ಸಾರ್ವಜನಿಕರ ದೂರುಗಳಿಗೆ:ಸ್ಪಂದಿಸಿದ ಶಾಸಕ ಜನಾರ್ದನ್ ರೆಡ್ಡಿ

 

ಗಂಗಾವತಿ: ಗಂಗಾವತಿಯ ಗೌಳಿ ಮಹದೇವಪ್ಪ ರಸ್ತೆ (ಬೈಪಾಸ್ ರಸ್ತೆ ) ಜುಲಾಯಿ ನಗರದಿಂದ ಗಾಂಧಿ ಚೌಕ್ ವೃತ್ತದ ವರೆಗೆ ರಸ್ತೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಬುಧವಾರ ರಂದು ಸುರಿಯುತ್ತಿರುವ ಮಳೆಯಲ್ಲೇ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿ ಕೂಡಲೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ನಂತರ ಪೌರಾಯುಕ್ತರೊಂದಿಗೆ ದುರ್ಗಮ್ಮನ ಹಳ್ಳದ ಕಾಮಗಾರಿ ವೀಕ್ಷಿಸಿ, ಸಾಧಕ ಭಾದಕಗಳನ್ನು ಚರ್ಚಿಸಿ ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಮಾನ್ಯ ಪೌರಯುಕ್ತರಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಯಮನೂರ ಚೌಡ್ಕಿ,ಚಂದ್ರು ಹೇರೂರು,ರಾಜೇಶ್ ರೆಡ್ಡಿ,ಶಿವಕುಮಾರ್ ಆದೋನಿ ಹಾಗೂ ಇತರ ಪ್ರಮುಖ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*