ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಗೌರವ ಸದಸ್ಯರಿಗೆ `ವಾಣಿಜ್ಯರತ್ನ' ಪ್ರಶಸ್ತಿ

ಬಳ್ಳಾರಿ:ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಆಗಸ್ಟ್ ೧ ರಂದು ಪ್ರದಾನ ಮಾಡುವ `ವಾಣಿಜ್ಯ ರತ್ನ' ಪ್ರಶಸ್ತಿಯು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಆಜೀವ ಸದಸ್ಯ ಶ್ರೀ ಸಾಯಿ ಗಣೇಶ ಕಾಟನ್ ಮಿಲ್ನ ವ್ಯವಸ್ಥಾಪಕ ನಿರ್ದೇಶಕ ಪಿ. ದೊಡ್ಡಬಸನಗೌಡ ಅವರಿಗೆ ಲಭಿಸಿದೆ.


ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷ ವಿನಯ ಜೆ. ಜವಳಿ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ ಮತ್ತು ಸಂಸ್ಥಾಪಕ ದಿನಾಚರಣೆ ಸಮಿತಿ ಚೇರಮೆನ್ ದೀಪಕ್ ಪಾಟೀಲ್ ಅವರು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಆಗಸ್ಟ್ ೧ರ ಮಂಗಳವಾರ ಸಂಜೆ ೫ ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯು ನಾಡಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈ ಸಂಸ್ಥೆ ನೀಡುವ `ವಾಣಿಜ್ಯ ರತ್ನ' ಪ್ರಶಸ್ತಿಯು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾನ್ವಿತ ಸದಸ್ಯರಿಗೆ ಸಿಕ್ಕಿರುವುದು ಸಂತೋಷದ ವಿಷಯ ಮತ್ತು ನಮ್ಮ ಸಂಸ್ಥೆಯ ಪ್ರತಿಷ್ಠೆಯನ್ನು ಹೆಚ್ಚಿಸಿದಂತಾಗಿದೆ ಎಂದು ಅಧ್ಯಕ್ಷ ಸಿ. ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಅವರು ಸಂತೋಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

`ವಾಣಿಜ್ಯರತ್ನ' ಪ್ರಶಸ್ತಿ ಪುರಸ್ಕೃತರಾಗಿರುವ ಪಿ. ದೊಡ್ಡಬಸವನಗೌಡ ಅವರಿಗೆ ಹಿರಿಯ ಉಪಾಧ್ಯಕ್ಷ ಬಿ. ಮಹಾರುದ್ರಗೌಡ, ಉಪಾದ್ಯಕ್ಷರುಗಳಾದ ಎ.ಮಂಜುನಾಥ, ಕೆ. ರಮೇಶ್ ಬುಜ್ಜಿ, ಕೆ.ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಸೊಂತ ಗಿರಿಧರ, ಖಜಾಂಚಿ ಪಿ. ಪಾಲಣ್ಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ, ಟಿ. ಶ್ರೀನಿವಾಸ್ ರಾವು (ವಾಸು), ವಿ. ರಾಮಚಂದ್ರ,  ನಾಗಳ್ಳಿ ರಮೇಶ್, ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ಎನ್. ನಾಗರಾಜ್, ಟಿ. ಶ್ರೀನಿವಾಸ್ ರಾವು, ಎಸ್. ಜಿತೇಂದ್ರ ಪ್ರಸಾದ್, ಬಿ. ಮೌಲಾಲಿ, ಜೆ. ಶ್ರೀಧರ, ವಿ. ವೆಂಕಟೇಶಲು,  ಸಿ. ಚಂದ್ರಶೇಖರ್, ಡಾ. ಎಂ.ಸಿ. ಮಲ್ಲಿಕಾರ್ಜುನಗೌಡ, ಪಿ. ಗಿರೀಶ, ವಿಕ್ರಂ ಪೋಲ, ಬಂಗಾರ ಆರ.ಜಿ. ಪ್ರಭು, ಡಾ. ಡಿ.ಎಲ್. ರಮೇಶಗೋಪಾಲ್, ಜಿ. ಗೋಪಾಲಕೃಷ್ಣ, ವಿ. ರವಿಕುಮಾರ, ಯು. ಗೋವಿಂದರೆಡ್ಡಿ, ಸತ್ಯಬಾಬು .ಬಿ, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಹಾಗೂ ಸರ್ವ ಆಜೀವ ಸದಸ್ಯರು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ