63 ಟಿಎಂಸಿ ತಲುಪಿದೆ ನೀರಿನ ಸಂಗ್ರಹ- ಆ.1ರಿಂದ ನಾಲೆಗಳಿಗೆ ನೀರು ಬಿಡ್ತಾರಂತೆ

ಬಲ ದಂಡೆ ಕಾಲುವೆಗೆ ಕುಡಿಯುವ ನೀರಿನ ಅವಶ್ಯಕತೆ ನೀರು ಹರಿಸುತ್ತಿರುವುದು. 

ಬಳ್ಳಾರಿ:ತುಂಗಾಗಭದ್ರಾ ಜಲಾಶಯದ ನೀರಿನ ಮಟ್ಟ ಇದೀಗ 63 ಟಿಎಂಸಿ ದಾಟಿದ ಹಿನ್ನೆಲೆಯಲ್ಲಿ ಜೊತೆಗೆ ಒಳ ಹರಿವು ನಿನ್ನೆ ಸಂಜೆ 6 ಗಂಟೆ ವೇಳೆಗೆ 84 ಸಾವಿರ ಕ್ಯುಸೆಕ್ ಇರುವ ಹಿನ್ನೆಲೆಯಲ್ಲಿ ಆ.1ರಿಂದ ನಾಲೆಗಳಿಗೆ ನೀರು ಬಿಡುವ ಸಾಧ್ಯತೆ ಇದೆ.

ಹಾಲಿ ನೀರಾವರಿ ಸಲಹಾ ಸಮಿತಿಯ ಸದಸ್ಯರ ನೇಮಕ ಆಗಿಲ್ಲ. ನೇಮಕಾತಿ ಇನ್ನೂ ತಡ ಆಗಲಿದೆ. ಇದೇ ಕಾರಣಕ್ಕೆ ಮೂರೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ, ಲಿಖಿತ ಆದೇಶವೊಂದನ್ನು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಗೆ ನೀಡಬೇಕು. ಆಗ ನೀರು ಹರಿಸಬಹುದು. ಇಲ್ಲವೇ ಸಮಿತಿ ಪೂರ್ಣ ಪ್ರಮಾಣದಲ್ಲಿ ರಚನೆ ಆಗಿ, ಅದು ಅಂತಿಮ ತೀರ್ಮಾನ ಕೈಗೊಂಡು ಆ ನಿರ್ಧಾರವನ್ನು ಮಂಡಳಿಗೆ ತಿಳಿಸಬೇಕು. ಆಗ ನೀರು ಹರಿಸಬಹುದು.

ಸಮಿತಿ ರಚನೆ ವಿಚಾರ ತಡ ಆಗುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಟ್ಟದಲ್ಲೇ ಒತ್ತಡ ಹೇರಿ ನೀರು ಹರಿಸುವ ಕಡೆ ಗಮನ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ