ಭದ್ರಾ ಜಲಾಶಯದ ಒಳ ಹರಿವು ಇಳಿಕೆ
ದಾವಣಗೆರೆ:ಭದ್ರಾ ಜಲಾಶಯದ ಒಳ ಹರಿವಿನಲ್ಲಿ ಇಳಿಕೆ ಆಗಿದೆ. ನಿನ್ನೆ 31425 ಕ್ಯೂಸೆಕ್ ಇದ್ದ ಹರಿವು ಇದು 24704 ಕ್ಯೂಸೆಕ್ ಗೆ ಇಳಿದಿದೆ.
ನಿನ್ನೆ ಒಂದೇ ದಿನ 2 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ. ನಿನ್ನೆ ಬೆಳಗಿನ ಜವ 36.53 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದು 38.64 ಎಟಿಎಂಸಿ ನೀರು ಸಂಗ್ರಹ ಆಗಿದೆ.
186 ಅಡಿ ಎತ್ತರದ 71.53 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಹಾಲಿ 155 ಅಡಿ 3 ಇಂಚು ತುಂಬಿದೆ. ಇನ್ನು 33 ಅಡಿ ಬಾಕಿ ಇದೆ. ಇಂದು ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಮತ್ತೆ ನೀರಿನ ಹರಿವು ಹೆಚ್ಚಳ ಆಗುವ ಸಾಧ್ಯತೆ ಇದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ