ಕಬ್ಬೂರು ಈಗ ಹಿಂದುಳಿದ ವರ್ಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರು
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ದಾವಣಗೆರೆಯ ಮಲ್ಲಿಕಾರ್ಜುನ್ ಕಬ್ಬೂರು ಹಾಗೂ ಕಾರ್ಯಾಧ್ಯಕ್ಷರಾಗಿ ಬೆಳಗಾವಿಯ ರಾಜು ನದಾಫ್ ಅವಿರೋಧ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ವರ್ತಾ ಇಲಾಖೆಯ ಸಭಾಂಗಣದಲ್ಲಿ ಬುಧವಾರ ನಡೆದ ಹಿಂದುಳಿದ ವರ್ಗಗಳ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಸಂಪಾದಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ರಾಮನಗರದ ಮತ್ತಿಕೆರೆ ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಡ್ಯದ ಶಿವಪ್ರಕಾಶ್ ಎಂ.ಎಸ್. ಆಯ್ಕೆಯಾಗಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ಕಬ್ಬೂರು ಮಾತನಾಡಿ,
ಅಧ್ಯಕ್ಷ ಹುದ್ದೆ ಪದವಿಯಲ್ಲ, ಇದೊಂದು ಜವಾಬ್ದಾರಿಯಾಗಿದೆ. ಹಿಂದುಳಿದ ವರ್ಗದ ಪತ್ರಿಕೆಗಳ ಏಳಿಗೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಕ್ಕಾಗಿ ಸಂಘ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಗೌರವಾಧ್ಯಕ್ಷ ಮತ್ತಿಕೆರೆ ಜಯರಾಮ್ ಮಾತನಾಡಿ, ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದುಳಿದ ವರ್ಗದ ಸಂಪಾದಕರು ಒಂದಾಗಿ ಧ್ವನಿ ಎತ್ತಿದಾಗ ಮಾತ್ರ ಸರ್ಕಾರದ ಸಹಕಾರ ದೊರೆಯುತ್ತದೆ ಎಂದರು.
ಕಲಬುರುಗಿಯ ಸಿದ್ದಣ್ಣ ಮಾಲಗಾರ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಶಿವಮೊಗ್ಗದಿಂದ ಪದ್ಮನಾಭ, ರೋಹಿತ್ ಎಸ್.ಆರ್., ಮಂಜುನಾಥ್, ಬಾಗಲಕೋಟೆ ಮುರುಗೇಶ್ ಅಳಗವಾಡಿ, ವಿಜಯಪುರದ ಅವಿನಾಶ ಬಿದರಿ, ರಾಮನಗರದ ಡಿ.ಎಂ. ಮಂಜುನಾಥ್, ಮಂಡ್ಯದ ಕೆ.ಸಿ. ಮಂಜುನಾಥ್, ಎ.ಸಿ. ಶೇಖರ್, ಕೆ.ಎನ್. ನವೀನ್ ಕುಮಾರ್, ಎ.ಎಲ್. ಬಸವೇಗೌಡ, ಬೆಳಗಾವಿ ಸುರೇಶ್ ನೇರ್ಲಿ ಇತರರು ಇದ್ದರು.
ಒಬಿಸಿ ಜಾಹೀರಾತು ನೀಡಲು ಕೆ.ವಿ. ಪ್ರಭಾಕರ್ ಸೂಚನೆ
ಒಬಿಸಿ ಸಂಪಾದಕರ ಸಂಘದಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ,
ಒಬಿಸಿ ಪತ್ರಿಕೆಗಳಿಗೆ ಜುಲೈ ತಿಂಗಳಿಂದ ಪ್ರೋತ್ಸಾಹ ಎರಡು ಪುಟ ಜಾಹೀರಾತು ನೀಡುವಂತೆ ವಾರ್ತಾ ಇಲಾಖೆ ಕಾರ್ಯರ್ಶಿ ಎನ್. ಜಯರಾಮ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ ಸೂಚಿಸಿದರು.
ಕಾಂಗ್ರೆಸ್ ಸರ್ಕಾರ ಸಣ್ಣ ಪತ್ರಿಕೆಗಳ ಹಿತ ಕಾಯಲಿದೆ ಎಂದು ಭರವಸೆ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ