ಎಟಿಎಂನಲ್ಲಿ ಹಣ ಹಾಕುವವರು ಎಚ್ಚರ ವಹಿಸಿ!
ದಾವಣಗೆರೆ:ಎಟಿಎಂನ ಡೆಪಾಸಿಟ್ ಮೆಷಿನ್‌ನಲ್ಲಿ ಹಣ ಇಟ್ಟು ಡೆಪಾಸಿಟ್ ಬಟನ್ ಒತ್ತಲು ಮರೆತ ಕಾರಣ ೫೨ ಸಾವಿರ ರೂ.ಗಳನ್ನು ಕಳೆದುಕೊಂಡ ಘಟನೆ ನಗರದ ರಿಲಯನ್ಸ್ ಮಾರ್ಟ್ ಬಳಿ ನಡೆದಿದೆ. ವಿಜಯ ಎಂಬುವವರು ಹಣ ಕಳೆದುಕೊಂಡಿದ್ದಾರೆ. ತಮ್ಮ ಅಂಗಡಿ ಸಹಾಯಕ ರಾಘವೇಂದ್ರ ಜೊತೆ ಎಟಿಎಂ ಡೆಪಾಸಿಟರ್ ಮೂಲಕ ಹಣ ಹಾಕಲು ಐಸಿಐಸಿಐಸಿಐ ಬ್ಯಾಂಕ್‌ಗೆ ತೆರಳಿದ್ದಾರೆ.
ಡೆಪಾಸಿಟ್ ಬಾಕ್ಸ್ನಲ್ಲಿ ಹಣ ಇರಿಸಿ, ಡೆಪಾಸಿಟ್ ಬಟನ್ ಒತ್ತುವುದನ್ನು ಮರೆತು, ಮನೆಗೆ ಹೋಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಚಾಲಾಕಿ, ಡೆಪಾಸಿಟರ್‌ನಲ್ಲಿ ಇದ್ದ ಹಣ ತೆಗೆದುಕೊಂಡು ಮೆಲ್ಲಗೆ ಅಲ್ಲಿಂದ ಕಾಲು ಕಿತ್ತಿದ್ದಾನೆ. ಈ ಕುರಿತು ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣ ಕದಿಯುವ ದೃಶ್ಯ, ಕದ್ದಾತನ ಫೋಟೊ ಎಲ್ಲವೂ ಲಭ್ಯ ಇದ್ದರೂ ಪೊಲೀಸರು ಕಳ್ಳನನ್ನು ಹುಡುಕಲು ಯಶ ಕಂಡಿಲ್ಲ!
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಒಮ್ಮೆ ನೋಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ