ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು ಜಯ ಕರ್ನಾಟಕ ಸಂಘಟನೆ ವತಿಯಿಂದ ಮನವಿ



ದಾವಣಗೆರೆ:ಹಲವು ವರ್ಷಗಳಿಂದ ಹರಿಹರ ತಾಲೂಕು  ಹರಿಹರದಿಂದ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಮಾಕನೂರು ಕ್ರಾಸ್ ವಡೇರಾಯನಹಳ್ಳಿ ಹುಲಿಕಟ್ಟಿ ನದಿ ಹರಳಹಳ್ಳಿ ಐರಣಿ. ಹಿರೇಬಿದರಿ ಗ್ರಾಮಗಳ ಮಾರ್ಗಕ್ಕೆ  ಕಡಿಮೆ ಬಸ್ ಸಂಚಾರ ಇದ್ದು ಈ ಭಾಗದಿಂದ ದಿನನಿತ್ಯ ಪ್ರಯಾಣಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು ಪ್ರತಿದಿನ ಈ ಗ್ರಾಮದಿಂದ ಹರಿಹರಕ್ಕೆ ವಿದ್ಯಾಭ್ಯಾಸಕ್ಕೆಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪ್ರತಿದಿನ ಹಳ್ಳಿಗಳಿಂದ ನಗರಕ್ಕೆ ಬರುವುದು  ಹೆಚ್ಚು ಇದ್ದು ಈ ಕೂಡಲೇ ಈ ಭಾಗದ ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಕೂಲಿ ಕೆಲಸಕ್ಕೆ ಬರುವವರಿಗೆ ನೌಕರಿಗೆ ಸರ್ಕಾರಿ/ ಖಾಸಗಿ ನೌಕರರಿಗೆ ಹೆಚ್ಚಿನ  ಬಸ್ಸಿನ ಸೌಲಭ್ಯ ಕಲ್ಪಿಸಿದಲ್ಲಿ  ಅನುಕುಲಕರವಾಗುತ್ತದೆ  ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಇಂದು ಹರಿಹರ ಘಟಕದಲ್ಲಿ  ಮನವರಿಕೆ ಮಾಡಿದರು   ಒಂದು ವಾರದೊಳಗಾಗಿ ನಮ್ಮ ಮನವಿಯನ್ನು ಪುರಸ್ಕರಿಸಿ ಈಡೇರಿಸಬೇಕು ಎಂದು ಒತ್ತಾಯಿಸಿದರು ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿರುದ್ಧ ಹಾಗು ರಾಜ್ಯ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ  ಮಾಡಲಾಗುವುದು ಎಂದು  ಜಯ ಕರ್ನಾಟಕ ಸಂಘಟನೆ ವತಿಯಿಂದ ಎಚ್ಚರಿಸಲಾಯಿತು ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲ್ಲುಕು  ಅಧ್ಯಕ್ಷರಾದ ಎಸ್  ಗೋವಿಂದ್ ತಾಲೂಕು ಖಜಾಂಚಿ ಮತ್ತು ವಿದ್ಯಾರ್ಥಿ ಘಟಕದ ಅಧ್ಯಕ್ಷರು ಶ್ರೀನಿವಾಸ್  ವಿಜಯ್ ಪೈ ಮಂಜುನಾಥ್ ಎಂ ಕಿಟ್ಟ ಶಿವರಾಜ್ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಾದ ಮಂಜುನಾಥ್ ಎಂ ಗಣೇಶ ಎಚ್ ಎನ್ ವಿಕಾಸ್ ಎಂಬಿ ಪ್ರದೀಪ್ ಎಂಬಿ ನಿಸರ್ಗ ಬಿಬಿ ಜ್ಯೋತಿ ಎಂ ಬಿ ಕೆಂಚಮ್ಮ ಪವಿತ್ರ ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ