ಕೊಟ್ಟೂರು : ರಾಜ್ಯದಲ್ಲಿ ಪಡಿತರದಿಂದಲೇ ತಮ್ಮ ನಿತ್ಯ ಜೀವನ ನಡೆಸುವ ಹಲವಾರು ಕುಟುಂಬಗಳಿವೆ. ಪ್ರತಿ ತಿಂಗಳು ಪಡಿತರ ತಂದು ಮನೆಯಲ್ಲಿ ಊಟ ಮಾಡುವ ಎಷ್ಟೋ ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ಆದರೆ ಈ ತಿಂಗಳ ಪಡಿತರ ವಿತರಣೆಯಲ್ಲಿ ಆನ್ಲೈನ್ ಸರ್ವರ್ ದೋಷ ಬಂದಿರುವುದರಿಂದ ಪಡಿತರ ವಿತರಣೆಗೆ ಅಡಚಣೆ ಉಂಟಾಗಿದೆ. ಕೊಟ್ಟೂರಿನ ಅಕ್ಕಿ ವಿತರಣಾ ಹಲವು ಕೇಂದ್ರದಲ್ಲಿ ಬೆಳಗಿನಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ವಿತರಣಾ ಕೇಂದ್ರಗಳ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರವೇ ಸರ್ವರ್ ದೋಷಗಳನ್ನು ಪರಿಹರಿಸಲು ಮುಂದಾಗಬೇಕಿದೆ. ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿದರೆ, ಫೋನ್ ಸ್ವೀಕರಿಸುತ್ತಿಲ್ಲ, ನಮ್ಮ ಕಷ್ಟ ಕೇಳುವವರು ಯಾರು ಎಂದು ಪತ್ರಿಕಾ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಸರ್ವರ್ ದೋಷವಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಿಪಡಿಸಲು ಕ್ರಮ ವಹಿಸುವೆ. ವಿಜಯನಗರ ಜಿಲ್ಲಾಧಿಕಾರಿಗಳು ನಮ್ಮ ಲಾಗಿನ್ ಮತ್ತು ಪಬ್ಲಿಕ್ ಲಾಗಿನ್ ಇರುವುದಿಲ್ಲ ಆದರೂ ಕೂಡ ಸರ್ವರ್ ಡೌನ್ ಆಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಶೀಘ್ರವೇ ಇರುವ ದೋಷವನ್ನು ಸರಿಪಡಿಸಿ ಶೀಘ್ರ ಪಡಿತರ ವಿತರಣೆಗೆ ಕ್ರಮ ವಹ...
*ಏಕಮುಖವಾಗಿ ತಮಗೆ ಬೇಕಾದ ಹಾಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕಾಳಾಪುರ ಪಿಡಿಓ ಜಯಮ್ಮ..?* "ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯ" ಕೊಟ್ಟೂರು ತಾಲ್ಲೂಕು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರನ್ನು ಸದರಿ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನಿಸದೇ ಪ್ರೊಟೋಕಾಲ್ ಸರಿಯಾಗಿ ಪಾಲಿಸಿಲ್ಲದ ಕಾರಣ ಹತ್ತು ಮಂದಿ ಮಂಜುನಾಥ್ ಪೂಜಾರ್ ಕಾಳಾಪುರ, ನಾಗಪ್ಪ ಕನ್ನಕಟ್ಟೆ ಕಾಳಾಪುರ,ಸಾತಾಳ ಅಂಜಿನಪ್ಪ ಚೀನ್ನೇನಹಳ್ಳಿ, ಮಾರಕ್ಕ ಕಾಳಾಪುರ, ಭರಮಪ್ಪ ಹಾರಕನಾಳು, ಶಿವಮ್ಮಚೀನ್ನೇನಹಳ್ಳಿ,ಸಿ ನಾಗರಾಜ್ ಗೌಡ ನಡುಮಾವಿನಹಳ್ಳಿ,ನಿಂಗಮ್ಮಹಾರಕನಾಳು,ನಾಗರಾಜ ಹಿರೇ ವಡ್ಡರಹಳ್ಳಿ ,ಗೀತಮ್ಮ ನಡುಮಾವಿನಹಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರು ಹಕ್ಕುಚ್ಯುತಿ ಮಂಡಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಲ್ಲಿಸಿರುವ ಹಕ್ಕುಚ್ಯುತಿ ಪತ್ರದಲ್ಲಿ ಈ ಹಿಂದೆ ಪಿಡಿಓ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಕರೆಯೋಲೆ ನೀಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ನಂತರ ಸದರಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಇತ್ತು. *ಬೇಕಾ ಬಿಟ್ಟ...
ಕೊಟ್ಟೂರು ಪಟ್ಟಣ ಪಂಚಾಯಿತಿಗೆ 2018ರಲ್ಲಿ ಚುನಾವಣೆ ನಡೆದು, ಆಯ್ಕೆಯಾದ ಸದಸ್ಯರುಗಳು ಆರಂಭದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಘನ ನ್ಯಾಯಾಲಯವು ಅಧ್ಯಕ್ಷ ಉಪಾಧ್ಯಕ್ಷರ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ದಿನಾಂಕ 06-11-2020 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಭಾರತೀ ಸುಧಾಕರ್ ಪಾಟೀಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶಫೀ ಆಯ್ಕೆಯಾಗಿದ್ದರು. ಎರಡೂವರೆ ವರ್ಷಗಳ ನಂತರ ದಿನಾಂಕ 18-05-2023 ರಿಂದ 30-08-2024 ರವರೆಗೆ ಮಧ್ಯದ ಅವಧಿಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ದಿನಾಂಕ 30-08-2024 ರಿಂದ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಪಕ್ಷೇತರರಾಗಿ ಗೆದ್ದುಬಂದ ಬಿ.ರೇಖಾ ಅಧ್ಯಕ್ಷರಾಗಿ, ಸಿದ್ದಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಿನಾಂಕ 06-11-2025ಕ್ಕೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು, ಅಲ್ಲಿಂದ ಮತ್ತೇ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಘನ ನ್ಯಾಯಾಲಯವು ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿ, ದಿನಾಂಕ 12-12-2025 ರಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಆಡಳಿತಾಧಿಕಾರಿಗಳಾಗಿ ಕೊಟ್ಟೂರು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ. ಅಮರೇಶ್, ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ