ನಂಬಿದರೆ ನಂಬಿ.. ಇದು ನಿಜಕ್ಕೂ ಸತ್ಯ ಸುಟ್ಟು ಕೋಡಿಹಳ್ಳಿಯಲ್ಲಿ|ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕೆರೆ ನಿರ್ಮಾಣ...!!!
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಸುಟ್ಟು ಕೋಡಿಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು ಆಟ ವಾಡಲು ಸರಿಯಾದ ಮೈದಾನ ಇಲ್ಲಾ ಮಳೆಗಾಲದಲ್ಲಿ ಮಳೆಬಂದರೆ ಸಾಕು. ಶಾಲೆ ಮೈದಾನದಲ್ಲಿ ತಗ್ಗು ಪ್ರದೇಶ ನಿರ್ಮಾಣವಾಗಿರುವ ಅವರಣದಲ್ಲಿ ನೀರು ನಿಂತು ಕೆರೆ ನಿರ್ಮಾಣ ವಾಗಿದೆ . ಹಳ್ಳಿಯ ವಿಧ್ಯಾರ್ಥಿಗಳು ಮೈದಾನದಲ್ಲಿ ಅಟ ವಾಡುವುದನ್ನು ಬಿಟ್ಟು ಮೈದಾನದಲ್ಲಿ ಕೆರೆ ನಿರ್ಮಾಣ ಆಗಿರುವುದರಿಂದ ವಿದ್ಯಾರ್ಥಿಗಳು ಮೀನು ಹಿಡಿಯುವ ನಿಪುಣರಾಗಿದ್ದಾರೆ.ಅದರೆ ಹೊಲಸು ನೀರಿನಿಂದ ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳು ಹರಡಲು ಬಿತಿ ಹೆದರಾಗಿದೆ.
ಕೂಡಲೇ ಶಾಸಕರು ಮತ್ತು ಸಂಭಂದ ಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಶಾಲೆಯ ವಿಧ್ಯಾರ್ಥಿಗಳಿಗೆ ಮೈದಾನದಲ್ಲಿ ಅಟವಾಡಲು ಸ್ವಛತೆ ಯಿಂದ ಕೂಡಿದ ಮೈದಾನ ನಿರ್ಮಾಣವಾಗಬೇಕಾಗಿದೆ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಛತೆ ಮೈದಾನಕ್ಕಾಗಿ ಸಂಭಂದ ಪಟ್ಟ ಕಛೇರಿಯ ಮುಂಭಾಗದಲ್ಲಿ ಗ್ರಾಮದ ಪೋಷಕರು ಮತ್ತು ವಿದ್ಯಾರ್ಥಿಗಳು ಸಮೇತ ಪ್ರತಿಭಟನೆ ಮಾಡುತ್ತೇವೆ.
ಎಂದು ಕೊಟ್ಟೂರು ತಾಲೂಕು ಸಿ.ಪಿ.ಐ.ಎಂ.ಎಲ್ ಸಂಘಟನೆ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಪ್ರಜಾ ಸಾಕ್ಷಿಗೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ