ಜಂಗಮ ಸಮಾಜದ ಯುವ ಘಟಕದ ಅಧ್ಯಕ್ಷ ರಾಗಿ ಸಿದ್ದಯ್ಯ ಹೆಸರೂರು ಹಿರೇಮಠ ಆಯ್ಕೆ
ಮಸ್ಕಿ: ಜಗದ್ಗುರು ರೇಣುಕಾಚಾರ್ಯ ಜಂಗಮ ಯುವ ಸಮಿತಿಯ ನಗರ ಯುವ ಘಟಕದ ನೂತನ , ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಜಂಗಮ ಸಮಾಜದ ಹಿರಿಯ ಮುಖಂಡರು ತಿಳಿಸಿದ್ದಾರೆ.
ಪಟ್ಟಣದ ಗಚ್ಚಿನಮಠದಲ್ಲಿ ಈಚೆಗೆ ಜಂಗಮ ಸಮಾಜದ ಮುಖಂಡರು ಸಭೆ ನಡೆಸಿ ಸರ್ವಾನುಮತದಿಂದ ಜಗದ್ಗುರು ರೇಣುಕಾಚಾರ್ಯ ಜಂಗಮ ನಗರ ಯುವ ಘಟಕದ ನೂತನ ಅಧ್ಯಕ್ಷರಾಗಿ ಸಿದ್ದಯ್ಯಸ್ವಾಮಿ ಹೆಸರೂರು, ಉಪಾಧ್ಯಕ್ಷರಾಗಿ ಅಮರೇಶ ಸಾಲಿಮಠ, ಗಂಗಾಧರ ಕಂಬಾಳಿಮಠ, ಗೌರವಾಧ್ಯಕ್ಷರಾಗಿ
ಶಂಭುಲಿಂಗಯ್ಯಸ್ವಾಮಿ ಕಂಬಾಳಿಮಠ,ಅಮರೇಶ್ ಸೊಪ್ಪಿಮಠ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ ಪದಾಧಿಕಾರಿಗಳನ್ನು ಶೀಘ್ರದಲ್ಲಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಿರಿಯ ಮುಖಂಡರಾದ ಡಾ.ಪಂಚಾಕ್ಷರಯ್ಯ ಹಿರೇಮಠ, ಕರಿಬಸಯ್ಯ ಸಿಂಧನೂರುಮಠ, ಸಿದ್ದಲಿಂಗಯ್ಯ ಸೊಪ್ಪಿಮಠ, ಆದಯ್ಯಸ್ವಾಮಿ ಕ್ಯಾಪ್ಟಟ್ಟಿ, ತಿಪ್ಪಯ್ಯಸ್ವಾಮಿ ಸಾಲಿಮಠ, ಶರಣಬಸವ ಹಿರೇಮಠ, ಶರಣಬಸವ ಸೊಪ್ಪಿಮಠ, ವೀರೇಶ ಪಾಟೀಲ್, ಶಿವಕುಮಾರ, ನಾಗರಾಜ ಸೇರಿದಂತೆ ಇನ್ನಿತರರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ