ಕಂಪ್ಲಿ ತಾಲ್ಲೂಕಿನಲ್ಲಿ ಪುಷ್ಯ ಮಳೆಯ ಆರ್ಭಟ

ಭಾರಿ ಮಳೆಯಲ್ಲಿ ತೋಯಿಸಿಕೊಂಡೇ ಮನೆ ಸೇರಿದರು ಜನ

ಕಂಪ್ಲಿ-ಜು-26- ಕಳೆದೊಂದು ವಾರದಿಂದ ಜಿಟಿ ಜಿಟಿ ಮಳೆ ಆಗಾಗ ರಭಸದಿಂದ ಸುರಿಯುತ್ತಿದ್ದ ಮಳೆರಾಯ ಇಂದು ಮಧ್ಯಾಹ್ನದಿಂದಲೇ ಅರ್ಭಟಿಸುತ್ತಿದ್ದು, ಈ ವರ್ಷದಲ್ಲಿಯೇ ಅತ್ಯಂತ ದೊಡ್ಡ ಮಳೆ ಇಂದು ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದರೆ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಕೃಷಿ ಕೆಲಸ ಕಾರ್ಯಗಳಿಗೆ ತೆರಳಿದ್ದ ಕಾರ್ಮಿಕರು ಮಳೆಯಲ್ಲಿಯೇ ತೋಯಿಸಿಕೊಂಡು ಮನೆ ಸೇರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. 

  ಜುಲೈ 20ರಂದು ಪಾದಾರ್ಪಣೆ ಮಾಡಿದ್ದ ಪುಷ್ಯ ಮಳೆಯು ಮರ‍್ನಾಲ್ಕು ದಿನಗಳ ಕಾಲ ಜಿಟಿ ಜಿಟಿ ಹಾಗೂ ಆಗಾಗ ರಭಸದಿಂದ ಸುರಿಯುವ ಮೂಲಕ ಮಳೆಗಾಲವಿದೆ ಎನ್ನುವುದನ್ನು ಪ್ರದರ್ಶನ ಮಾಡಿತ್ತು. ಆದರೆ ಇಂದು ಬೆಳಗಿನಿಂದಲೇ ಜಿಟಿ ಜಿಟಿಯಾಗಿ ಶುರುವಾದ ಮಳೆ ಮಧ್ಯಾಹ್ನದೊತ್ತಿಗೆ ರಭಸವಾಗಿ ಸುರಿಯ ತೊಡಗಿತು. ಅದರಲ್ಲೂ ಭಾರಿ ಪ್ರಮಾಣದಲ್ಲಿ ಗಾಳಿಯೊಂದಿಗೆ ಮಳೆ ಸುರಿಯತೊಡಗಿದ್ದರಿಂದ ಸಂಜೆ ಶಾಲಾ ಕಾಲೇಜುಗಳು ಬಿಟ್ಟಾಗ ವಿದ್ಯಾರ್ಥಿಗಳು ಮಳೆಯಲ್ಲಿಯೇ ತೊಯಿಸಿಕೊಂಡು ಮನೆ ಸೇರುತ್ತಿರುವ ದೃಶ್ಯಗಳು ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂತು.

  ಇನ್ನು ಕಳೆದೊಂದು ವಾರದಿಂದ ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆ ಬರುತ್ತಿದ್ದರಿಂದ ಕೃಷಿ ಚಟುವಟಿಕೆಗಳು ಗರಗೆದರಿದ್ದು, ಕಾರ್ಮಿಕರು ಬಿಡುವಿಲ್ಲದ ಕಾರ್ಯದಲ್ಲಿ ತೊಡಗಿದ್ದರು. ಆದರೆ ಇಂದು ಮಧ್ಯಾಹ್ನದಿಂದ ಸುರಿದ ಭಾರಿ ಮಳೆಯಿಂದ ಕಾರ್ಮಿಕರು ಸಹಿತ ತಮ್ಮ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕಿ ಸುರಿಯು ಮಳೆಯಲ್ಲಿಯೇ ಮನೆ ಸೇರುತ್ತಿರುವ ಚಿತ್ರಗಳು ಕಂಡು ಬಂದವು. ಇಂದು ಮಧ್ಯಾಹ್ನದಿಂದ ಸಂಜೆಯವರೆಗೂ ಸುಮಾರು 40.ಮಿ.ಮೀ.ನಷ್ಟು ದಾಖಲೆ ಮಳೆಯಾಗಿದೆ.

  ಇಂದು ಸುರಿದ ಭಾರಿ ಮಳೆ ರೈತರ ಮುಖ್ಯದಲ್ಲಿ ಸಂತಸವನ್ನು ತಂದಿದೆ. ಯಾಕೆಂದರೆ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜೀವನಾಡಿ ತುಂಗಭದ್ರಾ ಜಲಾಶಯ ತಳಮಟ್ಟವನ್ನು ಮುಟ್ಟಿತು. ಆದರೆ ಕಳೆದ ಮರ‍್ನಾಲ್ಕು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೆ ಒಂದೇ ದಿನ ಸುಮಾರು 10 ಟಿ.ಎಂ.ಸಿ ಯಷ್ಟು ನೀರು ಬಂದಿದ್ದು, ಕಳೆದ ರಾತ್ರಿಯಿಂದ ಜಲಾಶಯಕ್ಕೆ ಸುಮಾರು 1 ಲಕ್ಷಕ್ಕೂ ಅಧೀಕ ಪ್ರಮಾಣದ ನೀರು ಬರುತ್ತಿರುವುದರಿಂದ ಈ ಗ ಜಲಾಶಯದಲ್ಲಿ 45 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದ್ದು, ಇದೇ ರೀತಿ ಜಲಾಶಯಕ್ಕೆ ನೀರು ಬಂದರೆ ಇನ್ನೊಂದು ವಾರದಲ್ಲಿ ಜಲಾಶಯ ಭರ್ತಿಯಾಗುವುದರಲ್ಲಿ ಯಾವುದೇ ಸಂಶವಿಲ್ಲ, ಆಗಾಗಿ ಕಾಲುವೆಗಳಿಗೆ ನೀರು ಬರುವ ಮೂಲಕ ತಡವಾದರೂ ಸಹಿತ ಮುಂಗಾರು ಹಂಗಾಮಿನ ಭತ್ತದ ನಾಟಿಗೆ ಅನುಕೂಲವಾಗಲಿದೆ ಎಂದು ರೈತರು ಸಂತಸ ಪಡುತ್ತಿದ್ದಾರೆ. ಮಳೆಯು ಹೀಗೆಯೇ ಮುಂದುವರೆಯಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.ಸಂಜೆಯಾದರೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಾಲ್ಲೂಕಿನಲ್ಲಿ ಅಲ್ಲಲ್ಲಿ ವಿದ್ಯುತ್ ಸ್ಥಗಿತವಾಗಿರುವುದು ಕಂಡು ಬಂತು. ಆದರೆ ತಾಲ್ಲೂಕಿನಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲವೆಂದು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ