ನೀರು ಬಿಡಲು ಆಗ್ರಹ ಮಾಡಿದ್ದೇವೆ;ಪುರುಷೋತ್ತಮಗೌಡ
ಬಳ್ಳಾರಿ:ಹಾಲಿ ಐಸಿಸಿ ಸಮಿತಿ ಇಲ್ಲದ ಕಾರಣ ಮೂರೂ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿದ್ದು, ಆ.1ರಿಂದ ನೀರು ಬಿಡಿಸುವ ಭರವಸೆಯನ್ನು ಮೂವರೂ ಸಚಿವರು ನೀಡಿದ್ದಾರೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಜೊತೆ ಮಾತುಕತೆ ಮಾಡಿ, ಜಲಾಶಯದಲ್ಲಿ ನೀರು ಶೇಖರಣೆ ಆಗಿದೆ. ಇನ್ನೂ ಉತ್ತಮ ಮಳೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೊದಲ ಬೆಳೆಗೆ ನೀರು ಕೊಡಿಸಲು ಆಗ್ರಹ ಮಾಡಲಾಗಿದೆ. ಇದನ್ನು ಸಚಿವರು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ನಾಟಿಗೆ ಸಿದ್ಧರಾಗಿರಬೇಕು ಎಂದು ಅವರು ಮನವಿಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ