ಭಾಷಣ ಮತ್ತು ಬರಹಗಳು. 22ನೆಯ ಸಂಚಿಕೆ. ಪುಟಸಂಖ್ಯೆ 10ರಿಂದ.(ಮುಂದುವರಿಯುವುದು)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ