ಕೊಟ್ಟೂರು ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ

 


ಕೊಟ್ಟೂರು: ಕರ್ನಾಟಕತ್ವ ಎಂದರೆ ನಿಜವಾದ ಕನ್ನಡಿಗನಾಗುವುದು, ನಿಜಾರ್ಥದಲ್ಲಿ ಭಾರತೀಯ ಸಂಸ್ಕೃತಿಯು ಜೀವಸಂಸ್ಕೃತಿಯಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಬಿ.ಸಿ.ಮಹಾಬಲೇಶ್ವರ ಹೇಳಿದರು

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಪ್ರಸಾರಂಗ ಮತ್ತು ಕೊಟ್ಟೂರೇಶ್ವರ ಮಹಾ ವಿದ್ಯಾಲಯದ ಸಹಯೋಗದೊಂದಿಗೆ ಮಗ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರಚಾರೋಪನ್ಯಾಸಮಾಲೆ ನಾಲ್ಕರಲ್ಲಿ ಮಾತನಾಡಿದ ಅವರು,ಒಬ್ಬರ ನೋವಿಗೆ ಉಳಿದವರು ಸ್ಪಂದಿಸುವುದು ಜೀವಪರವಾಗಿರುವುದು ಕನ್ನಡಿಗರಲ್ಲಿ ಶತಮಾನಗಳಿಂದಲೂ ಹಾಸುಹೊಕ್ಕಾಗಿ ಬಂದಿವೆ ಎಂದು ಪ್ರಸಿದ್ಧ ಇತಿಹಾಸ ಸಂಶೋಧಕರಾದ ಪ್ರೊ. ಬಿ. ಸಿ ಮಹಾಬಲೇಶ್ವರಪ್ಪನವರು ಹೇಳಿದರು.

ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಪ್ರಸಾರಂಗ ಮತ್ತು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಮಾಲೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಹರಿದು ಹಂಚಿ ಹೋಗಿದ್ದ ಕನ್ನಡದ ನೆಲವನ್ನು ಒಟ್ಟುಗೂಡಿಸಲು ಆನೆೇಕ ಮಹನೀಯರು ಅವಿರತ ಹೋರಾಟ ಮಾಡಿದ್ದಾರೆ. ಹೈದರಾಬಾದ್ ಮತ್ತು ಮದ್ರಾಸ್ ಕರ್ನಾಟಕದಲ್ಲಿ ಪರಕೀಯ ಸ್ಥಿತಿಯಲ್ಲಿದ್ದಾಗ ಅಳವಂಡಿ ಶಿವಮೂರ್ತಿ ಸ್ವಾಮಿ, ಅಲ್ಲಂ ಕರಿಬಸಪ್ಪ ವೈ. ಮಹಾಬಲೇಶಪ್ಪ

ಅಂದಾನಪ್ಪ ದೊಡ್ಡ ಮೇಟಿ, ಅಲ್ಲಂ ಸುಮಂಗಲಮ್ಮ, ಮರಿಸ್ವಾಮಯ್ಯ ಮಠದ ಪಾಟೀಲ್, ವೈ.ನಾಗೇಶ ಶಾಸ್ತ್ರಿ , ಕೋ.ಚೆನ್ನಬಸಪ್ಪ ಎಂ. ಎಂ.ಜೆ. ಸದ್ಯೋಜಾತಪ್ಪ ,ಡಾ. ಆರ್ .ನಾಗನಗೌಡ, ಡಾ. ಅಲಬೂರು ನಂಜಪ್ಪ ಇನ್ನು ಅನೇಕ ಹೋರಾಟಗಾರರು ಕನ್ನಡ ಪರವಾಗಿ ಹೋರಾಟವನ್ನು ರೂಪಿಸಿ ಚಳುವಳಿ ಸತ್ಯಾಗ್ರಹಗಳಿಂದ ಈ ನಾಡನ್ನು ಒಂದುಗೂಡಿಸಿದರು.

ಚದುರಿ ಹೋಗಿದ್ದ ಕನ್ನಡಿಗರು ಒಟ್ಟಾಗಿದ್ದರಿಂದ ಆನೇಕ ಸಮಿತಿಗಳು ಏಕೀಕರಣದ ವಿರುದ್ಧ ನಿರ್ಣಯ ಮಾಡಿದಾಗಲೂ ಆನೇಕರ ಪರಿಶ್ರಮದಿಂದ ಕನ್ನಡ ನಾಡು ಏಕೀಕರಣವನ್ನು ಸಾಧಿಸಿತು. ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ದರಾಮ ಕಲ್ಮಠ ಮಾತನಾಡಿ, ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಉಳಿದ ಅನೇಕ ಪ್ರದೇಶಗಳು ಅಪ್ಪಟ ಕನ್ನಡ ಪ್ರದೇಶಗಳಾಗಿದ್ದರೂ, ಈ ನಾಡಿನಿಂದ ಹೊರಗೂಳಿದಿವೆ ಕನ್ನಡಿಗರು ಭಾಷೆಯ ದೃಷ್ಟಿಯಲ್ಲಿ ಉದಾಸೀನ ತೋರದೆ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಯುವತಲೆಮಾರಿಗಿದೆ ಎಂದರು.

ಪ್ರಸಾರಂಗದ ನಿರ್ದೇಶಕರಾದ ಡಾ. ಬಿ .ಜಿ ಕನಕೇಶಮೂರ್ತಿಯವರು ಪ್ರಾಸ್ತಾವಿಕವಾಗಿ ವಿಶ್ವವಿದ್ಯಾನಿಲಯದ ಪ್ರಸಾರಂಗದ ಚಟುವಟಿಕೆಗಳನ್ನ ಕುರಿತು ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಂ. ರವಿಕುಮಾರ್ ವಹಿಸಿದ್ದರು.ಆಡಳಿತ ಮಂಡಳಿಯ ಸದಸ್ಯರಾದ ಬಿ.ಎಸ್. ಕೊಟ್ರೇಶಪ್ಪ ಮತ್ತು ಡಿ. ಎಸ್. ಶಿವಮೂರ್ತಿ ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜೆ .ಬಿ ಸಿದ್ದನಗೌಡ ಸ್ವಾಗತಿಸಿದರು, ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮಿ ಪ್ರಾರ್ಥಿಸಿದರು ಹಾಗೂ ಉಪನ್ಯಾಸಕಿಯಾದ ವಿಜಯಲಕ್ಷ್ಮಿ ಸಜ್ಜನ್ ಕಾರ್ಯಕ್ರಮವನ್ನು ನಿರೂಪಿಸಿದರು ಅರವಿಂದ ಬಸಾಪುರ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*