ಹಾಲಾಪೂರದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ

 

ಮಸ್ಕಿ,ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಸಕರಾದ ಆರ್ ಬಸನಗೌಡ ತುರುವಿಹಾಳ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬೇಗನೇ ಪರಿಹರಿಸುವ ಕೆಲಸವನ್ನು ಗ್ರಾಮ ಪಂಚಾಯತಿಯ ಮಟ್ಟದಲ್ಲಿ ನಡೆಯುತ್ತದೆ ಹಾಗೆ ಈ ದೇಶದಲ್ಲಿ ಸ್ಥಳೀಯ ಸರಕಾರಕ್ಕೆ ಅತ್ಯಂತ ಮಹತ್ವ ಕೊಟ್ಟ ಪ್ರದಾನಿಮಂತ್ರಿ ಎಂದರೆ ರಾಜೀವ್ ಗಾಂಧಿಯವರು ಹೀಗಾಗಿ ಸ್ಥಳೀಯ ಸರಕಾರಕ್ಕೆ ಅತ್ಯಂತ ಮಾನ್ಯತೆಯನ್ನು ಅವರು ಇಡಿ ದೇಶಕ್ಕೆ ಅವಕಾಶ ಮಾಡಿಕೊಟ್ಟರು ಮುಂದೆ ಬರುವ ಹೊಸ ಅಧ್ಯಕ್ಷರು ಮತ್ತ ಸರ್ವಸದಸ್ಯರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ದರಾಗಿ ಕೆಲಸ ಮಾಡಿ ಹಳ್ಳಿಗಳ ಅಭಿವೃದ್ಧಿಗೆ ಸಹಕಾರಿಯಾಗಿ ಎಂದು ಶಾಸಕರಾದ ಆರ್ ಬಸನಗೌಡ ತುರುವಿಹಾಳ ಹೇಳಿದರು. 


ಈ ಸಂದರ್ಭಗಳಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ರವಿ ದೇಸಾಯಿ ಉಪಾಧ್ಯಕ್ಷೆ ಸಾಬಮ್ಮ ಗಂಡ ಗಂಗಪ್ಪ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಪಿಡಿಒ ಮಲ್ಲಿಕಾರ್ಜುನ ಪಾಟೀಲ್,ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ವೆಂಕಟರಡ್ಡಿ, ನಿರುಪಾದೇಪ್ಪ ವಕೀಲ, ಬಿ ಕರಿಯಪ್ಪ , ಬಸಪ್ಪ ಜಂಗಮರಹಳ್ಳಿ,ಕರಿಯಪ್ಪಹಾಲಾಪೂರ,ಬಲವಂತರಾಯಗೌಡ,ಮಂಜುನಾಥ ಶಿಕ್ಷಕರು,ಹಾಗೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ